ಕೋಲ್ಕತಾ ಲಸಿಕೆ ಹಗರಣ-ಕೇಂದ್ರದ ತನಿಖೆ ನಡೆಸಿ; ಆರೋಗ್ಯ ಸಚಿವರಿಗೆ ಸುವೇಂದು ಪತ್ರ
ಅಧಿಕಾರಿಗಳ ಸಹಭಾಗಿತ್ವ ಇಲ್ಲದೇ ಹಗರಣ ನಡೆಯಲು ಸಾಧ್ಯವಿಲ್ಲ
Team Udayavani, Jun 26, 2021, 12:45 PM IST
ಕೋಲ್ಕತಾ:ಕೋಲ್ಕತಾದ ಲಸಿಕೆ ಹಗರಣವನ್ನು ಕೇಂದ್ರ ತನಿಖಾ ಏಜೆನ್ಸಿ ಮೂಲಕ ತನಿಖೆ ನಡೆಸಬೇಕು ಎಂದು ಪಶ್ಚಿಮಬಂಗಾಳ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರಿಗೆ ಪತ್ರ ಬರೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮುಂದಿನ ಚುನಾವಣೆ ಎದುರಿಸಲು ಸನ್ನದ್ಧರಾಗಿ: ಪಕ್ಷದ ಮುಖಂಡರಿಗೆ ಕರೆ ನೀಡಿದ ಸಿಎಂ ಬಿಎಸ್ ವೈ
ನಗರಪಾಲಿಕೆಯ ಉನ್ನತ ಅಧಿಕಾರಿಗಳ ಶಾಮೀಲಾತಿ ಇಲ್ಲದೆ ಈ ಲಸಿಕೆ ಹಗರಣ ನಡೆಯಲು ಸಾಧ್ಯವಿಲ್ಲ ಎಂದು ಆರೋಪಿಸಿರುವ ಸುವೇಂದು ಅಧಿಕಾರಿ, ಈ ಬಗ್ಗೆ ಕೇಂದ್ರ ತನಿಖಾ ಏಜೆನ್ಸಿ ತನಿಖೆ ನಡೆಸಲಿ ಎಂದು ಸಚಿವರಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ಹೇಳಿದೆ.
ಮುಖ್ಯವಾದ ಪ್ರಶ್ನೆಯೆಂದರೆ ಆರೋಪಿಗಳು ನಿಜವಾಗಿಯೂ ಕೋವಿಡ್ ಶೀಲ್ಡ್ ಲಸಿಕೆ ಎಂದು ಹೇಳಿಕೊಂಡಿದ್ದರೆ, ಆಗ ಇದು ಸರ್ಕಾರಿ ದಾಸ್ತಾನಿನಿಂದ ಕೋವಿಡ್ ಲಸಿಕೆಯನ್ನು ಮಾರಾಟ ಮಾಡಿರುವ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಅಲ್ಲದೇ ಇದು ಉನ್ನತ ಅಧಿಕಾರಿಗಳ ಸಹಭಾಗಿತ್ವ ಇಲ್ಲದೇ ಹಗರಣ ನಡೆಯಲು ಸಾಧ್ಯವಿಲ್ಲ ಎಂದು ಸುವೇಂದು ಅಧಿಕಾರಿ ಬರೆದ ಪತ್ರದಲ್ಲಿ ದೂರಿದ್ದಾರೆ.
ಒಂದು ವೇಳೆ ಅವುಗಳು ಕೋವಿಶೀಲ್ಡ್ ಲಸಿಕೆಗಳಲ್ಲದಿದ್ದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡುವಿಕೆ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಕೂಡಲೇ ತನಿಖೆ ನಡೆಯಲಿ ಎಂದು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಾಜ್ ಮಹಲ್ ಅಡಿಯಲ್ಲಿ ಪ್ರಧಾನಿಯ ಡಿಗ್ರಿ ಹುಡುಕುತ್ತಿದ್ದಾರೆ: ಓವೈಸಿ ವ್ಯಂಗ್ಯ
ಕೇದಾರನಾಥದ ಕಸದ ರಾಶಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ವಿಜ್ಞಾನ ವಿಸ್ಮಯ: 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣ ಬೆಳವಣಿಗೆ !!
ಪಾಕ್ ಗಡಿಯಲ್ಲಿ ಬಾಂಬ್, ಗ್ರೆನೇಡ್ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ
ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್ ರೈಲುಗಳಿಗೆ ಕಲ್ಲು ತೂರಾಟ!