ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲುವು: ಶಾಸಕ‌ ಪಿ.ರಾಜೀವ್

Team Udayavani, Nov 14, 2019, 3:33 PM IST

ಕಲಬುರಗಿ: ಉಪಚುನಾವಣೆಯ‌ ಎಲ್ಲ 15 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ತಾಂಡಾ ಅಭಿವೃದ್ಧಿ ನಿಗಮ ಅಧ್ಯಕ್ಷ‌, ಕುಡಚಿ ಶಾಸಕ‌ ಪಿ.ರಾಜೀವ್ ಹೇಳಿದರು.‌

ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದ ಸರ್ಕಾರ ಮುಂದುವರೆಯಬೇಕೆಂದು ರಾಜ್ಯದ ಜನತೆ‌ ಬಯಸುತ್ತಿದ್ದಾರೆ. ಹೀಗಾಗಿ 15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದು ಶತಸಿದ್ಧ. ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪನವರು ಅಧಿಕಾರವನ್ನು ಪೂರೈಸುತ್ತಾರೆ ಎಂದರು.

ಬಿಜೆಪಿಯ ಟಿಕೆಟ್ ಸಿಗದ ವಂಚಿತರ ಬಂಡಾಯದಿಂದ ಪಕ್ಷಕ್ಕೆ ಯಾವುದೆ ತೊಂದರೆ ಆಗಲ್ಲ‌. ಕಮಲದ ಚಿಹ್ನೆಯಡಿ ಯಾರು ನಿಲ್ಲುತ್ತಾರೋ ಅವರನ್ನು ಮಾತ್ರ ಬಿಜೆಪಿ ಕಾರ್ಯಕರ್ತರು ಗೆಲ್ಲಿಸಿ ಕೊಡುತ್ತಾರೆ. ಶರತ್ ಬಚ್ಚೇಗೌಡ ಸ್ವಾರ್ಥಕ್ಕಾಗಿ ಪಕ್ಷವನ್ನು ಬಳಸಿಕೊಂಡು ಚುನಾವಣೆಗೆ ಸ್ಪರ್ಥಿಸುತ್ತಿದ್ದಾರೆ. ಸಮುದ್ರಕ್ಕೆ ಹೊಂದಿಕೊಳ್ಳದ ಕಸವನ್ನು ಸಮುದ್ರ ಹೇಗೆ ಹೊರ ಹಾಕುತ್ತೋ, ಹಾಗೆ ಬಿಜೆಪಿ ಪಕ್ಷಕ್ಕೆ ಹೊಂದಿಕೊಳ್ಳದವರು ಪಕ್ಷದಿಂದ ಹೊರ ಹೊಗುತ್ತಾರೆ ಎಂದು ಕಿಡಿಕಾರಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ