ಡಿ ಕಾಕ್, ಸೂರ್ಯಕುಮಾರ್ ಉತ್ತಮ ಆಟ: ಡೆಲ್ಲಿಯನ್ನು ಮಣಿಸಿದ ಮುಂಬೈ
Team Udayavani, Oct 11, 2020, 11:09 PM IST
ಅಬುಧಾಭಿ : ಡಿ ಕಾಕ್, ಸೂರ್ಯಕುಮಾರ್ ಉತ್ತಮ ಆಟದೊಂದಿಗೆ ಡೆಲ್ಲಿ ತಂಡವನ್ನು ಮುಂಬೈ ಇಂಡಿಯನ್ಸ್ ತಂಡ ಮಣಿಸಿ ಐದು ವಿಕೆಟ್ ಗಳ ಗೆಲುವನ್ನು ಸಾಧಿಸಿತು.
ಮುಂಬೈ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದಕೊಂಡ ಶ್ರೇಯಸ್ ಪಡೆ ನಿಗದಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 162 ಪೇರಿಸಿ ಮುಂಬೈಗೆ 163 ರ ಗುರಿಯನ್ನು ನೀಡಿತ್ತು, ಆದರೆ ಮುಂಬೈ ತಂಡದ ಡಿ ಕಾಕ್ ಹಾಗೂ ಸೂರ್ಯಕುಮಾರ್ ಅರ್ಧ ಶತಕದ ಆಟದೊಂದಿಗೆ ಉತ್ತಮ ಪ್ರದರ್ಶನ ನೀಡಿದರು.
ರೋಹಿತ್ ಶರ್ಮ 5 ರನ್ ಗಳಿಸಿ ಔಟ್ ಆದರೆ, ನಂತರ ಬಂದಸೂರ್ಯಕುಮಾರ್ ಯಾದವ್ (53) ಹಾಗೂ ಡಿ ಕಾಕ್(53) ಉತ್ತಮ ಜೊತೆಯಾಟ ಪ್ರದರ್ಶಿಸಿದರು. ನಂತರ ಬಂದ ಇಶಾನ್ ಕಿಶನ್ 28 ರನ್ ಗಳಿಸಿ ಔಟಾದರು, ಪೊಲಾರ್ಡ್ 11 ಹಾಗೂ ಕೃಣಾಲ್ ಪಾಂಡ್ಯ 12 ಅವರ ಜೊತೆಯಾಟದಲ್ಲಿ ಮುಂಬೈ ಗೆಲುವಿನ ಹಾದಿ ಹಿಡಿಯುವಲ್ಲಿ ಯಶಸ್ವಿಯಾಯಿತು.