
ಪುತ್ತೂರು: ನಗರಸಭಾ ಸದಸ್ಯ ಆತ್ಮಹತ್ಯೆ
Team Udayavani, Mar 16, 2023, 3:11 PM IST

ಪುತ್ತೂರು: ನಗರಸಭಾ ಸದಸ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ.16 ರಂದು ನಡೆದಿದೆ.
ಊರಮಾಲು ನಿವಾಸಿ, ಬಿಜೆಪಿ ಬೆಂಬಲಿತ ಸದಸ್ಯ, ನಗರಸಭೆಯ ಒಂದನೇ ವಾರ್ಡ್ ಸದಸ್ಯರಾಗಿದ್ದ ಶಿವರಾಮ ಸಪಲ್ಯ ಆತ್ಮಹತ್ಯೆ ಮಾಡಿಕೊಂಡಾತ.
ಅವರು ಸಾಲ್ಮರ ಸಮೀಪದ ಉರಮಾಲಿನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಪತಿಯು ಫೋನ್ ಕರೆ ಸ್ವೀಕರಿಸುತ್ತಿಲ್ಲವೆಂದು ಪತ್ನಿಯು ಪಕ್ಕದ ಮನೆಯವರಲ್ಲಿ ತಮ್ಮ ಮನೆಗೆ ತೆರಳುವಂತೆ ತಿಳಿಸಿದ್ದು, ಈ ವೇಳೆ ಅವರು ಮನೆ ಬಳಿ ತೆರಳಿ ನೋಡಿದಾಗ ಶಿವರಾಮ್ ರವರು ನೇಣು ಬಿಗಿದುಕೊಂಡಿದ್ದರು ಎಂದು ವರದಿಯಾಗಿದೆ.
ಟಾಪ್ ನ್ಯೂಸ್
