ಅಫ್ಘಾನಿಸ್ಥಾನ ಟಿ20 ತಂಡಕ್ಕೆ ರಶೀದ್ ಖಾನ್ ನಾಯಕ
Team Udayavani, Jul 6, 2021, 10:33 PM IST
ಕಾಬುಲ್ : ಅಫ್ಘಾನಿಸ್ಥಾನ ಟಿ20 ತಂಡಕ್ಕೆ ನೂತನ ನಾಯಕರಾಗಿ ರಶೀದ್ ಖಾನ್ ಆಯ್ಕೆಯಾಗಿದ್ದಾರೆ. ನಜೀಬುಲ್ಲ ಜದ್ರಾನ್ ಉಪನಾಯಕರಾಗಿದ್ದಾರೆ. ಅಫ್ಘಾನಿಸ್ಥಾನ್ ಕ್ರಿಕೆಟ್ ಮಂಡಳಿ ಮಂಗಳವಾರ ಈ ಆಯ್ಕೆಯನ್ನು ಪ್ರಕಟಿಸಿತು.
“ತಂಡದ ನಾಯಕನನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಜತೆಗೆ ಜವಾಬ್ದಾರಿಯೂ ಹೆಚ್ಚಿದೆ. ನನ್ನ ನಾಯಕತ್ವದಲ್ಲಿ ತಂಡದ ಯಶಸ್ಸಿಗೆ ಶಕ್ತಿಮೀರಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ’ ಎಂದು ರಶೀದ್ ಖಾನ್ ಹೇಳಿದ್ದಾರೆ.