ಡಿಡಿಸಿ ಚುನಾವಣೆ ಪ್ರತ್ಯೇಕತವಾದಿಗಳಿಗೆ ಹಿನ್ನಡೆ: ಸಚಿವ ರವಿಶಂಕರ ಪ್ರಸಾದ್‌

ಭಯೋತ್ಪಾದಕರ ನಂಬಿಕೆಯನ್ನು ಜನರು ಸುಳ್ಳಾಗಿಸಿದ್ದಾರೆ ಎಂದರು.

Team Udayavani, Dec 24, 2020, 10:35 AM IST

ಡಿಡಿಸಿ ಚುನಾವಣೆ ಪ್ರತ್ಯೇಕತವಾದಿಗಳಿಗೆ ಹಿನ್ನಡೆ: ಸಚಿವ ರವಿಶಂಕರ ಪ್ರಸಾದ್‌

ಹೊಸದಿಲ್ಲಿ/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು
ಪ್ರತ್ಯೇಕತಾವಾದಿಗಳಿಗೆ, ಭಯೋತ್ಪಾದಕರಿಗೆ ಆಗಿರುವ ಹಿನ್ನಡೆ. ಹೀಗೆಂದು ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಬುಧ ವಾರ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ಹಲವು ರೀತಿಯ ಅಭಿವೃದ್ಧಿ ಕಾಮಗಾರಿಗಳನ್ನು ಜನರು ಬೆಂಬಲಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

ಚುನಾವಣೆಯಲ್ಲಿ ಬಿಜೆಪಿ 74 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿದೆ. ಜತೆಗೆ 4.5 ಲಕ್ಷ ಮತಗಳನ್ನು ಪಡೆದಿದೆ. ಇದು ನ್ಯಾಶ ನಲ್‌ ಕಾನ್ಫರೆನ್ಸ್‌ ಪಡೆದ ಮತಗಳಿಗಿಂತ ಹೆಚ್ಚು ಎಂದು ಪ್ರಸಾದ್‌ ವಿವರಿಸಿದ್ದಾರೆ.

ಜಮ್ಮು ವಲಯದಲ್ಲಿ ಬಿಜೆಪಿ ಗೆದ್ದ ಬಗ್ಗೆ ಮಾತನಾಡಿದ ಅವರು “ಕಣಿವೆಯಲ್ಲಿ ನಮ್ಮ ಪಕ್ಷ ಹೆಚ್ಚಿನ ಸಾಧನೆ ಮಾಡಿದೆ ಉಗ್ರ ಚಟುವಟಿಕೆಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಕೂಡ ಹೆಚ್ಚಿನ ಸ್ಥಾನಗಳನ್ನು ಗೆದ್ದಿದೆ. ಸೋಪುರ್‌, ಪುಲ್ವಾಮಾ, ಶೋಪಿಯಾನ್‌, ಗಂಡರ್‌ಬಾಲ್‌ಗ‌ಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ ಎಂದರು. ಭಯೋತ್ಪಾದಕರ ನಂಬಿಕೆಯನ್ನು ಜನರು ಸುಳ್ಳಾಗಿಸಿದ್ದಾರೆ ಎಂದರು.

ಇದೇ ವೇಳೆ 278 ಡಿಡಿಸಿಗಳ ಫ‌ಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ ಪೀಪಲ್ಸ್‌ ಅಲಯನ್ಸ್‌ ಪಾರ್‌ ಗುಪ್ಕಾರ್‌ ಡೆಕ್ಲರೇಷನ್‌ (ಪಿಎಜಿಡಿ)ಗೆ 110, ಬಿಜೆಪಿಗೆ 75, ಅಪ್ನಿ ಪಾರ್ಟಿಗೆ 12, ಸ್ವತಂತ್ರರು 50, ಕಾಂಗ್ರೆಸ್‌ 26, ಪಿಡಿಎಫ್, ನ್ಯಾಶನಲ್‌ ಪ್ಯಾಂಥರ್ಸ್‌ ಪಾರ್ಟಿ ತಲಾ 2, ಬಿಎಸ್‌ಪಿ 1 ಸ್ಥಾನದಲ್ಲಿ ಜಯಗಳಿಸಿದೆ. ಗಮನಾರ್ಹ ಅಂಶವೆಂದರೆ ಈ ವರ್ಷವೇ ಸ್ಥಾಪನೆಗೊಂಡ ಅಪ್ನಿ ಪಾರ್ಟಿ 12 ಸ್ಥಾನಗಳನ್ನು ಗಳಿಸಿದ್ದು.ಪಿಎಜಿಡಿ ಪಕ್ಷಗಳ ಪೈಕಿ ನ್ಯಾಶನಲ್‌ ಕಾನ್ಫರೆನ್ಸ್‌ಗೆ 67, ಪಿಡಿಪಿ 27, ಪೀಪಲ್ಸ್‌ ಕಾನ್ಫರೆನ್ಸ್‌ಗೆ 8, ಸಿಪಿಎಂ 5, ಜೆ-ಕೆ ಪೀಪಲ್ಸ್‌ ಮೂವ್‌ ವೆಂಟ್‌ 3 ಸ್ಥಾನಗಳಲ್ಲಿ ಜಯ ಗಳಿಸಿದೆ. ಐದು ಪಕ್ಷಗಳಿಗೆ ಒಟ್ಟಾಗಿ 3.94 ಲಕ್ಷ ಮತಗಳು ಪ್ರಾಪ್ತಿಯಾಗಿವೆ.

ಐದರಲ್ಲಿ ಬಿಜೆಪಿಗೆ: ಸಂವಿಧಾನದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಎರಡು ವರ್ಷಗಳು ಕಳೆದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ 5 ಜಿಲ್ಲಾ ಅಭಿವೃದ್ಧಿ ಮಂಡಳಿಯಲ್ಲಿ ಬಹುಮತ ಸಾಧಿಸಿದೆ. ಪಿಎಜಿಡಿ 6ರಲ್ಲಿ ಬಹು ಮತ ಸಾಧಿಸಿಕೊಂಡಿದೆ. ಜಮ್ಮು ವಲಯದಲ್ಲಿ ಕಥುವಾ ಮತ್ತು ಸಾಂಬಾ, ಜಮ್ಮು ಮತ್ತು ಉಧಂಪುರ, ದೋಡಾ, ರಿಯಾಸಿಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ರಂಬಾನ್‌ ಮತ್ತು ಕಿಶ್ತ್ವಾರ‌ ಪ್ರದೇಶದಲ್ಲಿ ಪಿಎಜಿಡಿ ಪ್ರಭಾವ ಮೆರೆದಿದೆ.

50 ಕ್ಷೇತ್ರಗಳಲ್ಲಿ ಸ್ವತಂತ್ರರ ಜಯ
ಐವತ್ತು ಕ್ಷೇತ್ರಗಳಲ್ಲಿ ಸ್ವತಂತ್ರರು ಜಯಗಳಿಸಿದ್ದು ಈ ಚುನಾವಣೆಯ ಪ್ರಧಾನ ಅಂಶ. ಹೀಗಾಗಿ, ಹೆಚ್ಚಿನ ಸ್ಥಳಗಳಲ್ಲಿ ಅವರು ಅಧಿಕಾರ ಪಡೆದು ಕೊಳ್ಳಲಿರುವ ಪಕ್ಷಗಳಿಗೆ ಅವರನ್ನು ಅವಲಂಬಿಸುವ ಪರಿಸ್ಥಿತಿ ಬರಲಿದೆ. ವಿಶೇಷವಾಗಿ ಅತಂತ್ರವಾಗಿರುವ ಸ್ಥಳಗಳಲ್ಲಿ ಅವರು ಪ್ರಭಾವ ಬೀರಲಿದ್ದಾರೆ. ಬಿಜೆಪಿಯಿಂದ 2 ಬಾರಿ ಶಾಸಕರಾಗಿದ್ದ ಶಾಮ್‌ ಲಾಲ್‌ ಚೌಧರಿ ಅವರನ್ನು ಜಮ್ಮುವಿನ ಸಚೇತಗಡದಲ್ಲಿ ಸ್ವತಂತ್ರ ಅಭ್ಯರ್ಥಿ ತರಣ್‌ಜಿತ್‌ ಸಿಂಗ್‌ ಸೋಲಿಸಿದ್ದು ಬಹು ಮುಖ್ಯ ಫ‌ಲಿತಾಂಶ. ಈ ಚುನಾವಣೆಯಲ್ಲಿ ಏಳು ಮಂದಿ ಸಚಿವರೂ ಜಯ ಸಾಧಿಸಿದ್ದಾರೆ.

ಟಾಪ್ ನ್ಯೂಸ್

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

1-ff

ಬೆಂಗಳೂರಿನ ರಸ್ತೆ ಗುಂಡಿ: ಡೆಲಿವರಿ ಬಾಯ್ ಸಾವು; ಅಧಿಕಾರಿ ವಿರುದ್ಧವೇ ಕೇಸ್!

1-dddf

ಪರಿಷತ್ ಪ್ರಚಾರದಿಂದ ದೂರ : ಕಾರಣ ತಿಳಿಸಿದ ಸಂಸದ ಅನಂತಕುಮಾರ‌ ಹೆಗಡೆ

1-fewq3

ಆನ್ ಲೈನ್ ವಂಚನೆ : ವಿಜಯಪುರ ಪೊಲೀಸರಿಂದ ನೈಜೀರಿಯಾ ಪ್ರಜೆಯ ಬಂಧನ

1-gg

ಶಿಕ್ಷಣ ಕ್ಷೇತ್ರಕ್ಕೆ ಬಿಜಿಎಸ್ ಕೊಡುಗೆ ಅವಿಸ್ಮರಣೀಯ: ಸಚಿವ ಕೆ.ಗೋಪಾಲಯ್ಯ

1-r4w

ಹಸುವಿನ ಹೊಟ್ಟೆಯಲ್ಲಿತ್ತು 77 ಕೆಜಿ ಐಸ್ ಕ್ರೀಮ್ ಕಪ್ ಗಳು, ಚಮಚಗಳುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-r4w

ಹಸುವಿನ ಹೊಟ್ಟೆಯಲ್ಲಿತ್ತು 77 ಕೆಜಿ ಐಸ್ ಕ್ರೀಮ್ ಕಪ್ ಗಳು, ಚಮಚಗಳು

ತರಗತಿಯೊಳಗೆ ನುಗ್ಗಿದ ಚಿರತೆ, ವಿದ್ಯಾರ್ಥಿ ಮೇಲೆ ದಾಳಿ, ಪ್ರಾಣಾಪಾಯದಿಂದ ಪಾರು

ತರಗತಿಯೊಳಗೆ ನುಗ್ಗಿದ ಚಿರತೆ, ವಿದ್ಯಾರ್ಥಿ ಮೇಲೆ ದಾಳಿ, ಪ್ರಾಣಾಪಾಯದಿಂದ ಪಾರು

1-FFFDSFD

ಅರರೆ…ಇದೇನಿದು ಮೆಹಂದಿ ಬ್ಲೌಸ್..!; ವೈರಲ್ ವಿಡಿಯೋ

2024 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳಲ್ಲಿ ಜಯಗಳಿಸುವುದು ಕಷ್ಟ: ಗುಲಾಂ ನಬಿ

2024 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳಲ್ಲಿ ಜಯಗಳಿಸುವುದು ಕಷ್ಟ: ಗುಲಾಂ ನಬಿ

ಭಾರತದಲ್ಲಿ 9,765 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಸಂಖ್ಯೆ ಅಲ್ಪ ಹೆಚ್ಚಳ

ಭಾರತದಲ್ಲಿ 9,765 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಸಂಖ್ಯೆ ಅಲ್ಪ ಹೆಚ್ಚಳ

MUST WATCH

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

udayavani youtube

ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರ ಕೊಲೆಗೆ ಸಂಚು ಮಾಡಿಲ್ಲ : ಗೋಪಾಲ ಕೃಷ್ಣ

udayavani youtube

ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್!

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

ಹೊಸ ಸೇರ್ಪಡೆ

PM with DEVEGAWDA

ಹಾಸನಕ್ಕೆ ಐಐಟಿ: ಮತ್ತೆ ಚಿಗುರೊಡೆದ ಕನಸು

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

ಅಧಿಕಾರಕ್ಕೆ‌ ಬಂದಾಗಲೆಲ್ಲಾ ಮೂವರು ಸಿಎಂ ಆಗುವುದೇ ಬಿಜೆಪಿ ಅಜೆಂಡಾ : ಬೇಳೂರು ವ್ಯಂಗ್ಯ

congress office

ನೂತನ ಕಾಂಗ್ರೆಸ್ ಕಚೇರಿ ಉದ್ಘಾಟನೆ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

ಒಮಿಕ್ರಾನ್ ಆತಂಕ: ದೇಶದಲ್ಲಿ ಶೇ.14ರಷ್ಟು ವಿದ್ಯಾರ್ಥಿಗಳ ಹಾಜರಾತಿ ಇಳಿಕೆ ಸಾಧ್ಯತೆ; ಸಮೀಕ್ಷೆ

gyhghgf

3 ತಿಂಗಳ ಬಳಿಕ ನಂದಿಗಿರಿಧಾಮ ವೀಕ್ಷಣೆಗೆ ಮುಕ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.