ಆರೋಗ್ಯವಾಗಿರಲಿ ಮಣ್ಣು

ವಿವಿಧ ಪ್ರದೇಶದಲ್ಲಿ 8-10 ಉಪಮಾದರಿ ತೆಗೆಯಲು ಜಾಗ ಗುರುತಿಸುವುದು.

Team Udayavani, Jun 25, 2021, 5:20 PM IST

ಆರೋಗ್ಯವಾಗಿರಲಿ ಮಣ್ಣು

ಮಣ್ಣಿನ ಫಲವತ್ತತೆ ಉಳಿಸಿ, ಬೆಳೆಸಿ, ಅಭಿವೃದ್ಧಿ ಮಾಡಿ ಮಣ್ಣಿನ ಉತ್ಪಾದಕತೆ ಹೆಚ್ಚಿಸುವುದು ಮತ್ತು ಸುಸ್ಥಿರಗೊಳಿಸುವುದು ಅತ್ಯಗತ್ಯ. ಯಾವುದೇ ಮಣ್ಣಿನ ವೈಜ್ಞಾನಿಕ ಪರೀಕ್ಷೆ ಮಾಡಿಸುವುದು ಪ್ರತಿಯೊಬ್ಬ ಕೃಷಿಕನ ಕರ್ತವ್ಯ. ಹಾಗಾಗಿ ಈ ಬಗ್ಗೆ ಮಾಹಿತಿ ಹೊಂದಿ, ಮುನ್ನಡೆದರೆ ಕೃಷಿ ಕಾರ್ಯಕ್ಕೆ ಅನುಕೂಲಕರ.

ಮಣ್ಣಿನ ಪರೀಕ್ಷೆ ಏಕೆ?
ಮಣ್ಣಿನ ರಸಸಾರ, ಲವಣಾಂಶ ತಿಳಿಯಲು, ಪೋಷಕಾಂಶಗಳ ಪ್ರಮಾಣ ಅರಿಯಲು, ಬೆಳೆಗಳಿಗೆ ಪೋಷಕಾಂಶ ಶಿಫಾರಸು ಮಾಡಲು, ನೀರಾವರಿಗೆ ಭೂಮಿ ಪೂರಕವೇ ಎಂದು ತಿಳಿಯಲು, ಲಾಭದಾಯಕ ವ್ಯವಸಾಯಕ್ಕೆ, ಖರ್ಚು, ಹಾನಿ ತಪ್ಪಿಸಲು, ಮಣ್ಣಿನ ಸುಧಾರಣೆಗಾಗಿ ಸುಧಾರಕಗಳ ಪ್ರಮಾಣ ನಿರ್ಧರಿಸಲು ಮಣ್ಣಿನ ಪರೀಕ್ಷೆ ಅತಿ ಅಗತ್ಯವೆನಿಸಿದೆ.

ಮಣ್ಣಿನ ಜಮೀನುಗಳನ್ನು ಪರೀಕ್ಷೆಗಾಗಿ ಮೇಲ್ಮೈ ಲಕ್ಷಣಗಳಿಗೆ ಅನುಗುಣವಾಗಿ ವಿಂಗಡಿಸಿಕೊಳ್ಳಬೇಕು. ಒಮ್ಮೆ ಬೆಳೆ ಬೆಳೆದ ಅನಂತ, ಬಿತ್ತನೆಯ ಮೊದಲು, ಮಳೆಗಾಲಕ್ಕೆ ಮುಂಚಿತವಾಗಿ ಗೊಬ್ಬರ ಸೇರಿಸುವ ಮೊದಲು ಹಾಗೂ ಪ್ರತಿ ವರ್ಷಕ್ಕೆ 2 ರಿಂದ 3 ಬಾರಿ ಮಣ್ಣಿನ ಪರೀಕ್ಷೆ ಮಾಡಬೇಕು.

ಉಪಕರಣ
ಮಣ್ಣಿನ ಮಾದರಿ ಪಡೆಯಲು ಸಲಿಕೆ, ಪಿಕಾಸಿ, ಪ್ಲಾಸ್ಟಿಕ್‌ ಬಕೆಟ್‌, ಪಾಲಿಥೀನ್‌ ಹಾಳೆ, ದಾರ, ಮಾರ್ಕರ್‌ ಪೆನ್‌, ಮಣ್ಣು ಸಂಗ್ರಹಣ ಬಟ್ಟೆ ಚೀಲ, ಮಾಹಿತಿ ಚೀಟಿ ಅಗತ್ಯವಾಗಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಅಂದರೆ ಪರೀಕ್ಷೆಗೆ ಬಳಸುವ ಮಣ್ಣನ್ನು ಮಳೆ ಬಂದ ಅನಂತರ ನೀರಾವರಿ ಮಾಡಿದ ಪ್ರದೇಶದಲ್ಲಿ ಮರದ ಬೇರು, ತ್ಯಾಜ್ಯ ಸುಟ್ಟ ಜಾಗ, ಗೊಬ್ಬರ ಹಾಕಿದ ಜಾಗ, ಕಾಲುವೆ, ದಿಣ್ಣೆ, ಜೌಗು ಪ್ರದೇಶದಲ್ಲಿ ತೆಗೆಯಬಾರದು. ಸಂಗ್ರಹಣೆಗೆ ಗೊಬ್ಬರದ ಚೀಲ ಉಪಯೋಗಿಸಬಾರದು. ಬಿಸಿಲಿನಲ್ಲಿ ಒಣಗಿಸಬಾರದು.

ಮಣ್ಣು ಆರೋಗ್ಯ ಅಭಿಯಾನ ಅಡಿಯಲ್ಲಿ ಕೇಂದ್ರ ಸರಕಾರ ನಿಗದಿಪಡಿಸಿರುವ ಮಾರ್ಗಸೂಚಿ ಪ್ರಕಾರ ಖುಷ್ಕಿ ಪ್ರದೇಶದಲ್ಲಿ 10 ಹೆ.ಗ್ರಿಡ್‌ ಪ್ರದೇಶದಲ್ಲಿ ಒಂದು ಮಣ್ಣು ಮಾದರಿ, ನೀರಾವರಿ ಪ್ರದೇಶದಲ್ಲಿ 2.5 ಹೆ. ಗ್ರಿಡ್‌ ಪ್ರದೇಶದಲ್ಲಿ ಒಂದು ಮಣ್ಣು ಮಾದರಿ ಸಂಗ್ರಹಿಸುವುದು. ವಾರ್ಷಿಕ ಬೆಳೆಗಳಿಗೆ 0- 30 ಸೆಂ. ಮೀ. ಆಳಕ್ಕೆ ಒಂದು ಮಾದರಿ, ಬಹು ವಾರ್ಷಿಕ ಬೆಳೆಗಳಿಗೆ 0- 30 ಸೆಂ.ಮೀ. ಮತ್ತು 30 ಸೆಂ.ಮೀ.ನಿಂದ 60 ಸೆಂ.ಮೀ. ಆಳಕ್ಕೆ ಎರಡು ಮಾದರಿ ಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದಾಗಿದೆ.

ಮಣ್ಣು ಮಾದರಿ ಸಂಗ್ರಹಿಸುವ ವಿಧಾನ
 ಕ್ಯಾಡಸ್ಟ್ರಲ್‌ ನಕ್ಷೆಗಳನ್ನು ಪಡೆದು ಗ್ರಿಡ್‌ ನಕಾಶೆ ತಯಾರಿಸುವುದು. ಜಿಪಿಎಸ್‌ ಉಪಕರಣದ ಬಳಕೆ.
 ಭೂಮಿಯ ವಿಂಗಡಣೆ, ಮಣ್ಣಿನ ಬಣ್ಣ, ಇಳಿಜಾರು, ಬೆಳೆ ಪದ್ಧತಿ, ಮೇಲ್ಮೈ ಲಕ್ಷಣ ಹಾಗೂ ಇತರ ಲಕ್ಷಣದ ಆಧಾರದ ಮೇಲೆ.
 ಮರದ ಹತ್ತಿರ, ಗೊಬ್ಬರ ಗುಡ್ಡೆ, ಕಾಲುವೆ, ಹೊಂಡ, ಬೇಲಿ, ಬದು ಹತ್ತಿರ ತೆಗೆಯಬಾರದು.
 ವಿವಿಧ ಪ್ರದೇಶದಲ್ಲಿ 8-10 ಉಪಮಾದರಿ ತೆಗೆಯಲು ಜಾಗ ಗುರುತಿಸುವುದು.
 ವಿ ಆಕಾರದ 9-10 ಅಂಗುಲದ ಗುಂಡಿ ತೆಗೆದು, ಮೇಲಿನಿಂದ ಕೆಳಗಿನ ತನಕದ ಮಣ್ಣು ಸಂಗ್ರಹಿಸುವುದು.
 8-10 ಉಪ ಮಾದರಿಗಳ ಮಣ್ಣನ್ನು ಚೆನ್ನಾಗಿ ಮಿಶ್ರ ಮಾಡಿ ಕಸ ಕಡ್ಡಿ ತೆಗೆದು ಅರ್ಧ ಕೆ.ಜಿ.ಯಷ್ಟು ಚತುರ್ದಾಂಶ ಪದ್ಧತಿಯಂತೆ ಸಂಗ್ರಹಿಸಬೇಕು. ಮಣ್ಣನ್ನು ನೆರಳಲ್ಲಿ ಒಣಗಿಸಿ ಶೇಖರಿಸಬೇಕು.
 ಚೀಲಗಳಲ್ಲಿ ತುಂಬಿ ಜಮೀನಿನ ಮತ್ತು ರೈತರ ಮಾಹಿತಿಯ ಚೀಟಿಯನ್ನು ಅನುಬಂಧದ ಪ್ರಕಾರ ಭರ್ತಿ ಮಾಡಿ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಬೇಕು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.