Udayavni Special

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು : ಕ್ಲೀನ್ ಸ್ವೀಪ್ ನಿಂದ ಪಾರಾದ ಲಂಕಾ

Team Udayavani, Jul 23, 2021, 11:49 PM IST

ಹೊಸಬರ ಭಾರತಕ್ಕೆ ಕೊನೆಯಲ್ಲೊಂದು ಸೋಲು

ಕೊಲಂಬೊ : ಬಹುತೇಕ ಹೊಸಬರಿಂದಲೇ ಕೂಡಿದ ಭಾರತ, ಆತಿಥೇಯ ಶ್ರೀಲಂಕಾ ಎದುರಿನ ಅಂತಿಮ ಏಕದಿನ ಪಂದ್ಯದಲ್ಲಿ 3 ವಿಕೆಟ್‌ಗಳ ಸೋಲನುಭವಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ 43.1 ಓವರ್‌ಗಳಲ್ಲಿ 225 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿಯಿತು. ಗುರಿ ಬೆನ್ನತ್ತಿದ ಶ್ರೀಲಂಕಾ ಭನುಕ ರಾಜಪಕ್ಷೆ 65, ಆರಂಭಕಾರ ಆವಿಷ್ಕ ಫೆರ್ನಾಂಡೊ 76 ರನ್‌ಗಳ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ 39 ಓವರ್‌ಗಳಲ್ಲಿ 7 ವಿಕೆಟ್‌ನಷ್ಟಕ್ಕೆ 227ರನ್‌ ಪೇರಿಸಿ ಗೆಲುವಿನ ನಗೆ ಬೀರಿತು. ಲಂಕಾ ಈ ಗೆಲುವಿನೊಂದಿಗೆ ತವರಿನಲ್ಲಿ ವೈಟ್‌ವಾಶ್‌ ಮುಖಭಂಗದಿಂದ ಪಾರಾಯಿತು.

ಮಳೆಯಿಂದಾಗಿ ಓವರ್‌ ಸಂಖ್ಯೆಯನ್ನು 47ಕ್ಕೆ ಇಳಿಸಲಾಗಿತ್ತು.

ಈಗಾಗಲೇ ಸರಣಿ ವಶಪಡಿಸಿಕೊಂಡ ಕಾರಣ ಕೋಚ್‌ ರಾಹುಲ್‌ ದ್ರಾವಿಡ್‌ ಭರ್ಜರಿ ಪ್ರಯೋಗಕ್ಕಿಳಿದರು. ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಪಡೆಯದ ಹೊಸಬರನ್ನು ಭಾರೀ ನಂಬಿಕೆಯೊಂದಿಗೆ ಕಣಕ್ಕಿಳಿಸಿದರು. ಮುಖ್ಯವಾಗಿ ಬೌಲಿಂಗ್‌ ವಿಭಾಗದಲ್ಲಿ ಹೊಸಬರ ದಂಡೇ ಕಂಡುಬಂತು.

ಭಾರತದ ಓಪನಿಂಗ್‌ನಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ನಾಯಕ ಶಿಖರ್‌ ಧವನ್‌ ಜತೆಗೆ ಪೃಥ್ವಿ ಶಾ ಅವರೇ ಇನ್ನಿಂಗ್ಸ್‌ ಆರಂಭಿಸಿದರು. ಎಸೆತಕ್ಕೊಂದರಂತೆ 49 ರನ್‌ ಮಾಡಿದ ಶಾ ಅವರದೇ ಭಾರತದ ಸರದಿಯ ಗರಿಷ್ಠ ಗಳಿಕೆ (8 ಬೌಂಡರಿ). ವನ್‌ಡೌನ್‌ನಲ್ಲಿ ಬಂದ ಸಂಜು ಸ್ಯಾಮ್ಸನ್‌ ಕೂಡ ಎಸೆತಕ್ಕೆ ಒಂದರಂತೆ 46 ರನ್‌ ಹೊಡೆದರು (5 ಬೌಂಡರಿ, 1 ಸಿಕ್ಸರ್‌). ಇವರಿಬ್ಬರಿಂದ ದ್ವಿತೀಯ ವಿಕೆಟಿಗೆ 74 ರನ್‌ ಒಟ್ಟುಗೂಡಿತು. 13 ರನ್‌ ಮಾಡಿದ ಧವನ್‌ ವಿಕೆಟ್‌ 3ನೇ ಓವರಿನಲ್ಲಿ ಉರುಳಿತು. ಆಗ ಸ್ಕೋರ್‌ ಕೇವಲ 28 ರನ್‌ ಆಗಿತ್ತು.

ಮನೀಷ್‌ ಪಾಂಡೆ ಮತ್ತೂಮ್ಮೆ ವೈಫ‌ಲ್ಯ ಅನುಭವಿಸಿದರು. ಇವರ ಗಳಿಕೆ ಕೇವಲ 11 ರನ್‌. ಮಧ್ಯಮ ಕ್ರಮಾಂಕದಲ್ಲಿ ಆಧಾರವಾದವರು ಸೂರ್ಯಕುಮಾರ್‌ ಯಾದವ್‌. 37 ಎಸೆತ ಎದುರಿಸಿದ ಸೂರ್ಯ 7 ಬೌಂಡರಿ ನೆರವಿನಿಂದ 40 ರನ್‌ ಮಾಡಿದರು. ಹಾರ್ದಿಕ್‌ ಪಾಂಡ್ಯ ಗಳಿಕೆ 19 ರನ್‌.

ಶ್ರೀಲಂಕಾ ಪರ ಎಡಗೈ ಸ್ಪಿನ್ನರ್‌ ಪ್ರವೀಣ್‌ ಜಯವಿಕ್ರಮ ಮತ್ತು ಆಫ್ಸ್ಪಿನ್ನರ್‌ ಅಖೀಲ ಧನಂಜಯ ತಲಾ 3 ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ-43.1 ಓವರ್‌ಗಳಲ್ಲಿ 225. ಶ್ರೀಲಂಕಾ-39 ಓವರ್‌ಗಳಲ್ಲಿ 7 ವಿಕೆಟಿಗೆ 227.

ಟಾಪ್ ನ್ಯೂಸ್

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಡಿಜಿಟಲ್‌ ಆರೋಗ್ಯ ಇಂದು ಲೋಕಾರ್ಪಣೆ

ಡಿಜಿಟಲ್‌ ಆರೋಗ್ಯ ಇಂದು ಲೋಕಾರ್ಪಣೆ

ಇಂದು ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸಿ ತಾಣಗಳ ಆಗರ ಕರಾವಳಿ

ಇಂದು ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸಿ ತಾಣಗಳ ಆಗರ ಕರಾವಳಿ

ಯಶಸ್ಸು ಕಂಡ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

ಯಶಸ್ಸು ಕಂಡ ಪ್ರಧಾನಿ ಮೋದಿ ಅಮೆರಿಕ ಪ್ರವಾಸ

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

ಕೊನೆಯ ಎಸೆತದಲ್ಲಿ ಚೆನ್ನೈ ವಿನ್‌

ಕೊನೆಯ ಎಸೆತದಲ್ಲಿ ಚೆನ್ನೈಗೆ ಜಯ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಮಾರ್ಗನ್ vs ಮಹೇಂದ್ರ: ಟಾಸ್ ಗೆದ್ದ ಕೆಕೆಆರ್, ಚೆನ್ನೈ ತಂಡಕ್ಕೆ ಕರ್ರನ್ ಸೇರ್ಪಡೆ

ಮಾರ್ಗನ್ vs ಮಹೇಂದ್ರ: ಟಾಸ್ ಗೆದ್ದ ಕೆಕೆಆರ್, ಚೆನ್ನೈ ತಂಡಕ್ಕೆ ಕರ್ರನ್ ಸೇರ್ಪಡೆ

ಮತ್ತೊಂದು ಫೈನಲ್ ಓವರ್ ಥ್ರಿಲ್ಲರ್: ಆಸೀಸ್ ವಿರುದ್ಧ ಅಂತಿಮ ಏಕದಿನ ಪಂದ್ಯ ಮಿಥಾಲಿ ಪಡೆ

ಮತ್ತೊಂದು ಫೈನಲ್ ಓವರ್ ಥ್ರಿಲ್ಲರ್: ಆಸೀಸ್ ವಿರುದ್ಧ ಅಂತಿಮ ಏಕದಿನ ಪಂದ್ಯ ಗೆದ್ದ ಮಿಥಾಲಿ ಪಡೆ

MUST WATCH

udayavani youtube

ಶ್ರೀ ಕ್ಷೇತ್ರ ಕಮಲಶಿಲೆಗೆ ಸಚಿವ ಅಶ್ವಥ್ ನಾರಾಯಣ್ ದಂಪತಿ ಭೇಟಿ, ವಿಶೇಷ ಪೂಜೆ

udayavani youtube

ರೈತರಿಗೆ ನಿರಂತರ ಆದಾಯ ಕೊಡುವ ಲಿಂಬೆ ಬೆಳೆಯ ಬಗ್ಗೆ ಮಾಹಿತಿ

udayavani youtube

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

udayavani youtube

ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಾಜಕ್ಕೆ ಬಹಳಷ್ಟು ಅವಶ್ಯಕತೆ : ಡಾ| ಅಶ್ವತ್ಥನಾರಾಯಣ

udayavani youtube

ಕೋವಿಡ್ ಆತಂಕದ ನಡುವೆ ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ

ಹೊಸ ಸೇರ್ಪಡೆ

ಇಂದು ಪ್ರವಾಸೋದ್ಯಮ ದಿನ: ಕಡತದಲ್ಲೇ ಬಾಕಿಯಾದ ಪ್ರವಾಸೋದ್ಯಮ ಯೋಜನೆ

ಇಂದು ಪ್ರವಾಸೋದ್ಯಮ ದಿನ: ಕಡತದಲ್ಲೇ ಬಾಕಿಯಾದ ಪ್ರವಾಸೋದ್ಯಮ ಯೋಜನೆ

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ವಿಧಾನಸಭಾ ಕ್ಷೇತ್ರಗಳೇ ಗಡಿ; ಜಿ.ಪಂ., ತಾ.ಪಂ. ಕ್ಷೇತ್ರಗಳ ಮರುವಿಂಗಡಣೆಗೆ ಸರಕಾರದ ಚಿಂತನೆ

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಇಂದು ಭಾರತ್‌ ಬಂದ್‌; ಕೇಂದ್ರ ಕೃಷಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಎಲ್ಲ ಇವಿಗಳಿಗೆ ಸಬ್ಸಿಡಿ?

ಎಲ್ಲ ಇವಿಗಳಿಗೆ ಸಬ್ಸಿಡಿ?

ಡಿಜಿಟಲ್‌ ಆರೋಗ್ಯ ಇಂದು ಲೋಕಾರ್ಪಣೆ

ಡಿಜಿಟಲ್‌ ಆರೋಗ್ಯ ಇಂದು ಲೋಕಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.