
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದಿಂದ ಯುಜಿಸಿ – ನೆಟ್ ಪ್ರವೇಶಪತ್ರ ಬಿಡುಗಡೆ
Team Udayavani, Nov 15, 2021, 8:10 AM IST

ಹೊಸದಿಲ್ಲಿ: ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ)ವು ಜೂನ್ 2020ರ ಯುಜಿಸಿ-ನೆಟ್ ಪರೀಕ್ಷೆಯ ಪ್ರವೇಶಪತ್ರಗಳನ್ನು ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಪ್ರವೇಶಪತ್ರವನ್ನು ಎನ್‌ಟಿಎಯ ವೆಬ್ ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಸೂಚಿಸಿರುವ ದಿನಾಂಕ, ಪಾಳಿ, ಸಮಯ ಮತ್ತು ವಿಷಯಗಳಂತೆ ಪರೀಕ್ಷೆಗೆ ಹಾಜರಾಗಬಹುದು.
ಪ್ರವೇಶಪತ್ರದಲ್ಲಿ ಸೂಚಿಸಲಾದ ದಿನಾಂಕ ಮತ್ತು ಸಮಯ ಬಿಟ್ಟು ಬೇರೆ ದಿನಾಂಕ, ಸಮಯಗಳಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇಲ್ಲ. ಯುಜಿಸಿ-ನೆಟ್ ಡಿಸೆಂಬರ್ 2020 ಮತ್ತು ಜೂನ್ 2021 ಪರೀಕ್ಷೆಗಳು ನ. 20, 21, 22, 24, 25, 26, 29, 30 ಮತ್ತು ಡಿಸೆಂಬರ್ 1, 3, 4, 5 ರಂದು ನಡೆಯಲಿವೆ.
ಅಭ್ಯರ್ಥಿಗಳು ಪರೀಕ್ಷೆ ಆರಂಭ ವಾಗುವುದಕ್ಕೆ 2 ತಾಸು ಮುನ್ನ ಪರೀಕ್ಷಾ ಕೇಂದ್ರದಲ್ಲಿರಬೇಕು. ಎರಡೂ ಆವೃತ್ತಿಯ ಪರೀಕ್ಷೆಗಳ ವಿವರವಾದ ವೇಳಾ ಪಟ್ಟಿಯನ್ನೂ ಎನ್‌ಟಿಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Cleaning: ಅರಣ್ಯ ಇಲಾಖೆ ವತಿಯಿಂದ ಚಾರ್ಮಾಡಿ ಘಾಟ್ ನಲ್ಲಿ ಸ್ವಚ್ಚತಾ ಕಾರ್ಯ

ಸಚಿವ ಸ್ಥಾನ ಪಡೆದ ಬಳಿಕ ಮೊದಲ ಸಲ ಮತಕ್ಷೇತ್ರಕ್ಕೆ ಭೇಟಿ ನೀಡಿದ ಸಚಿವ ಡಾ. ಶರಣಪ್ರಕಾಶ ಪಾಟೀಲ

Dr. TMA Pai Convention Centre; 3 ದಿನಗಳ “ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋಗೆ’ ಚಾಲನೆ

Health: ಸೋಶಿಯಲ್ ಆ್ಯಂಕ್ಸೈಟಿ ಡಿಸಾರ್ಡರ್

Karachi; ಗುಂಡಿನ ದಾಳಿಯಲ್ಲಿ ಲಷ್ಕರ್-ಎ-ತೈಬಾ ಸ್ಥಾಪಕ ಸದಸ್ಯ ಖೈಸರ್ ಫಾರೂಕಿ ಹತ್ಯೆ