ವಿದ್ಯಾರ್ಥಿನಿಗೆ ನೆಟ್ಟಿಗರ ಬೆಂಬಲ
Team Udayavani, Jul 15, 2021, 3:49 AM IST
ನವದೆಹಲಿ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ, ನಾಸಾ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಂದ ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಟರ್ನ್ ಶಿಪ್ಗೆ ಆಹ್ವಾನ ನೀಡುತ್ತದೆ. ಇತ್ತೀಚೆಗೆ ಆಸಕ್ತರಿಗೆ ನೆನಪಿಸುವ ನಿಟ್ಟಿನಲ್ಲಿ ನಾಸಾ ನಾಲ್ವರು ವಿದ್ಯಾರ್ಥಿಗಳನ್ನು ಒಳಗೊಂಡ ಫೋಟೋ ಮತ್ತು ಅರ್ಜಿ ಸಲ್ಲಿಸುವ ವಿವರದ ವೆಬ್ಸೈಟ್ ಅನ್ನು ಟ್ವೀಟ್ ಮಾಡಿತ್ತು. ಭಾರತದ ವಿದ್ಯಾರ್ಥಿನಿ ಪ್ರತಿಮಾ ರಾಯ್, ಲ್ಯಾಪ್ಟಾಪ್ ಜೊತೆಗೆ ಲಕ್ಷ್ಮೀ, ಸರಸ್ವತಿ ದೇವಿ ಮೂರ್ತಿಯನ್ನೂ ಇರಿಸಿಕೊಂಡಿದ್ದ ಫೋಟೋವನ್ನು ನಾಸಾ ಅಪ್ಲೋಡ್ ಮಾಡಿತ್ತು. ಅದಕ್ಕೆ ಕೆಲವರಿಂದ ಆಕ್ಷೇಪವೂ ವ್ಯಕ್ತವಾಗಿದೆ. ವಿದ್ಯಾರ್ಥಿನಿಯನ್ನು ಮತ್ತು ನಾಸಾವನ್ನು ಲೇವಡಿ ಮಾಡಿ, ವಿಜ್ಞಾನ ಮತ್ತು ಧರ್ಮವನ್ನು ಸಮನಾಗಿ ಪರಿಗಣಿಸಿದ್ದನ್ನು ಟೀಕಿಸಲಾಗಿದೆ.
ಅಂಥ ಟೀಕೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿ, ವಿದ್ಯಾರ್ಥಿನಿಗೆ ಬೆಂಬಲ ನೀಡಿದ್ದಾರೆ. ಅಭಿ ಆ್ಯಂಡ್ ನಿಯು ಎಂಬುವರು “ವಿದ್ಯಾರ್ಥಿನಿಗೆ ಉತ್ತಮ ಭವಿಷ್ಯದ ದಿನಗಳು ಬರಲಿ’ ಎಂದು ಹಾರೈಸಿದ್ದಾರೆ.
ರಶ್ಮಿ ಸಮಂತ್ ಎಂಬವರು ಟ್ವೀಟ್ ಮಾಡಿ “ಎಂಥಾ ಅದ್ಭುತ ಫೋಟೋಗಳ ಸಂಯೋಜನೆ? ಹಿಂದೂ ಮಹಿಳೆಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಎಲ್ಲರಿಗೂ ಬೆಂಬಲ ನೀಡಿದಂತಾಗಿದೆ ಮತ್ತು ಸಂಸ್ಕೃತಿಯ ಪ್ರತೀಕವಾಗಿರುವ ಮಹಿಳೆಗೆ ಪ್ರೋತ್ಸಾಹ ನೀಡಿದಂತಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ