Udayavni Special

ಇನ್ನಂಜೆ ಹೊಳೆ ಬದಿ ತ್ಯಾಜ್ಯ ಎಸಗಿದವರನ್ನು ಪತ್ತೆ ಹಚ್ಚಿದ ಗ್ರಾಮಸ್ಥರು: ತಪ್ಪಿತಸ್ಥರಿಗೆ ದಂಡ

ತ್ಯಾಜ್ಯ ಎಸಗಿದವರಿಂದಲೇ ಕಸ ಶುಚಿಗೊಳಿಸಿ ದಂಡ ವಿಧಿಸಿದ ಇನ್ನಂಜೆ ಗ್ರಾಮ ಪಂಚಾಯತ್

Team Udayavani, Jul 30, 2021, 9:28 PM IST

ಹೊಳೆ ಬದಿ ತ್ಯಾಜ್ಯ ಎಸೆದವರಿಂದಲೇ ಕಸ ಶುಚಿಗೊಳಿಸಿದ ಇನ್ನಂಜೆ ಗ್ರಾಮ ಪಂಚಾಯತ್

ಕಾಪು: ಕಾಪು – ಶಂಕರಪುರ ಸಂಪರ್ಕ ರಸ್ತೆಯಲ್ಲಿ ಸಿಗುವ ಇನ್ನಂಜೆ ಗ್ರಾಮದ ಮಡುಂಬು – ಮರ್ಕೋಡಿ ಹೊಳೆ ಬದಿಯಲ್ಲಿ ತ್ಯಾಜ್ಯ ಸುರಿದು ಹೋಗಿದ್ದವರನ್ನು ಸ್ಥಳೀಯರೇ ಪತ್ತೆ ಹಚ್ಚಿ, ಗ್ರಾಮ ಪಂಚಾಯತ್‌ಗೆ ಒಪ್ಪಿಸಿದ ಅಪರೂಪದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಬೆಳಪು ಮೂಲದ ಗುಜಿರಿ ವ್ಯಾಪಾರಿಗಳಾದ ಹಮೀದ್ ಮತ್ತು ಅಲ್ತಾಫ್ ಅಲೆವೂರಿನಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ಮರ್ಕೋಡಿ ಹೊಳೆ ಬದಿಯಲ್ಲಿ ಎಸೆದು ಹೋಗಿದ್ದು, ಸ್ಥಳೀಯರ ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಎಸೆದು ಹೋಗಿದ್ದ ತ್ಯಾಜ್ಯವನ್ನು ಶುಚಿಗೊಳಿಸಿ, ದಂಡ ಕಟ್ಟಿ ನಿರ್ಗಮಿಸಿದ ಮಹಾನುಭಾವರು. !

ಇನ್ನಂಜೆ ಮರ್ಕೋಡಿ ಹೊಳೆ ಬದಿಯಲ್ಲಿ ಗುರುವಾರ ರಾತ್ರಿ ಎರಡು ತ್ಯಾಜ್ಯದ ಗೋಣಿಗಳು ಕಂಡು ಬಂದಿದ್ದು, ರಿಕ್ಷಾ ಚಾಲಕನ ಉಮೇಶ್ ಅಂಚನ್ ಎಂಬವರು ತ್ಯಾಜ್ಯವನ್ನು ಬಿಡಿಸಿ ನೋಡಿದಾಗ ಅದರಲ್ಲಿ ಅಲೆವೂರು ನಿವಾಸಿಯೊಬ್ಬರಿಗೆ ಸೇರಿದ್ದ ಬಿಲ್ ಪತ್ತೆಯಾಗಿತ್ತು. ಈ ಬಗ್ಗೆ ಅವರು ಗ್ರಾ. ಪಂ. ಸದಸ್ಯ ದಿವೇಶ್ ಶೆಟ್ಟಿ ಕಲ್ಯಾಲು ಅವರಿಗೆ ಮಾಹಿತಿ ನೀಡಿದ್ದು, ಅದರಲ್ಲಿ ಇದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಅದು ಬೆಳಪು ಮೂಲದ ಗುಜಿರಿ ವ್ಯಾಪಾರಿಗಳು ತಮ್ಮಲ್ಲಿ ಸಂಗ್ರಹಿಸಿ, ಕೊಂಡೊಯ್ದಿದ್ದ ತ್ಯಾಜ್ಯ ವಸ್ತುಗಳು ಎಂದು ಮಾಹಿತಿ ನೀಡಿದ್ದರು.

ಇದನ್ನೂ ಓದಿ :ಉದ್ಯಮಿ ಅಪಹರಣ : 4 ಗಂಟೆಯಲ್ಲಿ ಪತ್ತೆ ಹಚ್ಚಿದ ಧಾರವಾಡ ಪೊಲೀಸ್

ಮರ್ಕೋಡಿ ಹೊಳೆ ಸಮೀಪ ತ್ಯಾಜ್ಯ ಎಸೆದು ಹೋಗಿದ್ದ ಗುಜಿರಿ ವ್ಯಾಪಾರಿಗಳ ದೂರವಾಣಿ ಸಂಖ್ಯೆಯನ್ನು ಪಡೆದು ಅವರನ್ನು ಸ್ಥಳಕ್ಕೆ ಕರೆಯಿಸಿ ಬಳಿಕ ಅವರ ಬಗ್ಗೆ ಕಾಪು ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಅವರಿಂದಲೇ ಆ ತ್ಯಾಜ್ಯವನ್ನು ಮತ್ತು ಮರ್ಕೋಡಿ ಪರಿಸರದಲ್ಲಿ ಇದ್ದಂತಹ ಇತರ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು.

ಮರ್ಕೋಡಿ ಹೊಳೆ ಬದಿಯಲ್ಲಿ  ತ್ಯಾಜ್ಯ ಸುರಿದು ಹೋಗಿದ್ದ ಬೆಳಪು ನಿವಾಸಿಗಳಾದ ಹಮೀದ್ ಮತ್ತು ಅಲ್ತಾಫ್ ಅವರಿಗೆ ಇನ್ನಂಜೆ ಗ್ರಾಮ ಪಂಚಾಯತ್ 5000 ರೂಪಾಯಿ ಮೊತ್ತದ ದಂಡ ಕಟ್ಟುವಂತೆ ನೊಟೀಸ್ ನೀಡಿದ್ದು, ಬಳಿಕ ಅವರು ತಪ್ಪೊಪ್ಪಿಕೊಂಡ ಮೇರೆಗೆ ಮತ್ತು ಅವರ ಮನವಿಯ ಮೇರೆಗೆ ಎರಡು ಸಾವಿರ ರೂಪಾಯಿ ದಂಡ ವಿಧಿಸಿ, ಎಚ್ಚರಿಕೆ ನೀಡಲಾಗಿದೆ.

ಇನ್ನಂಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಆಚಾರ್ಯ, ಉಪಾಧ್ಯಕ್ಷ ಸುರೇಶ್ ಶೆಟ್ಟಿ ಮಂಡೇಡಿ, ಗ್ರಾ.ಪಂ. ಸದಸ್ಯ ದಿವೇಶ್ ಶೆಟ್ಟಿ, ಕಲ್ಯಾಲು ಗ್ರಾಮಸ್ಥರಾದ ಬಾಲಕೃಷ್ಣ ಆರ್. ಕೋಟ್ಯಾನ್, ಉಮೇಶ್ ಅಂಚನ್, ವಿಕ್ಕಿ ಪೂಜಾರಿ, ಪೊಲೀಸ್ ಸಿಬ್ಬಂದಿ ಅಮೃತೇಶ್, ಪಂಚಾಯತ್ ಸಿಬ್ಬಂದಿಗಳಾದ ಹರೀಶ್ ಮತ್ತು ಸಂದೀಪ್ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ನನ್ನಲ್ಲಿನ ಪ್ರತಿ ರೂಪಾಯಿಯೂ ಅಮೂಲ್ಯ ಜೀವವನ್ನು ರಕ್ಷಿಸಲು ಕಾಯುತ್ತಿದೆ! ಸೋನು ಸೂದ್‌

ನನ್ನಲ್ಲಿನ ಪ್ರತಿ ರೂಪಾಯಿಯೂ ಅಮೂಲ್ಯ ಜೀವವನ್ನು ರಕ್ಷಿಸಲು ಕಾಯುತ್ತಿದೆ : ಸೋನು ಸೂದ್‌

fcgbgrtr

ಕಾಂಗ್ರೆಸ್ ಸೇರಲಿದ್ದಾರಂತೆ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ ?

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ?

fbdfgtre

ಕೋವಿಡ್ : 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ | ರಾಜ್ಯದಲ್ಲಿಂದು 677 ಹೊಸ ಕೇಸ್ ಪತ್ತೆ

dxfvsfrefe

“Me Too” ಆರೋಪಿ ಚರಣ್‍ಜಿತ್ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ| ರಾಷ್ಟ್ರೀಯ ಮಹಿಳಾ ಆಯೋಗ

fgdfgdrt

ನಟಿ ಶಿಲ್ಪಾ ಶೆಟ್ಟಿ ಪತಿ ಕುಂದ್ರಾಗೆ ಸಿಕ್ತು ಜಾಮೀನು

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಅಸೆ

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಆಸೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು : ಮೂವರಿಗೆ ಗಾಯ

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು ; ಮೂವರಿಗೆ ಗಾಯ

Untitled-1

ಜಿಲ್ಲೆಯ ಬಹುತೇಕ ಪಶು ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ

ಪರ್ಕಳ ರಾ.ಹೆ.169 ರಸ್ತೆ ಅವ್ಯವಸ್ಥೆ : ಭೂ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಲು ಆಗ್ರಹ

ಪರ್ಕಳ ರಾ.ಹೆ.169 ರಸ್ತೆ ಅವ್ಯವಸ್ಥೆ : ಭೂ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಲು ಆಗ್ರಹ

ನಾಡಿನ ವಿವಿಧೆಡೆ ಇಂದು ಅನಂತನ ಚತುರ್ದಶಿ ವ್ರತ

ನಾಡಿನ ವಿವಿಧೆಡೆ ಇಂದು ಅನಂತನ ಚತುರ್ದಶಿ ವ್ರತ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

MUST WATCH

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

udayavani youtube

ಗಿಫ್ಟ್ ಕೊಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಗೆ ಮಚ್ಚಿನಿಂದ ಹಲ್ಲೆ

udayavani youtube

ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದರೂ ಪವಾಡಸದೃಶವಾಗಿ ಪಾರಾದ ಬಾಲಕ

ಹೊಸ ಸೇರ್ಪಡೆ

ನನ್ನಲ್ಲಿನ ಪ್ರತಿ ರೂಪಾಯಿಯೂ ಅಮೂಲ್ಯ ಜೀವವನ್ನು ರಕ್ಷಿಸಲು ಕಾಯುತ್ತಿದೆ! ಸೋನು ಸೂದ್‌

ನನ್ನಲ್ಲಿನ ಪ್ರತಿ ರೂಪಾಯಿಯೂ ಅಮೂಲ್ಯ ಜೀವವನ್ನು ರಕ್ಷಿಸಲು ಕಾಯುತ್ತಿದೆ : ಸೋನು ಸೂದ್‌

fcgbgrtr

ಕಾಂಗ್ರೆಸ್ ಸೇರಲಿದ್ದಾರಂತೆ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ ?

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ?

ಅಜ್ಜಿ ಆಪರೇಷನ್‌ ನೆರವಿಗೆ ಮೊಮ್ಮಗನ ಮೊರೆ

ಅಜ್ಜಿ ಆಪರೇಷನ್‌ ನೆರವಿಗೆ ಮೊಮ್ಮಗನ ಮೊರೆ

ಹೃದ್ರೋಗ ಆಸ್ಪತ್ರೆಗಳ ಸುಧಾರಣೆ ಅಗತ್ಯ: ಡಾ| ಜವಳಿ

ಹೃದ್ರೋಗ ಆಸ್ಪತ್ರೆಗಳ ಸುಧಾರಣೆ ಅಗತ್ಯ: ಡಾ| ಜವಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.