ಮನುಷ್ಯನ ಮಲದಲ್ಲಿದೆ 50 ಸಾವಿರಕ್ಕೂ ಹೆಚ್ಚು ವೈರಸ್! ಹೊಸ ಸಂಶೋಧನೆಯಿಂದ ಬಹಿರಂಗ
ಶೇ.92ರಷ್ಟು ಈವರೆಗೆ ಪತ್ತೆಯಾಗದ ವೈರಾಣುಗಳು
Team Udayavani, Jun 27, 2021, 7:10 PM IST
ವಾಷಿಂಗ್ಟನ್: ಮನುಷ್ಯನ ಮಲದಲ್ಲಿ ಎಷ್ಟು ಬಗೆಯ ವೈರಸ್ ಗಳಿರಬಹುದು? 50 ಸಾವಿರಕ್ಕೂ ಹೆಚ್ಚು ಎನ್ನುತ್ತದೆ ಅಧ್ಯಯನ ವರದಿ!
ಹೌದು. ಕ್ಯಾಲಿಫೋರ್ನಿಯಾದ ಜಾಯಿಂಟ್ ಜಿನೋಮ್ ಇನ್‌ಸ್ಟಿಟ್ಯೂಟ್ ಮತ್ತು ಸ್ಟಾನ್ ಫೋರ್ಡ್ ವಿವಿಯ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನದಿಂದ ಈ ಅಚ್ಚರಿಯ ಅಂಶ ಬಯಲಾಗಿದೆ. ವಿಶೇಷವೆಂದರೆ, ಮಾನವನ ಮಲದಲ್ಲಿರುವ 50 ಸಾವಿರಕ್ಕೂ ಅಧಿಕ ವೈರಸ್ ಗಳ ಪೈಕಿ ಶೇ.92ರಷ್ಟು ಈವರೆಗೆ ಪತ್ತೆಯಾಗದಂಥ ವೈರಸ್ ಗಳು ಎಂಬುದೂ ತಿಳಿದುಬಂದಿದೆ. ನೇಚರ್ ಮೈಕ್ರೋ ಬಯಾಲಜಿ ನಿಯತಕಾಲಿಕೆಯಲ್ಲಿ ಈ ಸಂಶೋಧನೆಯ ವರದಿ ಪ್ರಕಟವಾಗಿದೆ.
ಕೋಶದ ಮೇಲೆ ದಾಳಿ ಮಾಡಲ್ಲ:
ಮಲದಲ್ಲಿ ಕಂಡುಬರುವಂಥ ಬಹುತೇಕ ವೈರಸ್ ಗಳು ಬ್ಯಾಕ್ಟೀರಿಯಾವನ್ನು ತಿನ್ನುತ್ತವೆ. ಆದರೆ, ಅವುಗಳು ಮಾನವನ ಕೋಶಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದು ವರದಿ ಹೇಳಿದೆ. ನಮ್ಮ ಕರುಳಿನಲ್ಲಿರುವ ಸೂಕ್ಷ್ಮಾಣು ಜೀವಿಗಳು ನಾವು ತಿನ್ನುವ ಆಹಾರ ಪಚನವಾಗುವಂತೆ ನೋಡಿಕೊಳ್ಳುತ್ತವೆ ಮಾತ್ರವಲ್ಲ, ಅವುಗಳು ರೋಗಕಾರಕ ಬ್ಯಾಕ್ಟೀರಿಯಾಗಳಿಂದ ನಮ್ಮನ್ನು ಸಂರಕ್ಷಿಸುತ್ತವೆ. ನಮ್ಮ ಮಾನಸಿಕ ಯೋಗಕ್ಷೇಮ, ರೋಗ ನಿರೋಧಕ ವ್ಯವಸ್ಥೆಯ ಬಲಿಷ್ಠತೆ ಕಾಪಾಡಿಕೊಳ್ಳುವಲ್ಲೂ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಈ ವರದಿ ಹೇಳಿದೆ.
ಇದನ್ನೂ ಓದಿ :ಇಂಡೋ-ಜಪಾನೀಸ್ ಸಂಬಂಧ ‘ಜಾಗತಿಕ ಸ್ಥಿರತೆಗೆ ಪ್ರಸ್ತುತವಾಗಿದೆ’ : ಪ್ರಧಾನಿ ಮೋದಿ
11,810 ಸ್ಯಾಂಪಲ್ ಗಳ ಪರೀಕ್ಷೆ:
24 ದೇಶಗಳಲ್ಲಿ ಸಾರ್ವಜನಿಕವಾಗಿ ಲಭ್ಯವಾಗುವ ಮನುಷ್ಯನ ಮಲವನ್ನು ಬಳಸಿಕೊಂಡು ಈ ಅಧ್ಯಯನ ನಡೆಸಲಾಗಿದೆ. ಒಟ್ಟಾರೆ 11,810 ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ. ಆಗ ಪತ್ತೆಯಾದ 54,118 ವೈರಸ್ ಗಳ ಪೈಕಿ ಶೇ.90ಕ್ಕೂ ಹೆಚ್ಚು ವೈಜ್ಞಾನಿಕ ಲೋಕಕ್ಕೇ ಹೊಸದು ಎಂದೂ ಸಂಶೋಧಕರು ಕಂಡುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್