ದೇಶದ “ಈ ಗ್ರಾಮ”ದಲ್ಲಿ ಮಾತ್ರ 5 ದಿನದ ಮೊದಲೇ ಸ್ವಾತಂತ್ರ್ಯೋತ್ಸವ ಆಚರಿಸುವುದೇಕೆ?

Team Udayavani, Aug 15, 2019, 11:51 AM IST

ಮಧ್ಯಪ್ರದೇಶ;ಮಧ್ಯಪ್ರದೇಶದ ಮಂಡ್ ಸೌರ್ ಎಂಬ ಪುಟ್ಟ ಗ್ರಾಮದಲ್ಲಿ ಕಳೆದ ಮೂರು ದಶಕಗಳ ಪಶುಪತಿನಾಥ ದೇವಸ್ಥಾನದ ಪಂಚಾಂಗದ ಸಂಪ್ರದಾಯದಂತೆ ಸ್ವಾತಂತ್ರ್ಯೋತ್ಸವ ಆಚರಿಸುತ್ತ ಬಂದಿದ್ದಾರೆ ಎಂದು ವರದಿ ತಿಳಿಸಿದೆ.

ಪಶುಪತಿನಾಥ ದೇವಸ್ಥಾನದ ಮುಖ್ಯ ಪುರೋಹಿತ ಉಮೇಶ್ ಜೋಶಿ ಅವರ ಪ್ರಕಾರ, 1947ರ ಆಗಸ್ಟ್ 14ರ ಮಧ್ಯರಾತ್ರಿ ದೇಶಕ್ಕೆ ಸ್ವಾತಂತ್ರ್ಯದ ಸಂಭ್ರಮ. ಪ್ರತೀ ವರ್ಷ ಆಗಸ್ಟ್ 15ರಂದು ದೇಶಾದ್ಯಂತ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದೆ. ಆದರೆ 1947ರ ಆಗಸ್ಟ್ 15 ಹಿಂದೂ ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಕೃಷ್ಣಪಕ್ಷದ ಚತುದರ್ಶಿಯಾಗಿತ್ತು. ಹೀಗಾಗಿ ಪ್ರತಿವರ್ಷ ನಾವು ಶ್ರಾವಣ ಮಾಸದ ಕೃಷ್ಣಪಕ್ಷದ ಚತುದರ್ಶಿ ದಿನದಂದೇ ಶಿವನಿಗೆ ಪೂಜೆ ಸಲ್ಲಿಸಿದ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವುದಾಗಿ ವಿವರಿಸಿದ್ದಾರೆ.

1987ರಿಂದ ಮಂಡ್ ಸೌರ್ ಪಶುಪತಿನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಸ್ವಾತಂತ್ರ್ಯೋತ್ಸವ ಆಚರಿಸುವುದಕ್ಕೆ ಚಾಲನೆ ನೀಡಿದ್ದೇವು ಎಂದು ಜೋಶಿ ತಿಳಿಸಿದ್ದಾರೆ. ಈ ಬಾರಿ ಆಗಸ್ಟ್ 10ರಂದೇ ಸ್ವಾತಂತ್ರ್ಯೋತ್ಸವ ಆಚರಿಸಿರುವುದಾಗಿ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ