ಬಾಂಗ್ಲಾ ಮಸೀದಿ ಮೇಲೆ ಹೆಫಾ ಜತ್- ಇ-ಇಸ್ಲಾಮ್ ಉಗ್ರಗಾಮಿಗಳ ದಾಳಿ
Team Udayavani, Apr 11, 2021, 6:30 AM IST
ಢಾಕಾ: ಬಾಂಗ್ಲಾದೇಶದ ಗಾಯ್ಬಂಧ ಜಿಲ್ಲೆಯ ಮಸೀದಿಯೊಂದರ ಮೇಲೆ ಹೆಫಾ ಜತ್- ಇ-ಇಸ್ಲಾಮ್ ಉಗ್ರಗಾಮಿಗಳು ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಘಟನೆ ಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಗಾಯ್ಬಂಧ ಜಿಲ್ಲೆಯ ಸುಂದರ್ಗಂಜ್ ಪ್ರದೇಶದ ಸಿಲಾಮೊನಿ ಮಸೀದಿಯಲ್ಲಿ ಶುಕ್ರವಾರ ಸಂಜೆಯ ಪ್ರಾರ್ಥನೆ ಮುಗಿದ ಮೇಲೆ ದಿಢೀರ್ ದಾಳಿ ನಡೆದಿದೆ. ಈ ವೇಳೆ ಅಲ್ಲಿನ ಇಮಾಮ್ ಆಗಿರುವ ಮೊತ್ಲಾಬುದ್ದೀನ್ರ ಮೊಬೈಲನ್ನು ಕಿತ್ತುಕೊಂಡು, ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಜನರಿಗೆ ಹೊರ ಹೋಗುವಂತೆ ದಾಳಿಕೋರರು ಬೆದರಿಸಿದ್ದಾರೆ. ಇವರೆಲ್ಲ ಹೆಫಾಜತ್ ಚಟುವಟಿಕೆಯಲ್ಲಿ ದೀರ್ಘಕಾಲದಿಂದ ಪಾಲ್ಗೊಂಡವರು ಎಂದು ಮೊತ್ಲಾಬುದ್ದೀನ್ ಹೇಳಿದ್ದಾರೆ.
ಆದರೆ ಪೊಲೀಸರು ಇದನ್ನು ನಿರಾಕರಿಸಿದ್ದಾರೆ. ಅವರ ಪ್ರಕಾರ ಮಸೀದಿಯ ಆಡಳಿತ ಮಂಡಳಿಯೊಂದಿಗಿನ ಭಿನ್ನಮತದಿಂದ ಈ ದಾಳಿಯಾಗಿದೆ. ಇದಕ್ಕೂ ಹೆಫಾಜತ್ ಉಗ್ರ ಸಂಘಟನೆಗೂ ಸಂಬಂಧವಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ