Udayavni Special

ಮಾರುಕಟ್ಟೆ ಹಿರಿಯಣ್ಣನದು ತ್ರಿಶಂಕು ಸ್ವರ್ಗ !

ಹಳೆ ಕಟ್ಟಡ ಕೆಡವಲು ಅನುಮತಿ ಸಿಕ್ಕಿಲ್ಲ ; ಹೊಸ ಕಟ್ಟಡಕ್ಕೆ ಕಾಲ ಕೂಡಿ ಬಂದಿಲ್ಲ

Team Udayavani, Apr 11, 2021, 6:20 AM IST

ಮಾರುಕಟ್ಟೆ ಹಿರಿಯಣ್ಣನದು ತ್ರಿಶಂಕು ಸ್ವರ್ಗ !

ಗೊಂದಲ – ವಿವಾದದಿಂದ ನಗರದ ಅತ್ಯಂತ ದೊಡ್ಡ ಹಾಗೂ ಹಳೆಯ ಮಾರುಕಟ್ಟೆಯಾದ ಸೆಂಟ್ರಲ್‌ ಮಾರ್ಕೆಟ್‌ನ ಪೂರ್ಣ ಪ್ರಯೋಜನ ಜನತೆಗೆ ಸಿಗದಂತಾಗಿದೆ. ಇನ್ನಾದರೂ ಅವುಗಳನ್ನು ನಿವಾರಿಸುವ ಕೆಲಸ ತುರ್ತಾಗಿ ಆಗಬೇಕಿದೆ.

ಮಹಾನಗರ: ನಗರದ ಹೃದಯ ಭಾಗವಾದ ಹಂಪನಕಟ್ಟೆ ಬಳಿಯ ಕೇಂದ್ರ ಮಾರುಕಟ್ಟೆಗೆ 7 ದಶಕಗಳಿಗೂ ಅಧಿಕ ಇತಿಹಾಸವಿದೆ. ಈಗಿರುವ ಶಿಥಿಲವಾದ ಕಟ್ಟಡಕ್ಕೆ 50 ವರ್ಷಗಳ ಚರಿತ್ರೆ ಇದೆ. ಆದರೆ ನಗರದ ಅತ್ಯಂತ ದೊಡ್ಡ ಹಾಗೂ ಹಳೆಯ ಮಾರುಕಟ್ಟೆಯಾದ ಸೆಂಟ್ರಲ್‌ ಮಾರ್ಕೆಟ್‌ ಪರಿಸ್ಥಿತಿ 11 ತಿಂಗಳಿನಿಂದ ತ್ರಿಶಂಕು ಸ್ಥಿತಿಯಲ್ಲಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಸ್ಮಾರ್ಟ್‌ ಮಾರ್ಕೆಟ್‌ ಆಗಿ ನಿರ್ಮಿಸಲು ಹಾಗೂ ಕೊರೊನಾ ಕಾರಣದಿಂದ ಸೆಂಟ್ರಲ್‌ ಮಾರ್ಕೆಟ್‌ ಅನ್ನು ಕಳೆದ ವರ್ಷ ಎಪ್ರಿಲ್‌ನಲ್ಲಿ ಮುಚ್ಚಲಾಗಿತ್ತು. ವ್ಯಾಪಾರಿಗಳು ಕೋರ್ಟ್‌ ಮೆಟ್ಟಲೇರಿದಾಗ, ನ್ಯಾಯಾಲಯವು ಅಧಿಕೃತ ವ್ಯಾಪಾರಸ್ಥರಿಗೆ ವಹಿವಾಟು ನಡೆಸಲು ಅವಕಾಶ ನೀಡುವಂತೆ ಸೂಚಿಸಿತು. ಆಗ ಪಾಲಿಕೆಯು 35 ಮಂದಿ ಅಧಿಕೃತ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸಿತು. ಕೆಲವರು ಅಕ್ಟೋಬರ್‌ನಿಂದ ವ್ಯವಹಾರ ಪುನರಾರಂಭಿಸಿದ್ದಾರೆ. ಈಗ ಮಾರ್ಕೆಟ್‌ ಕಟ್ಟಡದ ಹೊರ ಭಾಗ, ಒಳಗಡೆ ಬೆರಳೆಣಿಕೆಯ ವ್ಯಾಪಾರಿಗಳು ವ್ಯವಹಾರ ನಡೆಸು ತ್ತಿದ್ದಾರೆ. ಆದರೆ, ಗೊಂದಲ – ವಿವಾದದಿಂದ ಜನತೆಗೆ ಮಾರುಕಟ್ಟೆಯ ಪೂರ್ಣ ಪ್ರಯೋಜನ ಸಿಗದಂತಾಗಿದೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಸರಕಾರಿ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ (ಪಿಪಿಪಿ ಮಾದರಿ) 115 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡ ನಿರ್ಮಿಸಲು 2019 ಡಿಸೆಂಬರ್‌ನ ಪಾಲಿಕೆ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅದರಂತೆ ಅಲ್ಲಿನ ವ್ಯಾಪಾರಿಗಳನ್ನು ಸ್ಥಳಾಂತರಿಸಲು ನಿರ್ಧರಿಸಲಾಯಿತು. 2020 ಮಾರ್ಚ್‌ ನಲ್ಲಿ ಕೊರೊನಾ ಲಾಕ್‌ಡೌನ್‌ ಘೋಷಣೆ ಆದ ಸಂದರ್ಭ ಪಾಲಿಕೆಯು ಎ. 7ರಿಂದ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ವ್ಯಾಪಾರವನ್ನು ಸ್ಥಗಿತಗೊಳಿಸಿತು. ಈ ಸಂದರ್ಭ ಸಗಟು ವ್ಯಾಪಾರವನ್ನು ಬೈಕಂಪಾಡಿ ಎಪಿಎಂಸಿ ಮಾರ್ಕೆಟ್‌ಗೆ ಸ್ಥಳಾಂತರಿಸಿತು. ಅದರಂತೆ ಸಗಟು ವ್ಯಾಪಾರಿಗಳು ಬೈಕಂಪಾಡಿಯಲ್ಲಿ ವ್ಯವಹಾರ ಆರಂಭಿಸಿದರು. ಆದರೆ ರಿಟೇಲ್‌ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಿಲ್ಲ. ಅನಂತರ ಪರ್ಯಾಯ ವ್ಯವಸ್ಥೆಗೆ ನೆಹರೂ ಮೈದಾನದ ಬಳಿ 2 ಎಕರೆ ಜಾಗದಲ್ಲಿ 5.5 ಕೋ. ರೂ. ವೆಚ್ಚದಲ್ಲಿ ತಾತ್ಕಾಲಿಕ ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡ ನಿರ್ಮಿಸಲು ಶಿಲಾನ್ಯಾಸ ಮಾಡಿ ಕಾಮಗಾರಿ ಆರಂಭಿಸಲಾಗಿತ್ತು. ಈ 2 ಎಕರೆ ಜಾಗ ವನ್ನು 3 ವಿಭಾಗಗಳಾಗಿ ವಿಂಗಡಿಸಿ ಪುರಭವನ ಹಿಂಭಾಗ/ ಫುಟ್‌ಬಾಲ್‌ ಮೈದಾನ ಬಳಿ 28 ಮಾಂಸದಂಗಡಿಗಳು, ಇಂದಿರಾ ಕ್ಯಾಂಟೀನ್‌ ಬಳಿ 48 ಸುಸಜ್ಜಿತ ತರಕಾರಿ- ಹಣ್ಣುಗಳ ಮಳಿಗೆಗಳು, 205 ಸ್ಟಾಲ್‌ಗ‌ಳನ್ನು ನಿರ್ಮಿಸಲು, 96 ಇತರೆ ಅಂಗಡಿಗಳನ್ನು ಕ್ರಿಕೆಟ್‌ ಮೈದಾನದ ಬಲ ಬದಿ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು.

ಸೆಂಟ್ರಲ್‌ ಮಾರ್ಕೆಟ್‌ನ ಈಗಿರುವ ಕಟ್ಟಡವನ್ನು ಕೆಡವಿ 115 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಹೊಸ ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡವನ್ನು ನಿರ್ಮಿಸುವ ಬಗ್ಗೆ 2018 ಅಕ್ಟೋಬರ್‌ನಲ್ಲಿಯೇ ಸ್ಮಾರ್ಟ್‌ ಸಿಟಿ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಆದರೆ, 3 ಬಾರಿ ಟೆಂಡರ್‌ಗಳನ್ನು ಆಹ್ವಾನಿಸಿದ್ದರೂ ಯಾವುದೇ ಬಿಡ್‌ದಾರರು ಆಸಕ್ತಿ ವಹಿಸಿರಲಿಲ್ಲ. ಬಳಿಕ ಷರತ್ತುಗಳಲ್ಲಿ ಕೆಲವು ಬದಲಾವಣೆ ಮಾಡಿ 4ನೇ ಬಾರಿಗೆ ಟೆಂಡರ್‌ ಆಹ್ವಾನಿಸಿದ್ದು, ಆಸಕ್ತಿ ತೋರಿದ ಬಿಡ್ಡರ್‌ಗೆ ಕಾಮಗಾರಿಯನ್ನು
ವಹಿಸಲಾಗಿದೆ. ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ.

-  ಹಿಲರಿ ಕ್ರಾಸ್ತಾ

ಟಾಪ್ ನ್ಯೂಸ್

ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್‌: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ

ಅಡುಗೆ ಉಪ್ಪಿನಲ್ಲಿದೆ ಸೂಕ್ಷ್ಮ ಪ್ಲಾಸ್ಟಿಕ್‌: ಮೂರು ಸಂಸ್ಥೆಗಳ ಅಧ್ಯಯನದಿಂದ ದೃಢ

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌

ಪಿಎಕೆ ಲೀಗ್‌ನಲ್ಲಿ ಆಡಲ್ಲವೆಂದ ಮಾಂಟಿ ಪನೇಸರ್‌

ಉಡುಪಿ : ಆ. 16 ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ : ಜಿಲ್ಲಾಧಿಕಾರಿ ಜಿ.ಜಗದೀಶ್  ಆದೇಶ 

ಉಡುಪಿ : ಆ. 16 ರವರೆಗೆ ನೈಟ್ ಕರ್ಫ್ಯೂ ವಿಸ್ತರಣೆ : ಜಿಲ್ಲಾಧಿಕಾರಿ ಜಿ.ಜಗದೀಶ್  ಆದೇಶ 

ರಾಜ್ಯಪಾಲರಿಗೆ ಕೈದಿಗಳ ಬಿಡುಗಡೆ ಅಧಿಕಾರ: ಸುಪ್ರೀಂಕೋರ್ಟ್‌

ರಾಜ್ಯಪಾಲರಿಗೆ ಕೈದಿಗಳ ಬಿಡುಗಡೆ ಅಧಿಕಾರ: ಸುಪ್ರೀಂಕೋರ್ಟ್‌

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಮನೆಯೊಳಗೆ ಅಕ್ರಮ ಪ್ರವೇಶಿಸಿ ಅಸಭ್ಯ ವರ್ತನೆ ತೋರಿದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಲೈಂಗಿಕವಾಗಿ ಬಳಸಿ ವಂಚಿಸುವ ಪ್ರಕರಣಗಳಿಗೆ ವಿಶೇಷ ಕಾನೂನು ಬೇಕು: ಅಲಹಾಬಾದ್‌ ಹೈಕೋರ್ಟ್‌

ಲೈಂಗಿಕವಾಗಿ ಬಳಸಿ ವಂಚಿಸುವ ಪ್ರಕರಣಗಳಿಗೆ ವಿಶೇಷ ಕಾನೂನು ಬೇಕು: ಅಲಹಾಬಾದ್‌ ಹೈಕೋರ್ಟ್‌

ನೀಲಕಂಠರಾಯನ ಗಡ್ಡಿ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ: ಈಶ್ವರ ಖಂಡ್ರೆ

ನೀಲಕಂಠರಾಯನ ಗಡ್ಡಿ ಸಮಸ್ಯೆ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ: ಈಶ್ವರ ಖಂಡ್ರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

ಕರಾವಳಿ, ಮಲೆನಾಡಿನಲ್ಲಿ ಮಳೆ ಕೊರತೆ !

ಕರಾವಳಿ, ಮಲೆನಾಡಿನಲ್ಲಿ ಮಳೆ ಕೊರತೆ !

ಕೇರಳ ಗಡಿ ಭಾಗದಲ್ಲಿರುವ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಆದೇಶ

ಕೇರಳ ಗಡಿ ಭಾಗದಲ್ಲಿರುವ ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಆದೇಶ

ಭಕ್ತಾರ ಗಮನಕ್ಕೆ:ಧರ್ಮಸ್ಥಳ,ಕಟೀಲು,ಕುಕ್ಕೆ ದೇವಸ್ಥಾನ ವಾರಾಂತ್ಯ ಬಂದ್; ಡಿಸಿ ಆದೇಶದಲ್ಲೇನಿದೆ

ಭಕ್ತರ ಗಮನಕ್ಕೆ: ಧರ್ಮಸ್ಥಳ,ಕಟೀಲು,ಕುಕ್ಕೆ ದೇವಸ್ಥಾನ ವಾರಾಂತ್ಯ ಬಂದ್; ಡಿಸಿ ಆದೇಶದಲ್ಲೇನಿದೆ

ಸೈಕಲ್‌ ಮೂಲಕ  ಲಡಾಖ್‌ಗೆ ಹೊರಟ ಯುವಕ

ಸೈಕಲ್‌ ಮೂಲಕ  ಲಡಾಖ್‌ಗೆ ಹೊರಟ ಯುವಕ

MUST WATCH

udayavani youtube

ಭಾರಿ ಮಳೆಗೆ ತತ್ತರಿಸಿದ ಮಧ್ಯಪ್ರದೇಶ

udayavani youtube

ಉಳ್ಳಾಲದ ಮಾಜಿ ಶಾಸಕನ ಮನೆಮೇಲೆ NIA ದಾಳಿ

udayavani youtube

ಕೃಷಿ ಕ್ಷೇತ್ರ ಯಾರಿಗೂ ಆತ್ಮಹತ್ಯೆ ಮಾಡಲು ಬಿಡೂದಿಲ್ಲ

udayavani youtube

ಆರೋಗ್ಯಕರ ಜೀವನಕ್ಕೆ ಸರಳ ಸೂತ್ರ ದಿನಚರಿ

udayavani youtube

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದ ಅಧಿಕಾರ ಸ್ವೀಕಾರ ಕಾರ್ಯಕ್ರಮ

ಹೊಸ ಸೇರ್ಪಡೆ

ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

ಕೊರೊನಾ ಆತಂಕ ನಡುವೆ ಸಣ್ಣ ಗಾತ್ರದ ವಿಗ್ರಹಕ್ಕೆ ಹೆಚ್ಚಿನ ಬೇಡಿಕೆ

ಕರಾವಳಿ, ಮಲೆನಾಡಿನಲ್ಲಿ ಮಳೆ ಕೊರತೆ !

ಕರಾವಳಿ, ಮಲೆನಾಡಿನಲ್ಲಿ ಮಳೆ ಕೊರತೆ !

ಸರಳ ಬೋಧನೆಗೆ ಬಹುವಿಧ ಕಲಿಕೆ ಕಾರ್ಡ್‌

ಸರಳ ಬೋಧನೆಗೆ ಬಹುವಿಧ ಕಲಿಕೆ ಕಾರ್ಡ್‌

ವರ್ಷದಿಂದ ಉದ್ಘಾಟನೆಯಾಗದೆ ಉಳಿದ ಇ-ಗ್ರಂಥಾಲಯ

ವರ್ಷದಿಂದ ಉದ್ಘಾಟನೆಯಾಗದೆ ಉಳಿದ ಇ-ಗ್ರಂಥಾಲಯ

Untitled-1

ಹಾಕಿ: 4 ದಶಕಗಳ ಪದಕ ಬರ ನೀಗೀತೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.