ಸುಶಾಂತ್ ಸಿಂಗ್ ನಿಧನ ಪ್ರಕರಣ: ಎನ್‌ಸಿಬಿ ಅಧಿಕಾರಿಗಳಿಂದ ಮತ್ತೆ ಮೂವರ ಬಂಧನ
Team Udayavani, Feb 5, 2021, 9:36 PM IST
ಮುಂಬೈ: ಬಾಲಿವುಡ್ ತಾರೆ ಸುಶಾಂತ್ ಸಿಂಗ್ ರಜಪೂತ್ ನಿಧನಕ್ಕೆ ಕಾರಣವಾಗಿದ್ದ ಡ್ರಗ್ಸ್ ಪ್ರಕರಣದಲ್ಲಿ; ಭಾರತ ಮಾದಕದ್ರವ್ಯ ನಿಗ್ರಹ ಸಂಸ್ಥೆ (ಎನ್‌ಸಿಬಿ) ಮತ್ತೆ ಮೂವರನ್ನು ಬಂಧಿಸಿದೆ.
ತಾರಾ ವ್ಯವಸ್ಥಾಪಕ ರಹಿಲಾ ಫರ್ನಿಚರ್‌ವಾಲಾ, ಬ್ರಿಟಿಷ್ ಪ್ರಜೆ ಕರಣ್ ಸಜಾನಿ, ಜಗ್ತಾಪ್ ಸಿಂಗ್ ಆನಂದ್ ಬಂಧಿತರು. ಜಗ್ತಾಪ್ ಕಳೆದವರ್ಷ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಕರಮ್‌ಜೀತ್ ಸಿಂಗ್ ಆನಂದ್ ಸಹೋದರ. ಮುಂಬೈನ ಬಾಂದ್ರಾ, ಖಾರ್ ಉಪನಗರದಲ್ಲಿ ಶೋಧನೆ ನಡೆಸಿದ ಎನ್‌ಸಿಬಿ ಅಧಿಕಾರಿಗಳು; 200 ಕೆಜಿಯಷ್ಟು ನಿಷೇಧಿತ ಮಾದಕದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ಇದರಲ್ಲಿ ಆಮದುಗೊಂಡ ಓಜಿ ಖುಷ್, ಮರಿಜುವಾನ ಕೂಡಾ ಸೇರಿವೆ. ಇವನ್ನೆಲ್ಲ ಅಮೆರಿಕದಿಂದ ತರಿಸಿಕೊಳ್ಳಲಾಗಿದೆ ಮೂಲಗಳು ಹೇಳಿವೆ.
ಇದನ್ನೂ ಓದಿ:ದೂರ ಪ್ರಯಾಣಿಸುವ ರೈಲುಗಳ “ಜನರಲ್ ಕ್ಲಾಸ್’ಗೂ ಇನ್ನು ರಿಸರ್ವೇಶನ್? IRCTC ಚಿಂತನೆ