ಮೂಡುಶೆಡ್ಡೆಯಲ್ಲಿ ಕತ್ತಿ ಝಳಪಿಸಿದ ಪ್ರಕರಣ: ಐವರ ಬಂಧನ
Team Udayavani, Oct 8, 2021, 6:12 PM IST
ಮಂಗಳೂರು: ಮೂಡುಶೆಡ್ಡೆಯಲ್ಲಿ ಕತ್ತಿ ಹಿಡಿದು ಓಡಾಡಿ ಬೆದರಿಕೆ ಖಾಕಿ ಭೀತಿ ಹುಟ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿ 5 ಮಂದಿ ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮೂಡುಶೆಡ್ಡೆಯಲ್ಲಿ ಅ.6ರಂದು ರಾತ್ರಿ 11ರ ವೇಳೆಗೆ ಆರೋಪಿ ತನ್ನ ಸ್ನೇಹಿತರ ಜತೆ ನಿಂತಿರುವಾಗ ನಾಲ್ಕು ಮಂದಿ ಆರೋಪಿಗಳು ಬಂದು ಒಬ್ಬ ರಾಜಕೀಯ ಪಕ್ಷದ ಮುಖಂಡನ ಪರವಾಗಿ ಮಾತನಾಡುತ್ತೀಯಾ ಎಂದು ಬೈದು ಹಲ್ಲೆ ಮಾಡಿದ್ದರು.ಈ ಕುರಿತಾಗಿ ಪ್ರಕರಣ ದಾಖಲಾಗಿತ್ತು. ಮರುದಿನ ಸಂಜೆ ಹಲ್ಲೆಗೊಳಗಾದವ, ಆತನ ಸಹೋದರ ಹಾಗೂ ಇತರ ಹಲವರು ಮೂಡುಶೆಡ್ಡೆ ಪರಿಸರಕ್ಕೆೆ ಬಂದು ಕತ್ತಿ ಹಿಡಿದು ಓಡಾಡಿ ಬೆದರಿಕೆ ಹಾಕಿದ್ದರು. ಘಟನೆಯ ವೀಡಿಯೋ ವೈರಲ್ ಆಗಿತ್ತು.
ಬಂಧಿತ ಇಬ್ಬರಿಗೆ ಅಪರಾಧ ಹಿನ್ನೆೆಲೆ ಇದ್ದು, ಕತ್ತಿ ಹಿಡಿದು ಓಡಾಡುತ್ತಿದ್ದವನ ವಿರುದ್ಧ ಮಂಗಳೂರು ಗ್ರಾಾಮಾಂತರ ಮತ್ತು ಸುರತ್ಕಲ್ ಠಾಣೆಗಳಲ್ಲಿ 2 ಪ್ರಕರಣ ಇದೆ. ಇನ್ನೋರ್ವನ ವಿರುದ್ಧ 2016ರಲ್ಲಿ ಕೊಲೆ ಪ್ರಕರಣ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿದ್ದು,ಇಬ್ಬರೂ ಕಾವೂರು ಠಾಣೆಯ ರೌಡಿಶೀಟರ್‌ಗಳಾಗಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಸ್ಥಳೀಯ ರಾಜಕೀಯ ಮುಖಂಡರೊಬ್ಬರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಬಲ ಸೂಚಿಸಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.