ನ್ಯೂಜಿಲೆಂಡ್ ನಲ್ಲಿ 7.1 ತೀವ್ರತೆಯ ಭೂಕಂಪ
ನ್ಯೂಜಿಲೆಂಡ್ ನ ಭೂಕಂಪ
Team Udayavani, Mar 4, 2021, 7:51 PM IST
ಆಕ್ಲೆಂಡ್ : ಗುರುವಾರ ಸಂಜೆ ನ್ಯೂಜಿಲೆಂಡ್‌ನ ಆಕ್ಲೆಂಡ್ ಬಳಿ 7.1 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ವಾಹಿನಿಗಳು ವರದಿ ಮಾಡಿವೆ.
ಭೂಕಂಪನದ ಕೇಂದ್ರಬಿಂದು ನ್ಯೂಜಿಲೆಂಡ್‌ನ ಆಕ್ಲೆಂಡ್‌ನ ಪೂರ್ವಕ್ಕೆ 414 ಕಿ.ಮೀ ದೂರದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಸಂಜೆ 6:57ರ ಸುಮಾರಿಗೆ ಭೂಮಿಯು ತೀವ್ರವಾಗಿ ನಡುಗಿದ್ದು, ಭೂಮಿಯ ಮೇಲಿಂದ ಸುಮಾರು 10 ಕಿ.ಮೀ ಆಳದಲ್ಲಿ ಕಂಪಿಸಿದೆ ಎಂದು ಹೇಳಲಾಗಿದೆ.
ನ್ಯೂಜಿಲೆಂಡ್ ನ ಹಲವಾರು ಕಡೆ ಕಂಪನವಾಗಿದ್ದು, ಆಕ್ಲೆಂಡ್,ವೆಲ್ಲಿಂಗ್ಟನ್ ಮತ್ತು ಕ್ರೈಸ್ಟ್‌ಚರ್ಚ್ ನಲ್ಲಿ ಇದರ ಅನುಭವವಾಗಿದೆ ಎಂದು ವರದಿಯಾಗಿದೆ.