LONDON: ಮದುವೆಯಾದ ಖ್ಯಾತ ಬರಹಗಾರ ಅಮೀಶ್
Team Udayavani, May 18, 2023, 8:04 AM IST
ಹೊಸದಿಲ್ಲಿ: ಶಿವ ಸರಣಿ ಪುಸ್ತಕಗಳ ಮೂಲಕವೇ ಓದುಗರ ಮೆಚ್ಚುಗೆಗೆ ಪಾತ್ರರಾದ ಖ್ಯಾತ ಬರಹಗಾರ ಅಮೀಶ್ ತ್ರಿಪಾಠಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು ಲಂಡನ್ನಲ್ಲಿ ಸರಳವಾಗಿ ತಮ್ಮ ವಿವಾಹ ಸಮಾ ರಂಭ ನೆರವೇರಿಸಿಕೊಂಡಿರುವುದಾಗಿ ಹೇಳಿದ್ದಾರೆ. ಜನವರಿ ಯಲ್ಲಷ್ಟೇ ಶಿವಾನಿ ಎಂಬವರೊಂದಿಗೆ ನಿಶ್ಚಿತಾರ್ಥ ಮಾಡಿ ಕೊಂಡಿದ್ದ ತ್ರಿಪಾಠಿ ಮಂಗಳವಾರ ಲಂಡನ್ನಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಈ ಕುರಿತು ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಅವರು “ಶಿವನ ಕೃಪೆ, ನಿಮ್ಮೆಲ್ಲರ ಪ್ರೀತಿಯೊಂದಿಗೆ ಲಂಡನ್ನಲ್ಲಿ ವಿವಾಹ ಜೀವನಕ್ಕೆ ಕಾಲಿಟ್ಟಿದ್ದೇನೆ’ ಎಂದಿದ್ದಾರೆ.