ಬೃಹತ್ ರೋಡ್ ಶೋ: ಬಂಗಾಳದ ರಿಕ್ಷಾವಾಲಾ ನಿವಾಸದಲ್ಲಿ ಭೋಜನ ಸವಿದ ಅಮಿತ್ ಶಾ
ಬಿಜೆಪಿ ಅಭ್ಯರ್ಥಿ ರಾಜೀವ್ ಬ್ಯಾನರ್ಜಿ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.
Team Udayavani, Apr 7, 2021, 5:02 PM IST
ಕೋಲ್ಕತಾ: ಪಶ್ಚಿಮಬಂಗಾಳದ ಹೌರಾ ಜಿಲ್ಲೆಯ ದೋಮ್ಜೂರ್ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ(ಏಪ್ರಿಲ್ 07) ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೃಹತ್ ರೋಡ್ ಶೋ ನಡೆಸಿದ ನಂತರ ರಿಕ್ಷಾವಾಲಾರೊಬ್ಬರ ಮನೆಯಲ್ಲಿ ಭೋಜನ ಸವಿದಿರುವುದಾಗಿ ವರದಿ ತಿಳಿಸಿದೆ.
ಪುಟ್ಟ ಮನೆಯಲ್ಲಿ ಅಮಿತ್ ಶಾ ಅವರು ನೆಲದ ಮೇಲೆ ಕುಳಿತು ಭೋಜನ ಸವಿದಿದ್ದರು. ಅನ್ನ, ದಾಲ್, ತರಕಾರಿ ಹಾಗೂ ಸಲಾಡ್ ಸೇವಿಸಿರುವುದಾಗಿ ವರದಿ ಹೇಳಿದೆ. ಈ ಸಂದರ್ಭದಲ್ಲಿ ಶಾ ಜತೆಗೆ ದೋಮ್ಜೂರ್ ಬಿಜೆಪಿ ಅಭ್ಯರ್ಥಿ ರಾಜೀವ್ ಬ್ಯಾನರ್ಜಿ ಹಾಗೂ ಇತರ ಮುಖಂಡರು ಉಪಸ್ಥಿತರಿದ್ದರು.
ಬೆಳಗ್ಗೆ ದೋಮ್ಜೂರ್ ನಲ್ಲಿ ಅಮಿತ್ ಶಾ ಅವರು ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದ್ದರು. ಹೂವಿನಿಂದ ಅಲಂಕರಿಸಿದ್ದ ವಾಹನದಲ್ಲಿ ತೆರಳಿದ್ದ ಶಾ, ಬಿಜೆಪಿ ಅಭ್ಯರ್ಥಿ ರಾಜೀವ್ ಬ್ಯಾನರ್ಜಿ ರಸ್ತೆಯ ಎರಡೂ ಕಡೆಗಳಲ್ಲಿ ನೆರೆದಿದ್ದ ಅಪಾರ ಜನಸ್ತೋಮದತ್ತ ಕೈಬೀಸಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು.
ಪ್ರಚಾರ ಯಾತ್ರೆಯ ವೇಳೆ ವಾದ್ಯಗಳಿದ್ದು, ಸಾರೇ ಜಹಾಂಸೇ ಅಚ್ಚ ಹಾಡನ್ನು ನುಡಿಸಿದ್ದು, ನೆರೆದಿದ್ದ ಜನರತ್ತ ಅಮಿತ್ ಶಾ ಅವರು ಹೂವಿನ ಎಸಳನ್ನು ಎಸೆದು ಅಭಿಮಾನ ವ್ಯಕ್ತಪಡಿಸಿರುವುದಾಗಿ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಾರತದ ಔಷಧ ರಫ್ತಿನಲ್ಲಿ ಶೇ.18ರಷ್ಟು ಪ್ರಗತಿ : 24.44 ಶತ ಕೋಟಿ ಡಾಲರ್ ಮೌಲ್ಯದ ಔಷಧ ರಫ್ತು
ಕಮಲ ಹ್ಯಾರಿಸ್ ಗೆ ಕೊಲೆ ಬೆದರಿಗೆ : ಮಹಿಳೆ ಬಂಧನ
ಪ್ರಧಾನಿ ಮೋದಿ ಮಾತಿಗೆ ಮನ್ನಣೆ : ಕುಂಭಮೇಳ ಅಂತ್ಯ
ಮಹಾರಾಷ್ಟ್ರ : ಕಾರ್ಖಾನೆಯ ಗೋಡೆ ಕುಸಿದು ಮೂವರು ಕಾರ್ಮಿಕರು ಸಾವು, ನಾಲ್ಕು ಮಂದಿಗೆ ಗಾಯ
ದೆಹಲಿಯಲ್ಲಿ 24 ಗಂಟೆಯಲ್ಲಿ, 24,000 ಪ್ರಕರಣ ಪತ್ತೆ : ಆಕ್ಸಿಜನ್,ಬೆಡ್ ಕೊರತೆ
MUST WATCH
ಹೊಸ ಸೇರ್ಪಡೆ
ಒಂದೇ ದಿನ 2,433 ಸಾರಿಗೆ ನೌಕರರ ಅಮಾನತು : 11 ದಿನಗಳಲ್ಲಿ ಇಂಥ ಕ್ರಮ ಇದೇ ಮೊದಲು
ಪಾರಂಪರಿಕ ತಾಣಗಳ ರಕ್ಷಣೆ ನಮ್ಮೆಲ್ಲರ ಹೊಣೆ : ಇಂದು ವಿಶ್ವ ಪರಂಪರೆ ದಿನ
ಟೀಕಿಸಿದ ಕ್ರಿಕೆಟ್ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್ ಚಹರ್ !
ಕುಕ್ಕೆ ಸುಬ್ರಹ್ಮಣ್ಯ : ವಾರ್ಷಿಕ ಆದಾಯ 68.94 ಕೋ.ರೂ. : ಕಳೆದ ಬಾರಿಗಿಂತ 29 ಕೋ.ರೂ. ಕಡಿಮೆ
5 ವರ್ಷಗಳಲ್ಲಿ ಚಿರತೆಗಳ ಸಂಖ್ಯೆ ದುಪ್ಪಟ್ಟು : ದೇಶದಲ್ಲೇ ಕರ್ನಾಟಕಕ್ಕೆ ದ್ವಿತೀಯ ಸ್ಥಾನ