ಅಯೋಧ್ಯೆ: 1528ರಿಂದ 2020ರ ಅಗಸ್ಟ್‌ 5ರ ವರೆಗೆ


Team Udayavani, Aug 4, 2020, 8:00 PM IST

Ayodhya 1

ಮಣಿಪಾಲ: ಅಯೋಧ್ಯೆ ಭೂಮಿಯ ತಗಾದೆ ಬ್ರಿಟಿಷ್‌ ಆಡಳಿತದ ಕಾಲದಿಂದ ಬಳುವಳಿಯಾಗಿ ಬಂದಿತ್ತು. ರಾಜರ ಆಡಳಿತದ ಕಾಲದಲ್ಲಿ ಹುಟ್ಟಿಕೊಂಡ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಯತ್ನಿಸಿದ ಹಲವು ಪ್ರಯತ್ನಗಳು ವಿಫ‌ಲವಾಗಿದ್ದವು. ಈ ನಿಟ್ಟಿನಲ್ಲಿ ನ್ಯಾಯಾಂಗದ ಮೊರೆ ಹೋಗುವ ನಿರ್ಧಾರ ಕೈಗೊಂಡರೂ ಅಲ್ಲೂ ಇತ್ಯರ್ಥ ಕಾಣದೇ ಮತ್ತೆ ಕೋರ್ಟ್‌ ಕಟಕಟೆಯ ಹೊರಗೆ ಸಂಧಾನ ನಡೆಸಲು ವೇದಿಕೆಯೊಂದು ಸಿದ್ಧವಾಗಿತ್ತು. ಆದರೆ ಹಲವು ಸಂಧಾನಗಳೂ ಮುರಿದು ಬಿದ್ದಿತ್ತು. ಬಳಿಕ ಸುಪ್ರೀಂ ಕೋರ್ಟ್‌ ತ್ವರಿತ ವಿಚಾರಣೆಯ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡುವ ನಿರ್ಧಾರಕ್ಕೆ ಬಂದಿತ್ತು. ಇವೆಲ್ಲದರ ಫ‌ಲವಾಗಿ ಅಯೋಧ್ಯೆಯಲ್ಲಿ ನಾಳೆ (ಬುಧವಾರ) ರಾಮ ಮಂದಿರಕ್ಕೆ ಭೂಮಿ ಪೂಜೆಯಾಗಲಿದೆ.

ಇಲ್ಲಿ ಅಯೋಧ್ಯೆ ವಿವಾದಿತ ಸ್ಥಳವಾಗಿ ಬದಲಾದ ಪರಿ ಹೇಗೆ ಎಂಬುದನ್ನು ಅನುಕ್ರಮವಾಗಿ ನೀಡಲಾಗಿದೆ.

1528: ಮೊಘಲ್‌ ದೊರೆ ಬಾಬರ್‌ ತನ್ನ ಆಡಳಿತದ ಅವಧಿಯಲ್ಲಿ ಅಯೋಧ್ಯೆ ಭೂಮಿಯಲ್ಲಿ ಬಾಬರಿ ಮಸೀದಿ ನಿರ್ಮಾಣ.
1611: ಅಯೋಧ್ಯೆಯಲ್ಲಿ ಶ್ರೀರಾಮ ನಿರ್ಮಿಸಿದ ಕೋಟೆ, ಸ್ಮಾರಕಗಳನ್ನು ನೋಡಿದ್ದೇನೆ ಎಂದು ಉಲ್ಲೇಖೀಸಿದ ಬ್ರಿಟಿಷ್‌ ವ್ಯಾಪಾರಿ ವಿಲಿಯಂ ಫಿಂಚ್‌.
1717: ರಾಜಪೂತ್‌ ದೊರೆ 2ನೇ ಜೈ ಸಿಂಗ್‌ನಿಂದ ಮಸೀದಿ ಇದ್ದ ಜಾಗದ ಖರೀದಿ. ಮಸೀದಿಯೊಳಗೆ ಇದ್ದ ರಾಮನ ವಿಗ್ರಹವನ್ನು ಹೊರಗೆ ತಂದು ಪೂಜಿಸುತ್ತಿದ್ದ ಹಿಂದೂಗಳು.
1768: ಕ್ರಿಶ್ಚಿಯನ್‌ ಪಾದ್ರಿ ಜೋಸೆಫ್ ಟಿಫೆಂತಾಲರ್‌ ಮಸೀದಿ ನಿರ್ಮಾಣವನ್ನು ನೋಡಿದ್ದೇನೆ. ಬಾಬರ್‌ ಅಲ್ಲ ಔರಂಗಜೇಬ್‌ ನಿರ್ಮಿಸಿದ್ದಾನೆ ಎಂಬ ಹೇಳಿಕೆ.
1853: ಅಯೋಧ್ಯೆ ವಿವಾದಿತ ಸ್ಥಳದ ಕುರಿತಂತೆ ಮೊದಲ ಹಿಂಸಾಚಾರ. ಬ್ರಿಟಿಷರ ಆಡಳಿತದ ಅವಧಿಯಲ್ಲೇ ಬಾಬರ್‌ ಮಸೀದಿಯ ಮೇಲೆ ಹಿಂದೂಗಳ ಆಕ್ರೋಶ.
1859: ಆಯೋಧ್ಯೆ ವಿವಾದಗೊಳ್ಳುತ್ತಿರುವುದನ್ನು ಕಂಡ ಬ್ರಿಟಿಷ್‌ ಸರಕಾರ ವಿವಾಧಿತ ಭೂಮಿಯನ್ನು 2 ಪಾಲು ಮಾಡಿ ಹಿಂದೂಗಳಿಗೆ ಹಾಗೂ ಮುಸ್ಲಿಂಮರಿಗೆ ಹಂಚಿಕೆ. 90 ವರ್ಷಗಳ ಇದು ಕಾಲ ಸ್ಥಿರವಾಗಿತ್ತು.
1949: ಡಿಸೆಂಬರ್‌ನಲ್ಲಿ ವಿವಾದಿತ ಕಟ್ಟದಲ್ಲಿ ಭಗವಾನ್‌ ಶ್ರೀರಾಮಚಂದ್ರನ ಮೂರ್ತಿಯನ್ನು ಪ್ರತಿಷ್ಠಾಪನೆ. ಕೋರ್ಟ್‌ನಲ್ಲಿ ಹಿಂದೂಗಳು ಹಾಗೂ ಮುಸ್ಲಿಂ ನಾಯಕರ ದಾವೆ. ಅಯೋಧ್ಯೆಯನ್ನು ವಿವಾದಿತ ಭೂಮಿ ಎಂದು ಘೋಷಿಸಿದ ಕೋರ್ಟ್‌.
1959: ಡಿ. 17ರಂದು ನಿರ್ಮಮೋಹಿ ಅಖರಾ ಎಂಬವರಿಂದ ವಿವಾದಿತ ಸ್ಥಳದ ಸ್ವಾಧೀನ ಕುರಿತ ಪ್ರಕರಣ ದಾಖಲು.
1961: ವಿವಾದಿತ ಜಾಗ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು. ರಾಮನ ಮೂರ್ತಿ ಪ್ರತಿಷ್ಠಾಪಿಸಿದ್ದ ತಪ್ಪು ಎಂದು ಡಿ. 18ರಂದು ಕೋರ್ಟ್‌ ಮೊರೆ ಹೋದ ಸುನ್ನಿ ಸೆಂಟ್ರಲ್‌ ಬೋರ್ಡ್‌ ಆಫ್ ವಕ್ಫ್.
1984: ವಿಶ್ವ ಹಿಂದೂ ಪರಿಷತ್‌ ವತಿಯಿಂದ ವಿವಾದಿತ ಭೂಮಿಯಲ್ಲಿ ರಾಮ ಮಂದಿರ ಕಟ್ಟುವ ಅಭಿಯಾನ ಆರಂಭ.
1986: ಫಾಝಿಯಾಭಾದ್‌ನ ಜಿಲ್ಲಾ ನ್ಯಾಯಾಲಯ ಅಯೋಧ್ಯೆಯ ಕಟ್ಟಡದ ಗೇಟ್‌ ಬಾಗಿಲು ತೆರೆಯಲು ಸೂಚನೆ. ಜತೆಗೆ ಕಟ್ಟದ ಒಳಗೆ ಶ್ರೀರಾಮನನ್ನು ಪೂಜಿಸಲು ಅನುಮತಿ. ಇದಕ್ಕೆ ಮುಸ್ಲಿಂ ಸಂಘಟನೆಗಳ ತೀವ್ರ ಆಕ್ಷೇಪ, ಬಾಬರಿ ಮಸೀದಿ ಆಕ್ಷನ್‌ ಕಮಿಟಿ ಸ್ಥಾಪನೆ.
1989: ಬಾಬರಿ ಮಸೀದಿಯ ಪಕ್ಕ ರಾಮ ಮಂದಿರ ಸ್ಥಾಪನೆಗೆ ಅನುಮತಿ ನೀಡಿದ ಅಂದಿನ ಪ್ರಧಾನಿ ರಾಜೀವ್‌ ಗಾಂಧಿ. ನವೆಂಬರ್‌ 9ರಂದು ರಾಮ ಮಂದಿರಕ್ಕೆ ಅಡಿಗಲ್ಲು ಹಾಕಿದ ವಿಶ್ವ ಹಿಂದೂ ಪರಿಷತ್‌.
1990: ಸೆ. 25ರಂದು ಬಿಜೆಪಿ ನೇತಾರ ಲಾಲ್‌ ಕೃಷ್ಣ ಅಡ್ವಾಣಿಯವರು ಸೋಮನಾಥದಿಂದ ಅಯೋಧ್ಯೆಯ ವರೆಗೆ ರಥಯಾತ್ರೆ ಆರಂಭ. ಅಂದಿನ ಪ್ರಧಾನಿ ಪಿ.ವಿ. ನರಸಿಂಹರಾವ್‌ ಅವರಿಂದ ಯಾತ್ರೆಗೆ ಅನುಮತಿ. ಬಿಹಾರದ ಸಮಷ್ಟಿಪುರದಲ್ಲಿ ಅಡ್ವಾಣಿ ಬಂಧನ.
1992: ವಿವಾದಿತ ಬಾಬರ್‌ ಮಸೀದಿಯನ್ನು ಡಿ. 6ರಂದು ಹಿಂದೂ ಕಾರ್ಯಕರ್ತರು / ಕರಸೇವಕರಿಂದ ಬಾಬರಿ ಮಸೀದಿ ಧ್ವಂಸ.
1993: 3 ತಿಂಗಳ ಬಳಿಕ ಲಿಬರ್ಹಾನ್‌ ಆಯೋಗದಿಂದ ಮಸೀದಿ ಕೆಡವಲಾದ ವಿಚಾರದ ಕುರಿತು ತನಿಖೆ ಪಾರಂಭ.
2002: ಹೈಕೋರ್ಟ್‌ನ ತ್ರಿ ಸದಸ್ಯ ಪೀಠದಿಂದ ವಿವಾದಿತ ಭೂಮಿತ ಒಡೆತನಕ್ಕಾಗಿ ಸಲ್ಲಿಸಲಾದ ಅರ್ಜಿಯ ವಿಚಾರಣೆ. ಜಾಗದ ಮೂಲವನ್ನು ಅರಿಯುವ ಸಲುವಾಗಿ ಭಾರತೀಯ ಪುರಾತಣ್ತೀ ಇಲಾಖೆಯಿಂದ ಜಾಗದ ಉತ್ಖಲನ.
2003: ಭಾರತೀಯ ಪುರಾತಣ್ತೀ ಇಲಾಖೆ ಮಸೀದಿ ನಿರ್ಮಿಸಿದ್ದ ಜಾಗದ ಅಡಿಯಲ್ಲಿ ದೇವಸ್ಥಾನ ಇದ್ದ ಕುರಿತು ಸ್ಪಷ್ಟತೆ.
2009: ಲಿಬರ್ಹಾನ್‌ ಸಮಿತಿಯಿಂದ ಲಕ್ನೋ ಕೋರ್ಟ್‌ಗೆ ಗೌಪ್ಯ ವರದಿ ಸಲ್ಲಿಕೆ.
2010: ಜುಲೈ. 26ರಂದು ತನ್ನ ತೀರ್ಪನ್ನು ಕಾಯ್ದಿರಿಸಿದ ಲಕ್ನೋ ಹೈಕೋರ್ಟ್‌. ಸಮಸ್ಯೆಯ ಇತ್ಯರ್ಥಕ್ಕಾಗಿ ಸರ್ವ ಪಕ್ಷದ ಅಭಿಪ್ರಾಯ ಸಂಗ್ರಹ. ಹೈ ಕೋರ್ಟ್‌ ವಿವಾದಿತ ಭೂಮಿಯನ್ನು 3 ಪಾಲು ಮಾಡಿ ಆದೇಶ. ಸುಪ್ರಿಂ ಕೋಟ್‌ ಮೆಟ್ಟಿಲೇರಿದ ಪ್ರಕರಣ.
2011: ಬಾಬರಿ ಮಸೀದಿ ಧ್ವಂಸ ಪ್ರಕರಣ ಅಡ್ವಾಣಿ ಹಾಗೂ ಇತರರ ಮೇಲೆ ಕ್ರಮಕ್ಕೆ ತೀರ್ಪು.
2015: ಸುಪ್ರಿಂ ಕೋರ್ಟ್‌ನಿಂದ ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ, ಮುರಳೀ ಮನೋಹರ ಜೋಷಿ ಅವರಿಗೆ ನೋಟಿಸ್‌.
2017: ಈ ಪ್ರಕರಣ ಅತ್ಯಂತ ಸೂಕ್ಷವಾಗಿದ್ದು, ನ್ಯಾಯಾಲಯದ ಹೊರಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆ ಎಂದು ಹೇಳಿದ ಕೋರ್ಟ್‌. ಲಾಲ್‌ಕೃಷ್ಣ ಅಡ್ವಾಣಿ, ಮುರಳೀ ಮನೋಹರ ಜೋಷಿ, ಉಮಾ ಭಾರತಿ ಹಾಗೂ ವಿನಯ್‌ ಕಠಿಯಾರ್‌ ಅವರ ಮೇಲೆ ಕ್ರಿಮಿನಲ್‌ ಪ್ರಕರಣ ದಾಖಲು.
2018: ಹಿರಿಯ ವಕೀಲ ರಾಜೀವ್‌ ಧವನ್‌ ನಿತ್ಯ ವಿಚಾರಣೆ ನಡೆಸುವ ಮೂಲಕ ಪ್ರಕರಣ ಕೊನೆಗೊಳಿಸಲು ಕೋರ್ಟ್‌ಗೆ ಮನವಿ ಸಲ್ಲಿಕೆ. ಸೆ. 27ರಂದು ಈ ಮನವಿಯನ್ನು ತಿರಸ್ಕರಿಸಿ, ವಿಚಾರಣೆ ನಡೆಯುವ ದಿನಾಂಕ ಪ್ರಕಟಿಸಿದ ಕೋರ್ಟ್‌.
2019: ದಶಕಗಳ ಹಳೆಯ ಪ್ರಕರಣವನ್ನು ಇತ್ಯರ್ಥಗೊಳಿಸಲು ನಿವೃತ್ತ ನ್ಯಾಯಮೂರ್ತಿ ಕಲೀಫ‌ುಲ್ಲಾ, ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್‌ ಮತ್ತು ಖ್ಯಾತ ಮಧ್ಯಸ್ಥಿಕೆದಾರ, ಹಿರಿಯ ವಕೀಲ ಶ್ರೀರಾಮ್‌ ಪಂಚು ಸಮಿತಿಯಮೂರು ಸದಸ್ಯರ ಮಧ್ಯಸ್ಥಿಕೆ ಸಮಿತಿ ರಚಿಸಿದ ಸುಪ್ರಿಂ ಕೋರ್ಟ್‌. ಸ್ಪಷ್ಟ ನಿರ್ಧಾರಕ್ಕೆ ಬಾರದೇ ಸಂಧಾನ ವಿಫ‌ಲ.
2019: ಸಂಧಾನ ವಿಫ‌ಲಗೊಂಡ ಕಾರಣ ಅಗಸ್ಟ್‌ 6ರ ಬಳಿಕ ನಿತ್ಯ ಅಯೋಧ್ಯೆ ಪ್ರಕರಣವನ್ನು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ. 2018ರಲ್ಲಿ ವಕೀಲ ರಾಜೀವ್‌ ಧವನ್‌ ಇದೇ ಅವಕಾಶವನ್ನು ಕೇಳಿದ್ದರು. ಆದರೆ ಅಂದು ಮಾನ್ಯ ನ್ಯಾಯಾಲಯ ಇವರ ಅರ್ಜಿಯನ್ನು ತಳ್ಳಿಹಾಕಿತ್ತು. ಅಕ್ಟೋಬರ್‌ 16ರಂದು ಕಡೆಯ ವಿಚಾರಣೆ.
2019: ಸತತ ವಿಚಾರಣೆ ಬಳಿಕ ನವೆಂಬರ್‌ 19ರಂದು ಸುಪ್ರೀಂಕೋರ್ಟ್‌ ತ್ರಿಸದಸ್ಯ ಪೀಠದಿಂದ ವಿವಾದಿತ ಜಾಗದ ಅಕ್ಕಪಕ್ಕ ಇರುವ 67 ಎಕ್ರೆ ಭೂಮಿ ರಾಮ ಜನ್ಮ ಭೂಮಿ ವ್ಯಾಸ್‌ ಸಮಿತಿಗೆ ಸೇರಿದ್ದು ಎಂಬುದಾಗಿ ತೀರ್ಪು ಪ್ರಕಟ.
2020: ಫೆ. 5ರಂದು ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಸಮಿತಿ’ ರಚಿಸಿದ ಕೇಂದ್ರ ಸರಕಾರ.
2020: ಆಗಸ್ಟ್‌ 5ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಿರ್ಧರಿಸಿದ ಉತ್ತರ ಪ್ರದೇಶ ಸರಕಾರ. ಬುಧವಾರ ನೆರವೇರಲಿರುವ ಶ್ರೀರಾಮ ಮಂದಿರದ ಭೂಮಿ ಪೂಜೆ.

ಟಾಪ್ ನ್ಯೂಸ್

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

Ayodhya: ಪೇಜಾವರ ಶ್ರೀಗಳ ನೇತೃತ್ವದಲ್ಲಿ ಇಂದು ನಡೆದ ಮಂಡಲೋತ್ಸವ

ram mandir imp

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

ram mandir 2

Ayodhya: ಅಯೋಧ್ಯೆಯಲ್ಲಿ ಕರ್ನಾಟಕ ಸರಕಾರದಿಂದ ಅತಿಥಿಗೃಹ ?

yogi ram mandir

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

ram mandir 2

Ram Mandir: ಭಕ್ತ ಪ್ರವಾಹ- ರಾಮನ ದರ್ಶನ ಸಮಯ ವಿಸ್ತರಣೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.