Udayavni Special

ಮಂತ್ರಿಗಳು ಮಠಗಳನ್ನು ಖರೀದಿಸಲು ಹೊರಟಿದ್ದಾರೆ: ಯತ್ನಾಳ್‌


Team Udayavani, Mar 1, 2021, 10:45 PM IST

yatnal

ಬೆಂಗಳೂರು: ಸರ್ಕಾರದ ಮಂತ್ರಿಗಳು ಪಂಚಮಸಾಲಿ 2ಎ ಮೀಸಲಾತಿ ಹೋರಾಟವನ್ನು ದಾರಿ ತಪ್ಪಿಸಲು ಸಮಾಜದ ಮಠವನ್ನೇ ಖರೀದಿ ಮಾಡಿದ್ದಾರೆ ಎಂದು ಬಿಜೆಪಿ ವಿಜಯಪುರ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ದೆಹಲಿ ಭೇಟಿಯ ನಂತರ ಮತ್ತೆ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡು ಪತ್ರ ಚಳವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೆಲವು ಸಚಿವರು ದುಡ್ಡು ಕೊಟ್ಟು ಮಠ ಖರೀದಿಗೆ ಹೊರಟಿದ್ದಾರೆ. ಈಗ ಒಂದು ಮಠವನ್ನೇ ಖರೀದಿ ಮಾಡಿದ್ದಾನೆ. ಅದಕ್ಕೆ ಅದು ಅವರ ಗುಣಗಾನ ಮಾಡಿಕೊಂಡು ಹೊರಟಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್‌ ನಿರಾಣಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿರುದ್ಧ ಯತ್ನಾಳ್‌ ಲೇವಡಿ ಮಾಡಿದರು.

ನಮ್ಮ ಹೋರಾಟವನ್ನು ಕೆಡಿಸಲು ಕೆಲವು ಸ್ವಾಮೀಜಿಗಳನ್ನು ಮುಂದೆ ಬಿಟ್ಟರು. ಅವರಲ್ಲಿದ್ದವರು ಕೆಲವರು ನಮಗೂ ಗೊತ್ತಾದರು. ಡ್ರೈಫ್ರೂಟ್ಸ್ ಡಬ್ಬಿ ಹಿಡಿದುಕೊಂಡು ಪಾದಯಾತ್ರೆಗೆ ಬಂದು ಸೇರಿಕೊಂಡರು. ಅವರು ನಮ್ಮನ್ನು ದಾರಿ ತಪ್ಪಿಸುವುದಕ್ಕೆ ಹೊರಟಿದ್ದರು. ಆದರೆ, ನಾವು ಎಚ್ಚೆತ್ತು ಕೊಂಡಿದ್ದೇವೆ. ಇದರ ನಡುವೆ ನಮ್ಮ ಅಧಿಕಾರಿಗಳನ್ನೂ ಎತ್ತಿ ಕಟ್ಟಿ ಬಿಟ್ಟರು. ಐಪಿಎಸ್‌ ಅಧಿಕಾರಿ ಸಂದೀಪ್‌ ಪಾಟೀಲ್‌ ನಮ್ಮನ್ನು ಜೈಲಿಗೆ ಹಾಕುವುದಕ್ಕೆ ಹೊರಟಿದ್ದರು. ನಾನು ಅವರಿಗೇ ಹೇಳಿದೆ. ನೀವು ನಮ್ಮನ್ನು ಮುಟ್ಟಿದರೆ ಹುಷಾರ್‌, ನಿಮ್ಮ ಸಿಎಂ, ಪಿಎಂ ಅವರನ್ನೂ ದಬ್ಬಿ ಹೊರ ಬರುತ್ತೇವೆ ಎಂದು ಎಚ್ಚರಿಕೆ ನೀಡುರುವುದಾಗಿ ತಿಳಿಸಿದರು.

ಇದನ್ನೂ ಓದಿ:72ರ ವೃದ್ಧನ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ: ಕಾನೂನು ಸಲಹೆ ಪಡೆಯಲು ಹೈಕೋರ್ಟ್‌ ಸೂಚನೆ

ಟಿಆರ್‌ಪಿ ಸುದ್ದಿ ಕೊಡುತ್ತೇನೆ:
ಇದೇ ವೇಳೆ, ಮಂಗಳವಾರ ನೋಡಿ, ಟಿಆರ್‌ಪಿ ಸುದ್ದಿ ಕೊಡುತ್ತೇನೆ. ಮೂರು ದಿನ ಮಾಧ್ಯಮಗಳು ಅದನ್ನೇ ಬೆನ್ನು ಹತ್ತುವಂತಹ ಸುದ್ದಿ ಕೊಡುತ್ತೇನೆ. ನಾನು ಕೇಂದ್ರ ಮಂತ್ರಿ ಆಗಿದ್ದಾಗ ಯಾರ್ಯಾರು ಕಾಲು ಹಿಡಿದಿದ್ದರು. ಏನೇನು ಮಾಡಿದ್ದರು ಎಂದು ಎಲ್ಲವನ್ನೂ ಹೇಳುತ್ತೇನೆ ಎಂದರು. ನನ್ನ ರಾಜಕೀಯ ಜೀವನ ಮುಗಿಸಲು ಯಾರಿಂದಲೂ ಆಗುವುದಿಲ್ಲ. ಈ ಯತ್ನಾಳ್‌ ಗೌಡ ಹೆದರುವ ಮಗನಲ್ಲ. ಕಡೆಯವರೆಗೂ ನಾನು ಈ ಹೋರಾಟದಲ್ಲಿ ಇರುತ್ತೇನೆ. ಅದು ಹೇಗೆ ನನ್ನ ರಾಜಕೀಯ ಜೀವನ ಮುಗಿಸ್ತೀರಿ ನೋಡುತ್ತೇನೆ. ನಾವು ಮಾರ್ಚ್‌ 4 ರವರೆಗೆ ನೋಡುತ್ತೇವೆ. ನಾನು ಸದನದಲ್ಲಿ ಮೀಸಲಾತಿ ವಿಷಯ ಪ್ರಸ್ತಾಪ ಮಾಡುತ್ತೇನೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಬೇಕಾದರೆ ಕ್ಷಮೆಯಾಚಿಸಲಿ. ಪಂಚಮಸಾಲಿಗಳಿಗೆ ಮೀಸಲಾತಿ ನೀಡಲು ಬರುವುದಿಲ್ಲ ಎಂದು ಹೇಳಿಬಿಡಲಿ. ನಾವೇನು ನಿಮ್ಮ ವಿರೋಧಿಗಳಲ್ಲ. ಸುಮ್ಮನೆ ಕೊಡುತ್ತೇವೆ ಅಂತ ಯಾಕೆ ಯಾಮಾರಿಸುತ್ತೀರಿ ಎಂದು ಮುಖ್ಯಮಂತ್ರಿಗಳ ವಿರುದ್ಧ ವಾಗ್ಧಾಳಿ ನಡೆಸಿದರು.

ಯಾರೂ ಬೀಗ ಹಾಕಿಲ್ಲ:
ಪಂಚಮಸಾಲಿ ಸಮಾವೇಶದ ನಂತರ ದೆಹಲಿಗೆ ತೆರಳಿದ ನಂತರ ಪಕ್ಷದ ಹೈಕಮಾಂಡ್‌ ಬಸನಗೌಡ ಪಾಟೀಲ್‌ ಬಾಯಿಗೆ ಬೀಗ ಹಾಕಿದೆ ಎಂದು ಮಾಧ್ಯಮಗಳಲ್ಲಿ ವರದಿ ಬರುತ್ತಿವೆ. ನಾನು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೂ ಭೇಟಿ ಮಾಡಿಲ್ಲ. ಬಿ.ಎಲ್‌ ಸಂತೋಷ್‌ ಅವರನ್ನೂ ಭೇಟಿ ಮಾಡಿಲ್ಲ. ಖಾಸಗಿ ಕೆಲಸದ ಮೇಲೆ ದೆಹಲಿಗೆ ತೆರಳಿದ್ದೆ. ನಾನು ಬೇರೆಯವರ ತಲೆ, ಕಾಲು ಹಿಡಿಯುವವನಲ್ಲ. ನನ್ನ ಮೇಲೆ ಮಾಧ್ಯಮಗಳಿಗೆ ಬಹಳ ಪ್ರೀತಿ. ಮುಂಜಾನೆ ನನ್ನನ್ನ ಹೊಗಳಿ ಅಟ್ಟಕ್ಕೇರಿಸುತ್ತಾರೆ. ಮಧ್ಯಾಹ್ನ ಅವರ ಮೇಲೆ ಬೇರೆ ಒತ್ತಡ ಬರುತ್ತದೆ. ಆಮೇಲೆ ನನ್ನನ್ನು ಕೆಳಗೆ ಹಾಕುತ್ತಾರೆ. ವಿಜಯೇಂದ್ರನ ಪ್ರಭಾವ ಅವರ ಮೇಲಿದೆ. ಸ್ವಲ್ಪ ಯಾಮಾರಿದ್ರೂ ಯತ್ನಾಳ್‌ಗೆ ಮಣ್ಣು ಹಾಕಿ ಬಿಡುತ್ತಾರೆ. ರಾಜಕಾರಣ ಜೀವನದಲ್ಲಿ ನಾನು ಅನೇಕ ಸ್ಥಾನ ನಿರ್ವಹಿಸಿದ್ದೇನೆ. ಎಲ್ಲೂ ನಾನು ಹಾದಿ ತಪ್ಪಿದವನಲ್ಲ. ಇವತ್ತು ವ್ಯವಸ್ಥೆಯೇ ನಾಚಿಕೆಗೇಡಾಗಿದೆ. ನಾವು 10 ಲಕ್ಷ ಜನ ಸೇರಿದ್ದು, ದೆಹಲಿಯಲ್ಲಿ ಸದ್ದು ಮಾಡಿದೆ. ನಾನು ದೆಹಲಿಗೆ ಹೋಗಿ¨ªಾಗ ಎಲ್ಲರೂ ಅದನ್ನೇ ಕೇಳಿದರು ಎಂದು ಹೇಳಿದರು.

ಎರಡು ತಿಂಗಳು ಸಾಕು
ರಾಜ್ಯ ಸರ್ಕಾರದ ಲೂಟಿ ನೋಡಿ ನೋಡಿ ಸಾಕಾಗಿದೆ. ಈ ಸರ್ಕಾರ ಇನ್ನೆಷ್ಟು ದಿನ ಇರಲು ಸಾಧ್ಯ? ಇನ್ನೆರಡುವರೆ ವರ್ಷ ಇರಿ ಆಮೇಲೆ ಗೊತ್ತಾಗುತ್ತದೆ. ಎರಡೂವರೆ ಯಾಕೆ 2 ತಿಂಗಳು ಸಾಕು. ನಿಮ್ಮ ಸರ್ಕಾರ ಇರುತ್ತೋ ಹೋಗುತ್ತೋ ಗೊತ್ತಾಗುತ್ತದೆ ಎಂದು ಭವಿಷ್ಯ ನುಡಿದರು. ಇತ್ತೀಚೆಗೆ ಸಚಿವರಿಬ್ಬರು ಸಮಾವೇಶಕ್ಕೆ ಇಷ್ಟೊಂದು ಜನ ಸೇರಲು ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ. ದುಡ್ಡು ಕೊಟ್ಟವರೇ ಅವರು. ಅಲ್ಲಿ ಕುಳಿತಿದ್ದವರೇ ಬಂದು ದುಡ್ಡು ಕೊಟ್ಟಿದ್ದು ಎಂದು ಹೇಳಿದರು.

ಟಾಪ್ ನ್ಯೂಸ್

lkjhgtfrdesw

ಬಿಗ್ ಬಾಸ್ : ಈ ವೀಕೆಂಡ್ ಎಪಿಸೋಡ್ ಬಗ್ಗೆ ಸುಳಿವು ಕೊಟ್ಟ ಪರಮೇಶ್ವರ್‌ ಗುಂಡ್ಕಲ್‌!

ಗಹ್ದದಸ಻

ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ಇನ್ನಿಲ್ಲ!

ಕ,ಜಹಗ್ರೆ

ಗಿನ್ನೆಸ್ ದಾಖಲೆ ಬರೆದ ಮೊಲ ಕಳ್ಳತನ : ಹುಡುಕಿ ಕೊಟ್ಟವರಿಗೆ ಸಿಗುತ್ತೆ 2 ಲಕ್ಷ ಬಹುಮಾನ!

‘ಓ ಮೈ ಲವ್‌’ ಗಾನ ಬಜಾನ: ಸ್ಮೈಲ್ ಶ್ರೀನು ನಿರ್ದೇಶನದ ಚಿತ್ರ

‘ಓ ಮೈ ಲವ್‌’ ಗಾನ ಬಜಾನ: ಸ್ಮೈಲ್ ಶ್ರೀನು ನಿರ್ದೇಶನದ ಚಿತ್ರ

ತಮಿಳು ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ತಮಿಳು ಖ್ಯಾತ ಹಾಸ್ಯ ನಟ ವಿವೇಕ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು: ಅಭಿಮಾನಿಗಳಲ್ಲಿ ಆತಂಕ

ಗಹಜಕಜುಹಯತ

ಭಾನುವಾರ ಉತ್ತರ ಪ್ರದೇಶ ಲಾಕ್ ಡೌನ್ : ಮಾಸ್ಕ್ ಹಾಕದಿದ್ದರೆ 10,000 ದಂಡ!

ಕೋವಿಡ್ ನೆಪ ಹೇಳಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ: ಬಸವರಾಜ ಹೊರಟ್ಟಿ

ಕೋವಿಡ್ ನೆಪ ಹೇಳಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ: ಬಸವರಾಜ ಹೊರಟ್ಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಹ್ದದಸ಻

ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ಇನ್ನಿಲ್ಲ!

ಕೋವಿಡ್ ನೆಪ ಹೇಳಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ: ಬಸವರಾಜ ಹೊರಟ್ಟಿ

ಕೋವಿಡ್ ನೆಪ ಹೇಳಿ ಎಸ್ಎಸ್ಎಲ್ ಸಿ ಪರೀಕ್ಷೆ ರದ್ಧು ಮಾಡುವ ಪ್ರಯತ್ನ ಬೇಡ: ಬಸವರಾಜ ಹೊರಟ್ಟಿ

ಮದುವೆ ಸಮಾರಂಭಗಳಲ್ಲಿ ನೂರು ಜನ ಮೀರಬಾರದು: ಸಚಿವ ಸುಧಾಕರ್

ಮದುವೆ ಸಮಾರಂಭಗಳಲ್ಲಿ ನೂರು ಜನ ಮೀರಬಾರದು: ಸಚಿವ ಸುಧಾಕರ್

ಸಿಎಂ ಯಡಿಯೂರಪ್ಪಗೆ ಕೋವಿಡ್ ಪಾಸಿಟಿವ್: ಮಣಿಪಾಕ್ ಆಸ್ಪತ್ರೆಗೆ ಶಿಫ್ಟ್

ಸಿಎಂ ಯಡಿಯೂರಪ್ಪಗೆ ಕೋವಿಡ್ ಪಾಸಿಟಿವ್: ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್

ಹಗದ್ಹಸದ್

ಈ ವಾರ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹಾಜರಾಗುತ್ತಿಲ್ಲ ಸುದೀಪ್ : ಕಿಚ್ಚ ಸ್ಪಷ್ಟನೆ

MUST WATCH

udayavani youtube

ಮಂಗಳೂರು: ಬೊಟ್ ದುರಂತ ಪ್ರಕರಣ; ಮೂರು ದಿನಗಳಾದರೂ ಪತ್ತೆಯಾಗದ ಮೀನುಗಾರರು

udayavani youtube

ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತುರ್ತು ಸಭೆ

udayavani youtube

ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ

udayavani youtube

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

ಹೊಸ ಸೇರ್ಪಡೆ

lkjhgtfrdesw

ಬಿಗ್ ಬಾಸ್ : ಈ ವೀಕೆಂಡ್ ಎಪಿಸೋಡ್ ಬಗ್ಗೆ ಸುಳಿವು ಕೊಟ್ಟ ಪರಮೇಶ್ವರ್‌ ಗುಂಡ್ಕಲ್‌!

Let communities cooperate in the prevention of covid

ಕೋವಿಡ್‌ ತಡೆಗೆ ಸಮುದಾಯಗಳು ಸಹಕರಿಸಲಿ

Request for vaccination

ಲಸಿಕೆ ಹಾಕಿಸಿಕೊಳ್ಳಲು ಮನವಿ

ಗಹ್ದದಸ಻

ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ಇನ್ನಿಲ್ಲ!

The disappearance of the rules

ನಾಮಪತ್ರ ಸಲ್ಲಿಕೆಗೆ ತೆರೆ:ನಿಯಮಾವಳಿ ಕಣ್ಮರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.