ಸೂತ್ರವಿಲ್ಲದ ಗಾಳಿಪಟದ ಹಾರಾಟ ಹೇಗಿರುತ್ತದೆ : ಹೆಚ್ ಡಿಕೆ ವಿರುದ್ಧ ಬಿಜೆಪಿ ಸರಣಿ ಟ್ವೀಟ್

ಕೋನರೆಡ್ಡಿಯವರನ್ನು ಕೇಳಿದರೆ ಉತ್ತರ ಸಿಗಬಹುದೇ? ಫಾರೂಕ್ ವಿವರಿಸಬಹುದೇ?

Team Udayavani, Apr 4, 2022, 4:57 PM IST

1-sdfdsf

ಬೆಂಗಳೂರು: ‘ರಾಜ್ಯ ಬಿಜೆಪಿ ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರ ವಿರುದ್ಧ ಸರಣಿ ಟ್ವೀಟ್ ಮಾಡಿ ಕುಟುಂಬ ರಾಜಕಾರಣವನ್ನು ಟೀಕಿಸಿ ಮತ್ತೆ ಲಕ್ಕಿಡಿಪ್ ಸಿಎಂ ಎಂದು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ.

”ಮಾನ್ಯ ಮಾಜಿ ಲಕ್ಕಿಡಿಪ್ ಸಿಎಂ ಹೆಚ್ ಡಿಕೆ ಅವರೇ,ಮುಂದಿನ ಚುನಾವಣೆಯಲ್ಲಿ ಮಿಶನ್-123 ಎನ್ನುತ್ತಿದ್ದೀರಿ. ನಿಮ್ಮ ಕುಟುಂಬದ ಎಲ್ಲಾ ಕವಲುಗಳಿಗೂ ಈಗಾಗಲೇ ಅವಕಾಶ ಕಲ್ಪಿಸಿದ್ದೀರಿ.ಮುಂದಿನ ಚುನಾವಣೆಗೆ ಇನ್ನು ಯಾರ್ಯಾರು ನಿಮ್ಮ ಮನೆತನದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ?” ಎಂದು ಪ್ರಶ್ನಿಸಿದೆ.

”ಜೆಡಿಎಸ್‌ ಮಿಶನ್-123 ಎನ್ನುವ ಸಂಕಲ್ಪ ಮಾಡಿದೆ. ಮಾನ್ಯ ಮಾಜಿ ಲಕ್ಕಿಡಿಪ್ ಸಿಎಂ ಹೆಚ್ ಡಿಕೆ ಅವರೇ, ಇದರರ್ಥ ಜೆಡಿಎಸ್‌ 123 ಸ್ಥಾನ ಗಳಿಸಲಿದೆ ಎಂದೋ ಅಥವಾ ಯಾವ ಪಕ್ಷವನ್ನೂ 123 ಸ್ಥಾನ ದಾಟಲು ಬಿಡುವುದಿಲ್ಲವೆಂದೋ?ಅತಂತ್ರದ ತಂತ್ರ ಹೂಡಿ ಮತ್ತೆ ಸಾಂದರ್ಭಿಕ ಶಿಶು ಎನಿಸಿಕೊಳ್ಳುವ ತವಕವೇ?” ಎಂದು ಇನ್ನೊಂದು ಟ್ವೀಟ್ ಮಾಡಿದೆ.

”ನಮ್ಮ ಕುಟುಂಬದವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ಗೆಲ್ಲುವುದಿಲ್ಲ ಎಂದು ಮಾಜಿ ಲಕ್ಕಿಡಿಪ್ ಸಿಎಂ ಹೆಚ್ ಡಿಕೆ ಹೇಳಿದ್ದರು.ಅಲ್ಲಿಗೆ, ಮಿಶನ್-123 ನಲ್ಲಿ ಕುಟುಂಬ ವರ್ಗದವರೇ ಸಿಂಹಪಾಲು ಪಡೆಯುವುದು ಸ್ಪಷ್ಟ.ಅಂದಹಾಗೆ, ನಿಮ್ಮ ಕುಟುಂಬ ವರ್ಗದಿಂದ ಯಾರಾದರೂ ಬಿಟ್ಟು ಹೋಗಿದ್ದರೆ ಅವರಿಗೆ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡುತ್ತೀರಿ?”ಎಂದು ಪ್ರಶ್ನಿಸಿದೆ.

”ಬಹುಮತ ಪಡೆಯುತ್ತೇವೆ ಎಂದೆನ್ನುವ ಮೂಲಕ ಮಾಜಿ ಲಕ್ಕಿಡಿಪ್ ಸಿಎಂ ಈಗ ಮತ್ತೊಂದು ಗಾಳಿಪಟ ಸಿದ್ದಪಡಿಸುತ್ತಿದ್ದಾರೆ, ಇದು ಟಿಕೆಟ್ ಆಕಾಂಕ್ಷಿಗಳನ್ನು ಸೆಳೆಯುವ ತಂತ್ರವೇ? ಸೂತ್ರವಿಲ್ಲದ ಗಾಳಿಪಟದ ಹಾರಾಟ ಹೇಗಿರುತ್ತದೆ ಎಂದು ಮಾಜಿ ಶಾಸಕ ಕೋನರೆಡ್ಡಿಯವರನ್ನು ಕೇಳಿದರೆ ಉತ್ತರ ಸಿಗಬಹುದೇ? ಅಥವಾ ರಾಜ್ಯಸಭೆಯ ಕನಸು ಕಂಡ ಫಾರೂಕ್ ವಿವರಿಸಬಹುದೇ?”ಎಂದು ಪ್ರಶ್ನಿಸಿದೆ.

”ಮಾನ್ಯ ಬ್ರದರ್, ನಿಮ್ಮ ಪಕ್ಷದ ಮಿಶನ್-123 ಗೆ ತೆನೆ ಹೊರಬೇಕೆಂದರೆ ಒಬ್ಬರೇ ಪಕ್ಷಕ್ಕೆ ಸೇರಬೇಕೋ, ಕುಟುಂಬ ಸಮೇತರಾಗಿ ಸೇರಬೇಕೋ? ಏಕೆಂದರೆ ಮಾಜಿ ಲಕ್ಕಿಡಿಪ್ ಸಿಎಂ ಪಕ್ಷದಲ್ಲಿ ಕುಟುಂಬ ರಾಜಕಾರಣಕ್ಕೆ ಮಾತ್ರ ಅವಕಾಶ. ಇನ್ನು ಕೆಲವು ಕಡೆ ಪ್ರಚಾರ ಮಾಡುವುದಕ್ಕೂ‌ ಕುಟುಂಬದವರು ಮಾತ್ರ ಉಳಿಯುವುದಲ್ಲವೇ?”ಎಂದು ಸರಣಿ ಟ್ವೀಟ್ ಗಳ ಮೂಲಕ ಮತ್ತೆ ಕುಟುಂಬ ರಾಜಕಾರಣದ ವಿರುದ್ಧ ಪ್ರಶ್ನಿಸಿದೆ.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.