ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣ: ಹಂತಕರನ್ನು 4 ಗಂಟೆಗಳಲ್ಲಿ ಪತ್ತೆ ಹಚ್ಚಿದ್ಹೇಗೆ!
ಕಾಮಗಾರಿಯಲ್ಲಿದ್ದ ಜೆಸಿಬಿಯನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಪೊಲೀಸರು!
Team Udayavani, Jul 5, 2022, 6:33 PM IST
ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ಆರೋಪಿಗಳನ್ನು ಕೇವಲ ನಾಲ್ಕು ಗಂಟೆ ಅವಧಿಯಲ್ಲಿ ರಾಮದುರ್ಗ ಪೊಲೀಸರು ಮುಳ್ಳೂರು ಘಾಟ್ ಬಳಿಯ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆ ನಡೆಸಿ ಪರಾರಿಯಾಗುತ್ತಿದ್ದಂತೆ ಪೊಲೀಸರು ಅಕ್ಕಪಕ್ಕದ ಜಿಲ್ಲೆಯ ಪೊಲೀಸರನ್ನು ಅಲರ್ಟ್ ಮಾಡಿದ್ದರು. ಆರೋಪಿಗಳ ಮೊಬೈಲ್ ಲೋಕೇಶನ್ ಟ್ರೇಸ್ ಮಾಡುತ್ತಿದ್ದರು. ಈ ವೇಳೆ ರಾಮದುರ್ಗದ ಬಳಿ ಪೊಲೀಸರು ವಾಹನಗಳ ತಪಾಸಣೆ ಮಾಡುವ ವೇಳೆ ಮಹಾಂತೇಶ ಹಾಗೂ ಮಂಜುನಾಥ ಇದ್ದ ಕಾರು ಆಗಮಿಸಿದೆ. ಕೆಳಗೆ ಇಳಿಯುವಂತೆ ಸೂಚಿಸಿದರೂ ಇಳಿಯದಿದ್ದಾಗ ಡಿವೈಎಸ್ಪಿ ರಾಮನಗೌಡ ಹಟ್ಟಿ ಸರ್ವಿಸ್ ರಿವಾಲ್ವಾರ್ ಹಿಡಿದು ಶೂಟ್ ಮಾಡುವುದಾಗಿ ಎಚ್ಚರಿಸಿದ್ದಾರೆ. ಪ್ರತಿರೋಧ ತೋರದೆ ಆರೋಪಿಗಳು ಶರಣಾಗಿದ್ದಾರೆ.
ಆರೋಪಿಗಳು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು ಎಂದು ಕಾಮಗಾರಿಯಲ್ಲಿದ್ದ ಜೆಸಿಬಿಯನ್ನು ಕೂಡ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದರು. ಹೆಚ್ಚಿನ ಭದ್ರತೆಯೊಂದಿಗೆ ನಾಕಾಬಂದಿ ಮಾಡಲಾಗಿತ್ತು. ಆರೋಪಿಗಳು ಕೊಲೆ ಮಾಡಿದ ನಂತರ ಧರಿಸಿದ್ದ ಬಟ್ಟೆಯನ್ನು ಬದಲಿಸಿಕೊಂಡಿದ್ದರು. ಕೊಲೆ ನಂತರ ಪರಾರಿಯಾಗಲು ಕಾರ್ ವ್ಯವಸ್ಥೆಯನ್ನು ಕೂಡ ಮಾಡಿಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಪೊಲೀಸರ ಮಿಂಚಿನ ಕಾರ್ಯಾಚರಣೆ: ಚಂದ್ರಶೇಖರ ಗುರೂಜಿ ಹಂತಕರ ಬಂಧನ
ಪ್ರಮುಖ ರಸ್ತೆಗಳ ಮೂಲಕ ಹೋದರೆ ಟೋಲ್ ನಾಕಾ ಇತರೆ ತೊಂದರೆ ಒದಗಬಹುದು ಎಂದು ರಾಜ್ಯ ಹೆದ್ದಾರಿ ಮೂಲಕ ಪರಾರಿಯಾಗಲು ಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೊಮ್ಮಾಯಿ ನೇತೃತ್ವದಲ್ಲೇ ಅವಧಿ ಪೂರ್ಣ: ಕೇಂದ್ರ ಸಚಿವ ನಾರಾಯಣಸ್ವಾಮಿ
ಹೆಸರಿಗಷ್ಟೇ ಸಂಸ್ಕೃತಿ ಇಲಾಖೆ: ಕಲಾವಿದರ ಗೋಳಿಗೆ ಸ್ಪಂದನೆಯೇ ಇಲ್ಲ!
ಕಾಂಗ್ರೆಸ್ ಈಗ ಡಬಲ್ ಡೋರ್ ಬಸ್: ಸಚಿವ ಸುಧಾಕರ್ ವ್ಯಂಗ್ಯ
ಖಾಸಗಿ ಆಸ್ಪತ್ರೆಗಳು ಕೋವಿಡ್ ರೋಗಿಗಳನ್ನು ನಿರಾಕರಿಸಿದರೆ ಕಠಿಣ ಕ್ರಮ: ಡಾ.ಕೆ.ಸುಧಾಕರ್
ಮುಂದಿನ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜದ ಇನ್ನೂ ಎರಡು ಪೀಠ