ಕ್ಯೂಬಾದಲ್ಲಿ ಚೀನಾ ಗುಪ್ತಚರ ಕೇಂದ್ರ!: ಅಮೆರಿಕದ ಅನಾಮಿಕ ಅಧಿಕಾರಿ ಆರೋಪ
ಇದೆಲ ಸುಳ್ಳು: ಚೀನಾ, ಕ್ಯೂಬಾ
Team Udayavani, Jun 12, 2023, 7:40 AM IST
ನವದೆಹಲಿ: ಚೀನೀ ಆಡಳಿತ, ಆರ್ಥಿಕ ದುಸ್ಥಿತಿಗೆ ಸಿಲುಕಿರುವ ಕ್ಯೂಬಾದಲ್ಲಿ ಗುಪ್ತಚರ ನೆಲೆ ಹೊಂದಿದೆ. ಹೀಗೆಂದು ಅಮೆರಿಕದ ಸರ್ಕಾರದ ಪ್ರಮುಖ ಅಧಿಕಾರಿಯೊಬ್ಬರು ಚೀನಾದ ಮೇಲೆ ಬಲವಾದ ಆರೋಪ ಮಾಡಿದ್ದಾರೆ. 2019ರಲ್ಲಿ ಈ ಸೌಲಭ್ಯವನ್ನು ಮೇಲ್ದರ್ಜೆಗೇರಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಆರೋಪಗಳನ್ನು ಚೀನಾ ಮತ್ತು ಕ್ಯೂಬಾ ಸರ್ಕಾರಗಳು ಬಲವಾಗಿ ತಿರಸ್ಕರಿಸಿವೆ. ವಿಶೇಷವೆಂದರೆ ಅಮೆರಿಕದ ರಾಷ್ಟ್ರೀಯ ಭದ್ರತಾ ಸಮಿತಿ ವಕ್ತಾರ ಜಾನ್ ಕಿರ್ಬಿ ಕೂಡ ಇದು ಅಧಿಕೃತ ವರದಿಯಲ್ಲ ಎಂದಿದ್ದಾರೆ. ಚೀನಾ ಅಂತೂ, ಅಮೆರಿಕ ಈ ರೀತಿಯ ವದಂತಿ ಹಬ್ಬಿಸುವುದು ಮಾಮೂಲಿ. ಅದು ಕ್ಯೂಬಾದ ಆಂತರಿಕ ಸಂಗತಿಯಲ್ಲಿ ಮೂಗು ತೂರಿಸುತ್ತಿದೆ ಎಂದು ಆರೋಪಿಸಿದೆ.
ಅಧಿಕಾರಿ ಹೇಳಿದ್ದೇನು?: ಇತ್ತೀಚೆಗೆ ವಾಷಿಂಗ್ಟನ್ ಪೋಸ್ಟ್ನಲ್ಲಿ ಒಂದು ವರದಿ ಪ್ರಕಟವಾಗಿತ್ತು. ಅದರಲ್ಲಿ ಕ್ಯೂಬಾ ಮತ್ತು ಚೀನಾ ನಡುವೆ ವಿದ್ಯುನ್ಮಾನ ಕದ್ದಾಲಿಕೆ ಕೇಂದ್ರ ಸ್ಥಾಪಿಸಲು ಒಪ್ಪಂದವಾಗಿದೆ. ಆರ್ಥಿಕ ದುಸ್ಥಿತಿಗೆ ಸಿಲುಕಿರುವ ಕ್ಯೂಬಾಗೆ ಸಾವಿರಾರು ಕೋಟಿ ರೂ. ನೆರವು ನೀಡುವ ಆಮಿಷವನ್ನು ಚೀನಾ ಒಡ್ಡಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಹೆಸರು ಹೇಳಲಿಚ್ಛಿಸದ ಬೈಡೆನ್ ಸರ್ಕಾರದ ಅಧಿಕಾರಿ, ಮೊದಲಿಂದಲೂ ನಾವಿದನ್ನು ಹೇಳಿಕೊಂಡೇ ಬರುತ್ತಿದ್ದೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
MUST WATCH
ಹೊಸ ಸೇರ್ಪಡೆ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ