ಕೋವಿಡ್-19: ಆತಂಕ ಹೆಚ್ಚಿಸುತ್ತಿದೆ ದೇಶದ ಏಳನೇ ಸ್ಥಾನ!

Team Udayavani, Jun 2, 2020, 6:20 AM IST

ಕೋವಿಡ್-19: ಆತಂಕ ಹೆಚ್ಚಿಸುತ್ತಿದೆ ದೇಶದ ಏಳನೇ ಸ್ಥಾನ!

ರವಿವಾರ ಭಾರತವು ಅತಿ ಹೆಚ್ಚು ಕೋವಿಡ್-19 ಸೋಂಕಿತ ರಾಷ್ಟ್ರಗಳಲ್ಲಿ 7ನೇ ಸ್ಥಾನಕ್ಕೆ ಏರಿರುವುದು ಆತಂಕದ ವಿಷಯವೇ ಸರಿ. ಲಾಕ್‌ಡೌನ್‌ ನಿರ್ಬಂಧಗಳು ಸಡಿಲಗೊಂಡ ಅನಂತರದಿಂದ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ವೃದ್ಧಿಸುತ್ತಿದೆ. ಅದರಲ್ಲೂ ದೇಶದ ಐದು ರಾಜ್ಯಗಳಲ್ಲೇ 70 ಪ್ರತಿಶತಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ಚಿಂತೆಗೀಡು ಮಾಡುತ್ತಿರುವ ಸಂಗತಿಯೆಂದರೆ, ದೇಶದಲ್ಲಿ ನಿತ್ಯ ಪ್ರಕರಣಗಳ ಸಂಖ್ಯೆ 8 ಸಾವಿರದ ಗಡಿ ದಾಟಿದೆ…ಆದರೆ ಪರಿಸ್ಥಿತಿ ಇನ್ನೂ ವಿಷಮಿಸಲಿದ್ದು, ಕೋವಿಡ್-19 ಜೂನ್‌ ಅಂತ್ಯದ ವೇಳೆಗೆ ಉಲ್ಬಣಿಸಲಿದೆ ಎಂದೇ ತಜ್ಞರು ಎಚ್ಚರಿಸುತ್ತಿದ್ದಾರೆ. ಒಟ್ಟಲ್ಲಿ, ಅಂಕಿಸಂಖ್ಯೆಗಳು ಆತಂಕ ಹುಟ್ಟಿಸುವಂಥ ಕಥೆಯನ್ನು ಹೇಳಲಾರಂಭಿಸಿವೆ…

ಐದು ರಾಜ್ಯಗಳಲ್ಲಿ ದೇಶದ
71 ಪ್ರತಿಶತ ಪ್ರಕರಣಗಳು!
ಇಂದು ಕೋವಿಡ್-19 ದೇಶದ ಐದು ರಾಜ್ಯಗಳಿಗೇ ಹೆಚ್ಚಾಗಿ ಬಾಧಿಸುತ್ತಿದ್ದು, ಸೋಮವಾರದ ವೇಳೆಗೆ ಈ ಐದು ರಾಜ್ಯಗಳಲ್ಲೇ ದೇಶದ 70.87 ಪ್ರತಿಶತ ಪ್ರಕರಣಗಳು ದಾಖಲಾಗಿವೆ. ಜೂನ್‌ 1ರ ಅಪರಾಹ್ನದ 3 ಗಂಟೆಯ ವೇಳೆಗೆ ಮಹಾರಾಷ್ಟ್ರದಲ್ಲಿ 67,655, ತಮಿಳುನಾಡು(22,333), ದಿಲ್ಲಿ (19,844), ಗುಜರಾತ್‌(16,794), ರಾಜಸ್ಥಾನದಲ್ಲಿ 8,980 ಪ್ರಕರಣಗಳು ಪತ್ತೆಯಾಗಿವೆ.

ಗಂಭೀರ ಪ್ರಕರಣಗಳಲ್ಲಿ
ಭಾರತ ಎರಡನೇ ಸ್ಥಾನದಲ್ಲಿ
ಸೋಂಕಿತರ ಸಂಖ್ಯೆಯಲ್ಲಿ ಭಾರತ 7ನೇ ಸ್ಥಾನದಲ್ಲಿದ್ದರೂ, ಗಂಭೀರ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ 17 ಸಾವಿರಕ್ಕೂ ಅಧಿಕ ರೋಗಿಗಳ ಸ್ಥಿತಿ ಗಂಭೀರವಾಗಿದ್ದರೆ, ಭಾರತದಲ್ಲಿ ಗಂಭೀರ ಸ್ಥಿತಿಯಲ್ಲಿರುವವರ ಸಂಖ್ಯೆ ಸೋಮವಾರ ಮಧ್ಯಾಹ್ನದ‌ ವೇಳೆಗೆ 8,944ಕ್ಕೇರಿದೆ. ಈ ವಿಚಾರದಲ್ಲಿ ಭಾರತದ ನಂತರ ಬ್ರೆಜಿಲ್‌ ಇದ್ದು ಅಲ್ಲಿ 8318 ಜನರಲ್ಲಿ ರೋಗ ಉಲ್ಬಣಿಸಿದೆ.

ನಿರ್ಬಂಧ ಸಡಿಲಿಕೆ
ಈಗಲೇ ಬೇಡವಾಗಿತ್ತೇ?
ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಉತ್ತುಂಗಕ್ಕೆ ಏರಿಲ್ಲ, ಹೀಗಾಗಿ, ಅದಕ್ಕೂ ಮುನ್ನವೇ ಲಾಕ್‌ಡೌನ್‌ ನಿರ್ಬಂಧಗಳಲ್ಲಿ ಬಹುತೇಕ ಸಡಿಲಿಕೆ ತಂದಿರುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದೇ ಎನ್ನುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಏಮ್ಸ್‌ನ ವೈದ್ಯಕೀಯ ಸಂಶೋಧನ ತಂಡವೊಂದು ಅಧ್ಯಯನ ವರದಿ ಬಿಡುಗಡೆಗೊಳಿಸಿದ್ದು, “”ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಉತ್ತುಂಗಕ್ಕೇರಿ- ಇಳಿದ ಮೇಲೆ ಕೆಲವು ವಾರಗಳ ಅನಂತರ ನಿರ್ಬಂಧಗಳನ್ನು ಸಡಿಲ ಮಾಡುವುದೇ ಸರಿ. ಹೀಗೆ ಮಾಡಿದರೆ ಮಾತ್ರ, ಲಾಕ್‌ಡೌನ್‌ನ ನಿಜವಾದ ಪ್ರಯೋಜನಗಳನ್ನು ಪಡೆಯಬಹುದು” ಎನ್ನುತ್ತದೆ.

ಚೀನದ ಉದಾಹರಣೆಯನ್ನೇ ನಾವು ನೋಡಿದರೆ, ಆ ದೇಶದಲ್ಲಿ ಕೋವಿಡ್-19 ಪ್ರಕರಣ ಅತೀಹೆಚ್ಚು ದಾಖಲಾದದ್ದು ಫೆಬ್ರವರಿ 13ರಂದು. ಅಂದು 15,133 ಪ್ರಕರಣಗಳು ಪತ್ತೆಯಾದವು. ಆದರೆ, ಚೀನ ಕೋವಿಡ್-19 ಕೇಂದ್ರ ಭಾಗವಾಗಿದ್ದ ವುಹಾನ್‌ನಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಿದ್ದು, ಅಜಮಾಸು 2 ತಿಂಗಳ ಅನಂತರ! ಅಂದರೆ ಎಪ್ರಿಲ್‌ 8ರಂದು. ಭಾರತ ಕೂಡ ಈ ವಿಷಯದಲ್ಲಿ ಚೀನ ಮಾದರಿಯನ್ನೇ ಅನುಸರಿಸಬೇಕು ಎಂಬ ಸಲಹೆಗಳೂ ವೈಜ್ಞಾನಿಕ ವಲಯದಿಂದ ಕೇಳಿಬರುತ್ತಿವೆ. ಆದರೆ ಈಗಾಗಲೇ ದೇಶಾದ್ಯಂತ ಲಾಕ್‌ಡೌನ್‌ ನಿರ್ಬಂಧಗಳಲ್ಲಿ ಬಹಳಷ್ಟು ಸಡಿಲಿಕೆ ಮಾಡಲಾಗಿದೆ.

ಹಲವು ರಾಷ್ಟ್ರಗಳಿಗಿಂತ
ಮಹಾರಾಷ್ಟ್ರದಲ್ಲೇ ಹೆಚ್ಚು ಸೋಂಕಿತರು
ದೇಶದಲ್ಲಿ ಮಹಾರಾಷ್ಟ್ರ ಅತಿಹೆಚ್ಚು ಕೋವಿಡ್-19 ಸೋಂಕಿತರನ್ನು ಹೊಂದಿದ್ದು, 65 ಸಾವಿರಕ್ಕೂ ಹೆಚ್ಚು ಜನ ಸೋಂಕಿತರಾಗಿದ್ದರೆ, ಇವರಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವು ಪ್ರಮುಖ ದೇಶಗಳಲ್ಲಿ ಮಹಾರಾಷ್ಟ್ರಕ್ಕಿಂತಲೂ ಕಡಿಮೆ ಸೋಂಕಿತರಿದ್ದಾರೆ.

ಉದಾಹರಣೆಗೆ ಬೆಲ್ಜಿಯಂ, ಕತಾರ್‌, ಬಾಂಗ್ಲಾದೇಶ, ನೆದರ್‌ಲ್ಯಾಂಡ್ಸ್‌, ಸ್ವೀಡನ್‌, ಸಿಂಗಾಪುರ್‌, ಯುಎಇ, ದಕ್ಷಿಣ ಆಫ್ರಿಕಾ, ಸ್ವಿಟ್ಸರ್‌ಲ್ಯಾಂಡ್‌, ಇಂಡೋನೇಶ್ಯಾ, ಇಸ್ರೇಲ್‌, ಜಪಾನ್‌, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಅನೇಕ ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆ ಮಹಾರಾಷ್ಟ್ರಕ್ಕಿಂತಲೂ ಕಡಿಮೆಯಿದೆ! ಕೇವಲ ಮುಂಬಯಿಯ ಒಂದರಲ್ಲೇ ಜೂನ್‌ 1, ಅಪರಾಹ್ನ 3 ಗಂಟೆಯ ವೇಳೆಗೆ 39,686 ಪ್ರಕರಣಗಳು ಪತ್ತೆಯಾಗಿವೆ!

ಟಾಪ್ ನ್ಯೂಸ್

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

1-wwewqe

Lok Sabha ಅಖಾಡಕ್ಕೆ ಲಾಲು ಪ್ರಸಾದ್‌ ಪುತ್ರಿ ಡಾ| ರೋಹಿಣಿ ಹೆಜ್ಜೆ

RBI

Cyber ​​attack: ಭದ್ರತೆ ಹೆಚ್ಚಿಸಲು ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.