ದಾವೂದ್ ಆಸ್ತಿ ಜಪ್ತಿಗೆ ಆದೇಶ : ಎಫ್ಎಟಿಎಫ್ ಕಪ್ಪುಪಟ್ಟಿಗೆ ತಪ್ಪಿಸಿಕೊಳ್ಳಲು ಪಾಕ್ ಉಪಾಯ
Team Udayavani, Mar 2, 2021, 6:55 AM IST
ಇಸ್ಲಾಮಾಬಾದ್: ಇತ್ತೀಚೆಗೆ, ಫ್ರಾನ್ಸ್ ನಲ್ಲಿ ನಡೆದ ಭಯೋತ್ಪಾದನ ಧನ ಸಹಾಯ ನಿಗ್ರಹ ಪಡೆ (ಎಫ್ಎಟಿ ಎಫ್) ಸಭೆಯಲ್ಲಿ ತನ್ನನ್ನು ತಾನು ಎಫ್ಎಟಿಎಫ್ ಕಪ್ಪು ಪಟ್ಟಿಗೆ ಸೇರಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಪಾಕಿಸ್ಥಾನ ಅನುಸರಿಸಿದ ತಂತ್ರಗಾರಿಕೆಯೊಂದನ್ನು ರಿಪಬ್ಲಿಕ್ ವರ್ಲ್ಡ್ ಡಾಟ್ ಕಾಮ್ ವೆಬ್ಸೈಟ್ ಅನಾವರಣಗೊಳಿಸಿದೆ.
ಎಫ್ಎಟಿಎಫ್ ಸಭೆ ನಡೆದಿದ್ದು ಫೆ. 25ರಂದು. ಆ ಸಭೆಯಲ್ಲೇ ಪಾಕಿಸ್ಥಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕೇ, ಬೇಡವೇ ಎಂಬ ಬಗ್ಗೆ ಚರ್ಚೆ ನಡೆದವು. ಆದರೆ ಆ ಸಭೆಗೂ ಹಿಂದಿನ ದಿನದಂದು ಪಾಕಿಸ್ಥಾನ, ತನ್ನ ನೆಲದಲ್ಲಿರುವ ಹಾಗೂ ವಿಶ್ವಸಂಸ್ಥೆಯಿಂದ ಉಗ್ರರೆಂದು ಪರಿಗಣಿಸಲ್ಪಟ್ಟಿರುವ ದಾವೂದ್ ಇಬ್ರಾಹೀಂ ಸೇರಿದಂತೆ ಅನೇಕ ಉಗ್ರ ಸಂಘಟನೆಗಳ ವ್ಯಕ್ತಿಗಳ ಆಸ್ತಿ ಜಪ್ತಿ ಮಾಡಲು ಆದೇಶ ನೀಡಿತು. ಇದಲ್ಲದೆ, ಅವರ ಸಂಸ್ಥೆಗಳಿಗೆ ಬರಬಹುದಾದ ದೇಣಿಗೆಗೆ, ಅವರ ಪ್ರಯಾಣಕ್ಕೆ, ಅವರೊಂದಿಗೆ ಇತರ ಸಾರ್ವಜನಿಕರ ನಿತ್ಯ ವ್ಯವಹಾರಗಳಿಗೆ ನಿರ್ಬಂಧ ಹಾಕಿತು.
ಆ ಮೂಲಕ ಅದು ಎಫ್ಎಟಿಎಫ್ ವಿಶ್ವಾಸಗಳಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾದ ಪಾಕಿಸ್ಥಾನ, ಗ್ರೇ ಲಿಸ್ಟ್ನಲ್ಲೇ ಉಳಿಯುವಲ್ಲಿ ಸಫಲವಾಯಿತು. ಆದರೆ ಅತ್ತ ಎಫ್ಎಟಿಎಫ್, ಉಗ್ರರನ್ನು ಮಟ್ಟಹಾಕಲು ತಾನು ನೀಡಿರುವ 27 ಅಂಶಗಳನ್ನು ಪೂರ್ತಿಯಾಗಿ ಅನುಷ್ಠಾನಗೊಳಿಸಿದರಷ್ಟೇ ಗ್ರೇ ಲಿಸ್ಟ್ನಿಂದ ಪಾಕಿಸ್ಥಾನ ಹೊರಗಿಡುವುದಾಗಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ