Udayavni Special

ಮಿಶ್ರಾ ಸ್ಪಿನ್‌ ದಾಳಿಗೆ ಮಗುಚಿದ ಮುಂಬೈ : ಡೆಲ್ಲಿಗೆ 6 ವಿಕೆಟ್‌ಗಳ ಗೆಲುವು


Team Udayavani, Apr 20, 2021, 11:50 PM IST

ಮಿಶ್ರಾ ಸ್ಪಿನ್‌ ದಾಳಿಗೆ ಮಗುಚಿದ ಮುಂಬೈ : ಡೆಲ್ಲಿಗೆ 6 ವಿಕೆಟ್‌ಗಳ ಗೆಲುವು

ಚೆನ್ನೈ: ಮೊದಲ ಸಲ ಚೆನ್ನೈಯಲ್ಲಿ ಆಡಲಿಳಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಹರಿತವಾದ ಬೌಲಿಂಗ್‌ ದಾಳಿಗೆ ಪರದಾಡಿದ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮಂಗಳವಾರದ ಐಪಿಎಲ್‌ ಮುಖಾಮುಖೀಯಲ್ಲಿ 6 ವಿಕೆಟ್‌ಗಳ ಸೋಲಿಗೆ ತುತ್ತಾಗಿದೆ.

ಡೆಲ್ಲಿ ಈ ಕೂಟದಲ್ಲಿ 3 ಪಂದ್ಯಗಳನ್ನು ಗೆದ್ದ ಎರಡನೇ ತಂಡವಾಗಿದ್ದು, ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ನೆಗೆದಿದೆ.
ಮುಂಬೈ 9 ವಿಕೆಟಿಗೆ ಕೇವಲ 137 ರನ್‌ ಮಾಡಿದರೆ, ಡೆಲ್ಲಿ ನಿಧಾನ ಗತಿಯಲ್ಲೇ ಚೇಸ್‌ ಮಾಡಿ 19.1 ಓವರ್‌ಗಳಲ್ಲಿ 4 ವಿಕೆಟಿಗೆ 138 ರನ್‌ ಬಾರಿಸಿತು. ಪೊಲಾರ್ಡ್‌ ನೋ ಬಾಲ್‌ ಎಸೆದು ಡೆಲ್ಲಿ ಜಯವನ್ನು ಸಾರಿದರು! ಮುಂಬೈ 4 ಪಂದ್ಯಗಳಲ್ಲಿ ಎರಡನೇ ಸೋಲನುಭವಿಸಿತು.

ಚೇಸಿಂಗ್‌ ವೇಳೆ ಡೆಲ್ಲಿ ಆರಂಭಕಾರ ಶಿಖರ್‌ ಧವನ್‌ ಸರ್ವಾಧಿಕ 45, ಸ್ಟೀವನ್‌ ಸ್ಮಿತ್‌ 33, ಲಲಿತ್‌ ಯಾದವ್‌ ಔಟಾಗದೆ 22 ರನ್‌ ಹೊಡೆದರು. ಪಂದ್ಯದಲ್ಲಿ ಒಂದೂ ಅರ್ಧ ಶತಕ ದಾಖಲಾಗಲಿಲ್ಲ.

ಮಿಶ್ರಾ ಸ್ಪಿನ್‌ ಮೋಡಿ

ಮುಂಬೈ ಬ್ಯಾಟಿಂಗ್‌ ಸರದಿಗೆ ಎದ್ದೇಳಲಾಗದ ಹೊಡೆತವಿಕ್ಕಿದವರು ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ. ಇವರ ಸಾಧನೆ 24ಕ್ಕೆ 4 ವಿಕೆಟ್‌. ಇದು ಮುಂಬೈ ವಿರುದ್ಧ ಡೆಲ್ಲಿ ಬೌಲರ್‌ ಓರ್ವನ ಅತ್ಯುತ್ತಮ ಬೌಲಿಂಗ್‌ ಸಾಧನೆಯಾಗಿದೆ. ಅವರು ರೋಹಿತ್‌, ಇಶಾನ್‌ ಕಿಶನ್‌, ಹಾರ್ದಿಕ್‌ ಪಾಂಡ್ಯ ಮತ್ತು ಪೊಲಾರ್ಡ್‌ ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು.

ಮುಂಬೈ ತಂಡದ ಬಿಗ್‌ ಹಿಟ್ಟರ್‌ಗಳೆಲ್ಲರ ಬ್ಯಾಟ್‌ ಇಲ್ಲಿ ಮುಷ್ಕರ ಹೂಡಿದಂತಿತ್ತು. ಎಲ್ಲರೂ ಪಟಪಟನೆ ವಿಕೆಟ್‌ ಒಪ್ಪಿಸುತ್ತ ಹೋದರು. ಕ್ವಿಂಟನ್‌ ಡಿ ಕಾಕ್‌ (1), ಹಾರ್ದಿಕ್‌ ಪಾಂಡ್ಯ (0), ಕೃಣಾಲ್‌ ಪಾಂಡ್ಯ (1), ಕೈರನ್‌ ಪೊಲಾರ್ಡ್‌ (2) ಬಂದಷ್ಟೇ ವೇಗದಲ್ಲಿ ಪೆವಿಲಿಯನ್‌ ಸೇರಿಕೊಂಡರು. ಇವರ್ಯಾರೂ ಎರಡಂಕೆಯ ಗಡಿ ಮುಟ್ಟಲಿಲ್ಲ. ಡೆಲ್ಲಿ ದಾಳಿಯನ್ನು ಎದುರಿಸಿ ನಿಂತ ಅಗ್ರ ಕ್ರಮಾಂಕದ ಆಟಗಾರರೆಂದರೆ ನಾಯಕ ರೋಹಿತ್‌ ಶರ್ಮ (44) ಮತ್ತು ಸೂರ್ಯಕುಮಾರ್‌ ಯಾದವ್‌ (24) ಮಾತ್ರ. ರೋಹಿತ್‌ 30 ಎಸೆತ ಎದುರಿಸಿ 3 ಸಿಕ್ಸರ್‌, 3 ಫೋರ್‌ ಬಾರಿಸಿದರು. ಉಳಿದೊಂದು ಸಿಕ್ಸರ್‌ ಇಶಾನ್‌ ಕಿಶನ್‌ ಬ್ಯಾಟಿನಿಂದ ಸಿಡಿಯಿತು. ಸೂರ್ಯಕುಮಾರ್‌ 24 ರನ್ನಿಗೆ 15 ಎಸೆತ ತೆಗೆದುಕೊಂಡರು (4 ಬೌಂಡರಿ).

6 ವಿಕೆಟ್‌ ಪತನದ ಬಳಿಕ ಕ್ರೀಸಿನಲ್ಲಿದ್ದ ಇಶಾನ್‌ ಕಿಶನ್‌ ಮುಂಬೈ ಪಾಲಿನ ಕೊನೆಯ ಆಶಾಕಿರಣವಾಗಿದ್ದರು. ಆದರೆ ಇವರ ಆಟ 26 ರನ್ನಿಗೆ ಕೊನೆಗೊಂಡಿತು. ಈ ವಿಕೆಟ್‌ ಕೂಡ ಮಿಶ್ರಾ ಹಾರಿಸಿದರು.

3ನೇ ಓವರ್‌ನಲ್ಲಿ ಡಿ ಕಾಕ್‌ ವಿಕೆಟ್‌ ಕಿತ್ತ ಸ್ಟೋಯಿನಿಸ್‌ ಡೆಲ್ಲಿಗೆ ಮೊದಲ ಯಶಸ್ಸು ತಂದಿತ್ತರು. ಆಗ ಮುಂಬೈ ಕೇವಲ 9 ರನ್‌ ಮಾಡಿತ್ತು. ಆದರೆ ದ್ವಿತೀಯ ವಿಕೆಟಿಗೆ ಜತೆಗೂಡಿದ ರೋಹಿತ್‌-ಸೂರ್ಯಕುಮಾರ್‌ ಉತ್ತಮ ಹೋರಾಟವೊಂದನ್ನು ಸಂಘಟಿಸಿದರು. ಮೊತ್ತವನ್ನು 67ಕ್ಕೆ ಏರಿಸಿದರು. ಆಗ ಆವೇಶ್‌ ಖಾನ್‌ ಡೆಲ್ಲಿಗೆ ದೊಡ್ಡದೊಂದು ಬ್ರೇಕ್‌ ಒದಗಿಸಿದರು.

ಸ್ಕೋರ್‌ ಪಟ್ಟಿ
ಮುಂಬೈ ಇಂಡಿಯನ್ಸ್‌
ರೋಹಿತ್‌ ಶರ್ಮ ಸಿ ಸ್ಮಿತ್‌ ಬಿ ಮಿಶ್ರಾ 44
ಕ್ವಿಂಟನ್‌ ಡಿ ಕಾಕ್‌ ಸಿ ಪಂತ್‌ ಬಿ ಸ್ಟೋಯಿನಿಸ್‌ 1
ಸೂರ್ಯಕುಮಾರ್‌ ಸಿ ಪಂತ್‌ ಬಿ ಅವೇಶ್‌ 24
ಇಶಾನ್‌ ಕಿಶನ್‌ ಬಿ ಮಿಶ್ರಾ 26
ಹಾರ್ದಿಕ್‌ ಪಾಂಡ್ಯ ಸಿ ಸ್ಮಿತ್‌ ಬಿ ಮಿಶ್ರಾ 0
ಕೃಣಾಲ್‌ ಪಾಂಡ್ಯ ಬಿ ಲಲಿತ್‌ 1
ಕೈರನ್‌ ಪೊಲಾರ್ಡ್‌ ಎಲ್‌ಬಿಡಬ್ಲ್ಯು ಬಿ ಮಿಶ್ರಾ 2
ಜಯಂತ್‌ ಸಿ ಮತ್ತು ಬಿ ರಬಾಡ 23
ರಾಹುಲ್‌ ಚಹರ್‌ ಸಿ ಪಂತ್‌ ಬಿ ಅವೇಶ್‌ 6
ಜಸ್‌ಪ್ರೀತ್‌ ಬುಮ್ರಾ ಔಟಾಗದೆ 3
ಟ್ರೆಂಟ್‌ ಬೌಲ್ಟ್ ಔಟಾಗದೆ 1
ಇತರ 6
ಒಟ್ಟು (9 ವಿಕೆಟಿಗೆ) 137
ವಿಕೆಟ್‌ ಪತನ: 1-9, 2-67, 3-76, 4-77, 5-81, 6-84, 7-123, 8-129, 9-135.
ಬೌಲಿಂಗ್‌; ಮಾರ್ಕಸ್‌ ಸ್ಟೋಯಿನಿಸ್‌ 3-0-20-1
ಆರ್‌. ಅಶ್ವಿ‌ನ್‌ 4-0-30-0
ಕಾಗಿಸೊ ರಬಾಡ 3-0-25-1
ಅಮಿತ್‌ ಮಿಶ್ರಾ 4-0-24-4
ಅವೇಶ್‌ ಖಾನ್‌ 2-0-15-2
ಲಲಿತ್‌ ಯಾದವ್‌ 4-0-17-1

ಡೆಲ್ಲಿ ಕ್ಯಾಪಿಟಲ್ಸ್‌
ಪೃಥ್ವಿ ಶಾ ಸಿ ಮತ್ತು ಬಿ ಜಯಂತ್‌ 7
ಶಿಖರ್‌ ಧವನ್‌ ಸಿ ಕೃಣಾಲ್‌ ಬಿ ಚಹರ್‌ 45
ಸ್ಟಿವನ್‌ ಸ್ಮಿತ್‌ ಎಲ್‌ಬಿಡಬ್ಲ್ಯು ಬಿ ಪೊಲಾರ್ಡ್‌ 33
ಲಲಿತ್‌ ಯಾದವ್‌ ಔಟಾಗದೆ 22
ರಿಷಭ್‌ ಪಂತ್‌ ಸಿ ಕೃಣಾಲ್‌ ಬಿ ಬುಮ್ರಾ 7
ಶಿಮ್ರನ್‌ ಹೆಟ್‌ಮೈರ್‌ ಔಟಾಗದೆ 14
ಇತರ 10
ಒಟ್ಟು (19.1 ಓವರ್‌ಗಳಲ್ಲಿ 4 ವಿಕೆಟಿಗೆ) 138
ವಿಕೆಟ್‌ ಪತನ:1-11, 2-64, 3-100, 4-115.
ಬೌಲಿಂಗ್‌;
ಟ್ರೆಂಟ್‌ ಬೌಲ್ಟ್ 4-0-23-0
ಜಯಂತ್‌ ಯಾದವ್‌ 4-0-25-1
ಜಸ್‌ಪ್ರೀತ್‌ ಬುಮ್ರಾ 4-0-32-1
ಕೃಣಾಲ್‌ ಪಾಂಡ್ಯ 2-0-17-0
ರಾಹುಲ್‌ ಚಹರ್‌ 4-0-29-1
ಕೈರನ್‌ ಪೊಲಾರ್ಡ್‌ 1.1-0-9-1

ಟಾಪ್ ನ್ಯೂಸ್

LIC new rule these major changes will be applicable from may 10

ಇನ್ಮುಂದೆ ವಾರದಲ್ಲಿ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸಲಿದೆ ಎಲ್ ಐ ಸಿ ಕಚೇರಿ ..!

dyhtyt

ಪಶ್ಚಿಮ ಬಂಗಾಳ : ಕೇಂದ್ರ ಸಚಿವರ ವಾಹನದ ಮೇಲೆ ದಾಳಿ

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

Uber announces cash incentives for vaccinating 150000 drivers

ತನ್ನ ಎಲ್ಲಾ ಚಾಲಕರಿಗೆ ಲಸಿಕೆಗಾಗಿ ಪ್ರೋತ್ಸಾಹ ಧನ ನೀಡಲು ಮುಂದಾದ ಉಬರ್ !

ಕಾಫಿನಾಡಿನಲ್ಲಿ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ!

ಕಾಫಿನಾಡಿನಲ್ಲಿ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ!

uiuyiuyi

ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ

giyuiyiuuy

ಸಾವಿರಾರು ಜನರ ಹಸಿವು ನೀಗಿಸುತ್ತಿರುವ ಬಾಲಿವುಡ್ ನಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಯೋ ಬಬಲ್ ಒಳಗೆ ಕೋವಿಡ್ ಹೇಗೆ ಬಂತೆನ್ನುವುದೇ ಆಶ್ಚರ್ಯ: ಸೌರವ್ ಗಂಗೂಲಿ

ಬಯೋ ಬಬಲ್ ಒಳಗೆ ಕೋವಿಡ್ ಹೇಗೆ ಬಂತೆನ್ನುವುದೇ ಆಶ್ಚರ್ಯ: ಸೌರವ್ ಗಂಗೂಲಿ

ಐಪಿಎಲ್‌ ಐಡಿಯನ್ನೇ ನಕಲು ಮಾಡಿದ ಇಬ್ಬರ ಸೆರೆ! ದೆಹಲಿಯಲ್ಲಿ ಪಂದ್ಯ ವೀಕ್ಷಿಸಿದ್ದ ಭೂಪರು!

ಐಪಿಎಲ್‌ ಐಡಿಯನ್ನೇ ನಕಲು ಮಾಡಿದ ಇಬ್ಬರ ಸೆರೆ! ದೆಹಲಿಯಲ್ಲಿ ಪಂದ್ಯ ವೀಕ್ಷಿಸಿದ್ದ ಭೂಪರು!

ravindra jadeja

ಅತ್ಯಂತ ಸುರಕ್ಷಿತವೆನಿಸುವ ಸ್ಥಳಕ್ಕೆ ಮರಳಿದ್ದೇನೆ: ರವೀಂದ್ರ ಜಡೇಜಾ

jos buttler gave bat to jaiswal

ಯಶಸ್ವಿ ಜೈಸ್ವಾಲ್ ಗೆ ವಿಶೇಷ ಗಿಫ್ಟ್ ನೀಡಿದ ಜಾಸ್ ಬಟ್ಲರ್

Michael Hussey

ಸಿಎಸ್ ಕೆ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿಗೂ ಕೋವಿಡ್ ಪಾಸಿಟಿವ್

MUST WATCH

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

udayavani youtube

ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿಯಿಂದ ಕೊರೊನಾ ಜಾಗೃತಿ

udayavani youtube

ನರೇಗಾ ವೇತನ ತಾರತಮ್ಯ: ಕಂಪ್ಯೂಟರ್ ಆಪರೇಟರ್ ಮೇಲೆ ಹಲ್ಲೆ

udayavani youtube

ಆಸ್ಪತ್ರೆಗಳಲ್ಲಿ ಬೆಡ್ ಸಿಗದಿದ್ದಕ್ಕೆ CM Yediyurappa ಮನೆ ಮುಂದೆ ಧರಣಿ

udayavani youtube

ವ್ಯಾಕ್ಸೀನ್ ಕುರಿತು ಉಡುಪಿ ಜನತೆಗೆ ಶೋಭಾ ಅವರಿಂದ ಶುಭ ಸುದ್ದಿ

ಹೊಸ ಸೇರ್ಪಡೆ

LIC new rule these major changes will be applicable from may 10

ಇನ್ಮುಂದೆ ವಾರದಲ್ಲಿ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸಲಿದೆ ಎಲ್ ಐ ಸಿ ಕಚೇರಿ ..!

dyhtyt

ಪಶ್ಚಿಮ ಬಂಗಾಳ : ಕೇಂದ್ರ ಸಚಿವರ ವಾಹನದ ಮೇಲೆ ದಾಳಿ

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದ್ರೆ ಎಫ್ ಐಆರ್‌: ಸೋಮಶೇಖರ್

covid effect

ಕೊರೊನಾ ತಡೆ ಪಂಚಾಯ್ತಿ ಮಟ್ಟದಿಂದ ಆಗಲಿ

Give extra land for tomato trading

ಟೊಮೆಟೋ ವಹಿವಾಟಿಗೆ ಹೆಚ್ಚುವರಿ ಭೂಮಿ ನೀಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.