ಇನ್ನು ಕೇಂದ್ರೀಯ ವಿವಿ ಪ್ರವೇಶಕ್ಕೆ ಸಿಇಟಿ ಕಡ್ಡಾಯ : ಮುಂಬರುವ ಶೈಕ್ಷಣಿಕ ವರ್ಷದಿಂದಲೇ ಜಾರಿ
Team Udayavani, Dec 27, 2021, 9:00 PM IST
ನವದೆಹಲಿ : ಮುಂಬರುವ ಶೈಕ್ಷಣಿಕ ವರ್ಷದಿಂದ ದೇಶಾದ್ಯಂತ ಎಲ್ಲ ಕೇಂದ್ರೀಯ ವಿವಿಗಳಿಗೆ ಪ್ರವೇಶ ಪಡೆಯಬೇಕೆಂದರೆ ಪ್ರವೇಶ ಪರೀಕ್ಷೆ ಬರೆಯುವುದು ಕಡ್ಡಾಯವಾಗಲಿದೆ.
ಕೇಂದ್ರೀಯ ವಿವಿಗಳ ಎಲ್ಲ ಪದವಿ ಕೋರ್ಸ್‌ಗಳಿಗೆ(ಯುಜಿ) ಪ್ರವೇಶ ನೀಡಲು 2022ರಿಂದಲೇ ಕೇಂದ್ರೀಯ ವಿವಿ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಸಿಇಟಿ) ಜಾರಿಯಾಗಲಿದೆ. ಈ ಕುರಿತು ಈಗಾಗಲೇ ಎಲ್ಲ ವಿವಿಗಳಿಗೂ ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ(ಯುಜಿಸಿ) ಮಾಹಿತಿ ನೀಡಿದೆ. ಅದರಂತೆ, ದೇಶದ ಎಲ್ಲ ಕೇಂದ್ರೀಯ ವಿವಿಗಳೂ ಈ ಕಡ್ಡಾಯ ಸಿಇಟಿಗಾಗಿ ಸಿದ್ಧತೆ ಆರಂಭಿಸಿವೆ.
ದೆಹಲಿ ವಿವಿ ಕೂಡ 2022-23ರ ಶೈಕ್ಷಣಿಕ ವರ್ಷಕ್ಕೆ ಸಿಇಟಿ ಕಡ್ಡಾಯಗೊಳಿಸಿದೆ. ಕೆಲವು ವಿವಿಗಳಲ್ಲಿ ಪ್ರವೇಶ ಪರೀಕ್ಷೆಯ ಅಂಕಗಳ ಜೊತೆಗೆ ದ್ವಿತೀಯ ಪಿಯು ಪರೀಕ್ಷೆಯ ಅಂಕಗಳನ್ನೂ ಪರಿಗಣಿಸಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ : 14 ತಿಂಗಳ ಬಳಿಕ ಮಾಲೀಕನನ್ನು ನೋಡಿ ಓಡೋಡಿ ಬಂದ ಆನೆಗಳು