Udayavni Special

ಉದ್ಘಾಟನೆಗೆ ಮುನ್ನವೇ ಕಿಡಿಗೇಡಿಗಳಿಂದ ಹಾಳಾಗುತ್ತಿದೆ ಉದ್ಯಾನವನ

Team Udayavani, Mar 8, 2021, 5:30 AM IST

ಉದ್ಘಾಟನೆಗೆ ಮುನ್ನವೇ ಕಿಡಿಗೇಡಿಗಳಿಂದ ಹಾಳಾಗುತ್ತಿದೆ ಉದ್ಯಾನವನ

ಕುಂದಾಪುರ: ಇಲ್ಲಿನ ಪುರಸಭೆ ವ್ಯಾಪ್ತಿಯ ಟಿ.ಟಿ. ರೋಡ್‌ ವಾರ್ಡ್‌ನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಉದ್ಯಾನವನವೊಂದು ಉದ್ಘಾಟನೆಗೆ ಮುನ್ನವೇ ಕಿಡಿಗೇಡಿಗಳ ಅಧ್ವಾನದಿಂದ ಹಾಳಾಗುತ್ತಿದೆ.

ಉದ್ಯಾನವನ

ಇಲ್ಲಿದ್ದ ಉದ್ಯಾನವನ ನಾದುರಸ್ತಿಯಲ್ಲಿತ್ತು. ಸಮೀಪದಲ್ಲೇ ಶಾಲೆಯೂ ಇದ್ದು ಈ ಪರಿಸರದಲ್ಲಿ ಇರುವ ಅನೇಕ ಮನೆಯ ಮಕ್ಕಳಿಗೆ, ಕಾಲನಿಯ ಮಕ್ಕಳಿಗೆ ಉದ್ಯಾನವನ ಪ್ರಯೋಜನ ವಾಗುತ್ತಿತ್ತು. ಸಂಜೆಯ ವೇಳೆಗೆ ಹಿರಿಯರಿಗೆ ವಿಶ್ರಾಂತಿ ಪಡೆಯಲು, ಯುವಜನತೆಗೆ ನಡೆದಾಡಲು, ಮಕ್ಕಳಿಗೆ ಆಟವಾಡಲು ದೊರೆಯುತ್ತಿತ್ತು. ಆದರೆ ನಿರ್ವಹಣೆ ಇಲ್ಲದೇ ಪಾಳು ಬಿದ್ದಿತ್ತು.

ಅಡ್ಡೆ
ಪಾಳುಬಿದ್ದ ಉದ್ಯಾನವನ ನಂತರದ ದಿನಗಳಲ್ಲಿ ಕಿಡಿಗೇಡಿಗಳ ಅಡ್ಡೆಯೂ ಆಗಿತ್ತು. ಅನೈತಿಕ ಚಟುವಟಿಕೆಗಳ ತಾಣವೂ ಆಗಿ ಈ ಪರಿಸರದ ಜನತೆಗೆ ಸಹಿಸಲು ಕಷ್ಟವಾದ ಪರಿಸ್ಥಿತಿ ಇತ್ತು. ಇವೆಲ್ಲದರಿಂದ ಜನತೆ ರೋಸಿ ಹೋಗಿದ್ದರು. ಉದ್ಯಾನವನ ದುರವಸ್ಥೆ ಬಗ್ಗೆ ಉದಯವಾಣಿ ಸುದಿನ ಸರಣಿ ವರದಿಗಳನ್ನು ಪ್ರಕಟಿಸಿ, ಆಡಳಿತವನ್ನು ಎಚ್ಚರಿಸಿತ್ತು.

ಕಿಡಿಗೇಡಿ ಕೃತ್ಯ
ಇಷ್ಟೆಲ್ಲ ಕಾಮಗಾರಿ ಆಗಿ ಇನ್ನೇನು ಕೆಲವೇ ದಿನಗಳಲ್ಲಿ ನೂತನ ಉದ್ಯಾನವನ ಉದ್ಘಾಟನೆಗೊಳ್ಳಲಿದೆ ಎನ್ನುವಾಗ ಕೆಲವು ಕಿಡಿಗೇಡಿಗಳಿಂದ ಹಾನಿಗೊಳಗಾಗಿದೆ. ಸಿಮೆಂಟ್‌ ತಡೆ ಬೇಲಿಯನ್ನು ಅಲ್ಲಲ್ಲಿ ಮುರಿಯಲಾಗಿದೆ. ಮಕ್ಕಳನ್ನು ಒಳಗೆ ನುಗ್ಗಿಸಿ ಕಳುಹಿಸಲಾಗುತ್ತಿದೆ. ದೊಡ್ಡವರು ಹೋಗುವಂತೆ ಬೇಲಿ ಮುರಿದಿದ್ದು, ಆಗಾಗ್ಗೆ ಮದ್ಯದ ಬಾಟಲಿಗಳು ಇಲ್ಲಿ ದೊರೆಯುತ್ತಿದೆ.

ಸಿಸಿ ಕೆಮರಾ ಅಗತ್ಯ
ಟಿ.ಟಿ. ರೋಡ್‌ ಉದ್ಯಾನವನ ಹಾಗೂ ಫೆರ್ರಿ ರೋಡ್‌ ಉದ್ಯಾನವನ ಸಂಜೆ ಹಾಗೂ ಬೆಳಗಿನ ವೇಳೆಗೆ ನೂರಾರು ಮಂದಿಗೆ ಅನುಕೂಲವಾಗಿದೆ. ಆದರೆ ಸೂಕ್ತ ಬೆಳಕಿನ ವ್ಯವಸ್ಥೆ ಹಾಗೂ ಸಿಸಿ ಕೆಮರಾ ಅಳವಡಿಸಿದರೆ ಇಲ್ಲಿ ಕಿಡಿಗೇಡಿಗಳ ಕಾಟ ನಿಲ್ಲಲಿದೆ.

ಮಂಜೂರು
ಪುರಸಭೆ ಅಧ್ಯಕ್ಷರೂ ಆದ, ಈ ವಾರ್ಡ್‌ನ ಸದಸ್ಯೆ ವೀಣಾ ಭಾಸ್ಕರ ಮೆಂಡನ್‌ ಅವರ ಮುತುವರ್ಜಿಯಿಂದ ಉದ್ಯಾನವನ ಪುನರ್‌ನಿರ್ಮಾಣಕ್ಕೆ 10.5 ಲಕ್ಷ ರೂ. ಮಂಜೂರಾಗಿದ್ದು ಕಾಮಗಾರಿ ನಡೆದಿದೆ. ಆರಂಭವಾಗುವಾಗ ಕೆಲವರಿಂದ ವಿರೋಧವೂ ಬಂದಿತ್ತು. ಈಗ ಉದ್ಯಾನವನದಲ್ಲಿ ಇಂಟರ್‌ಲಾಕ್‌ ಅಳವಡಿಸಲಾಗಿದೆ. ತಡೆಬೇಲಿ ಹಾಕಲಾಗಿದೆ. ಮಕ್ಕಳ ಆಟಕ್ಕೆ ಉಯ್ನಾಲೆ ಹಾಗೂ ಇನ್ನಿತರ ಸಲಕರಣೆ ಅಳವಡಿಸಲಾಗಿದೆ. ಬಿದ್ದರೆ ಏಟಾಗದಂತೆ ಮರಳು ಹಾಕಲಾಗಿದೆ. ಇನ್ನೂ ಸ್ವಲ್ಪ ಕಾಮಗಾರಿಯ ಅವಶ್ಯವಿದೆ. ಸುಣ್ಣ ಬಣ್ಣ ಆಗಬೇಕಿದೆ. ಉದ್ಯಾನವನದ ಹೊರಭಾಗದಲ್ಲಿ ಸ್ವಲ್ಪ ಸ್ಥಳಕ್ಕೆ ಇಂಟರ್‌ಲಾಕ್‌ ಅವಶ್ಯವಿದೆ.

ಶೀಘ್ರ ಲೋಕಾರ್ಪಣೆ
ಕಾಮಗಾರಿ ಅಂತಿಮ ಹಂತದಲ್ಲಿದ್ದು ಕಿಡಿಗೇಡಿಗಳು ಸಿಮೆಂಟ್‌ ಬೇಲಿಗೆ ಹಾನಿ ಮಾಡಿದ್ದಾರೆ. ಅದನ್ನು ಸರಿಪಡಿಸಿ, ಸಿಸಿಟಿವಿ ಹಾಗೂ ಲೈಟಿಂಗ್‌ ಹಾಕಿ ಶೀಘ್ರ ಲೋಕಾರ್ಪಣೆ ಮಾಡಲಾಗುವುದು.
– ವೀಣಾ ಭಾಸ್ಕರ ಮೆಂಡನ್‌, ಅಧ್ಯಕ್ಷರು, ಪುರಸಭೆ

ಟಾಪ್ ನ್ಯೂಸ್

ಡಾ.ರಾಜ್ ಅಪರೂಪದ ಕಥೆಗಳು: ಕಾಳಹಸ್ತಿ ಮಹಾತ್ಮಂ ಮತ್ತು ರಾಜ್‌ ನಿರ್ಧಾರ

ಡಾ.ರಾಜ್ ಅಪರೂಪದ ಕಥೆಗಳು: ಕಾಳಹಸ್ತಿ ಮಹಾತ್ಮಂ ಮತ್ತು ರಾಜ್‌ ನಿರ್ಧಾರ

ಆತಂಕದ ಸ್ಥಿತಿ! ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಮುನ್ಸೂಚನೆ ನೀಡಿದ ಸಚಿವ ಸುಧಾಕರ್

ಆತಂಕದ ಸ್ಥಿತಿ! ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಮುನ್ಸೂಚನೆ ನೀಡಿದ ಸಚಿವ ಸುಧಾಕರ್

ಕೋವಿಡ್ 19 ಸೋಂಕಿನಿಂದ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ನಿಧನ

ಕೋವಿಡ್ 19 ಸೋಂಕಿನಿಂದ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ನಿಧನ

ದೆಹಲಿಯಲ್ಲಿ 10 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿ: ಕೇಜ್ರಿವಾಲ್ ಗೆ ಸಿಎಐಟಿ

ದೆಹಲಿಯಲ್ಲಿ 10 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿ: ಕೇಜ್ರಿವಾಲ್ ಗೆ ಸಿಎಐಟಿ

nasa-released-milky-way-galaxy-images-taken-from-international-space-station

ಕ್ಷೀರಪಥದ ಅಮೋಘ ಚಿತ್ರ ಬಿಡುಗಡೆಗೊಳಿಸಿದೆ ನಾಸಾ..!

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಜನರೂ ಸಹಕಾರ ಬೇಕು: ಸಚಿವ ಬಿ.ಸಿ. ಪಾಟೀಲ್

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ, ಜನರ ಸಹಕಾರ ಬೇಕು: ಸಚಿವ ಬಿ.ಸಿ. ಪಾಟೀಲ್

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ‌ಅಬ್ದುಲ್ ನಝೀರ್ ಗೆ ಮಾತೃ ವಿಯೋಗ

ಮೂಡುಬಿದಿರೆ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ‌ಅಬ್ದುಲ್ ನಝೀರ್ ಗೆ ಮಾತೃ ವಿಯೋಗಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಾ.ರಾಜ್ ಅಪರೂಪದ ಕಥೆಗಳು: ಕಾಳಹಸ್ತಿ ಮಹಾತ್ಮಂ ಮತ್ತು ರಾಜ್‌ ನಿರ್ಧಾರ

ಡಾ.ರಾಜ್ ಅಪರೂಪದ ಕಥೆಗಳು: ಕಾಳಹಸ್ತಿ ಮಹಾತ್ಮಂ ಮತ್ತು ರಾಜ್‌ ನಿರ್ಧಾರ

ಆತಂಕದ ಸ್ಥಿತಿ! ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಮುನ್ಸೂಚನೆ ನೀಡಿದ ಸಚಿವ ಸುಧಾಕರ್

ಆತಂಕದ ಸ್ಥಿತಿ! ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಮುನ್ಸೂಚನೆ ನೀಡಿದ ಸಚಿವ ಸುಧಾಕರ್

mango coming to Customers  home!

ಗ್ರಾಹಕರ ಮನೆಗೇ ಬರಲಿದೆ ಮಾವು !

ಕೋವಿಡ್ 19 ಸೋಂಕಿನಿಂದ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ನಿಧನ

ಕೋವಿಡ್ 19 ಸೋಂಕಿನಿಂದ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ನಿಧನ

incident held at bangalore

ಮನೆ ಸೇರಲು ಬಸ್‌ಗಳಿಲ್ಲದೆ ಪರದಾಟ

MUST WATCH

udayavani youtube

ಕೊರೊನಾ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತುರ್ತು ಸಭೆ

udayavani youtube

ಮಂಗಳೂರು : ಐಟಿ ಕಛೇರಿಯಲ್ಲಿ ಆಕಸ್ಮಿಕವಾಗಿ ಬೆಂಕಿ

udayavani youtube

Covid 2ನೇ ಅಲೆನಾವು ಬೀದಿಗೆ ಬೀಳಬೇಕಾ?

udayavani youtube

ಚಾರುಕೊಟ್ಟಿಗೆ: ಸಂಪೂರ್ಣ ಬತ್ತಿ ಹೋದ ಕುರುವಾಡಿ ಮದಗ

udayavani youtube

ಭಾರತದಲ್ಲಿ 10 ದಿನಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳ

ಹೊಸ ಸೇರ್ಪಡೆ

ಡಾ.ರಾಜ್ ಅಪರೂಪದ ಕಥೆಗಳು: ಕಾಳಹಸ್ತಿ ಮಹಾತ್ಮಂ ಮತ್ತು ರಾಜ್‌ ನಿರ್ಧಾರ

ಡಾ.ರಾಜ್ ಅಪರೂಪದ ಕಥೆಗಳು: ಕಾಳಹಸ್ತಿ ಮಹಾತ್ಮಂ ಮತ್ತು ರಾಜ್‌ ನಿರ್ಧಾರ

ಆತಂಕದ ಸ್ಥಿತಿ! ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಮುನ್ಸೂಚನೆ ನೀಡಿದ ಸಚಿವ ಸುಧಾಕರ್

ಆತಂಕದ ಸ್ಥಿತಿ! ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಮುನ್ಸೂಚನೆ ನೀಡಿದ ಸಚಿವ ಸುಧಾಕರ್

mango coming to Customers  home!

ಗ್ರಾಹಕರ ಮನೆಗೇ ಬರಲಿದೆ ಮಾವು !

ಕೋವಿಡ್ 19 ಸೋಂಕಿನಿಂದ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ನಿಧನ

ಕೋವಿಡ್ 19 ಸೋಂಕಿನಿಂದ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ನಿಧನ

incident held at bangalore

ಮನೆ ಸೇರಲು ಬಸ್‌ಗಳಿಲ್ಲದೆ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.