8 ವರ್ಷಗಳ ಬಳಿಕ ವೆಸ್ಟ್ ಇಂಡೀಸ್ ತಂಡಕ್ಕೆ ಮರಳಿದ ಎಡ್ವರ್ಡ್ಸ್
Team Udayavani, Feb 28, 2021, 2:50 AM IST
ಕಿಂಗ್‌ಸ್ಟನ್ : ವೆಸ್ಟ್ ಇಂಡೀಸಿನ ವೇಗದ ಬೌಲರ್ ಫಿಡೆಲ್ ಎಡ್ವರ್ಡ್ಸ್ ಬರೋಬ್ಬರಿ 8 ವರ್ಷಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಕರೆ ಪಡೆದಿದ್ದಾರೆ. ಶ್ರೀಲಂಕಾ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ 3 ಪಂದ್ಯಗಳ ಟಿ20 ಸರ ಣಿ ಗಾಗಿ ಪ್ರಕಟಿಸಲಾದ ತಂಡದಲ್ಲಿ ಎಡ್ವರ್ಡ್ಸ್ ಸ್ಥಾನ ಸಂಪಾದಿಸಿದ್ದಾರೆ. ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಕೂಡ ತಂಡದಲ್ಲಿದ್ದಾರೆ.
55 ಟೆಸ್ಟ್, 50 ಏಕದಿನ ಪಂದ್ಯಗಳ ಅನುಭವಿಯಾಗಿರುವ 39 ವರ್ಷದ ಫಿಡೆಲ್ ಎಡ್ವರ್ಡ್ಸ್ 2012ರಂದು ಕೊನೆಯ ಸಲ ವೆಸ್ಟ್ ಇಂಡೀಸನ್ನು ಪ್ರತಿನಿಧಿಸಿದ್ದರು. ಅದು ಶ್ರೀಲಂಕಾ ವಿರುದ್ಧ ಪಲ್ಲೆಕೆಲೆಯಲ್ಲಿ ನಡೆದ ಟಿ20 ಪಂದ್ಯವಾಗಿತ್ತು.
ಕಾಕತಾಳೀಯವೆಂಬಂತೆ, ಶ್ರೀಲಂಕಾ ಎದುರಿನ ಟಿ20 ಸರಣಿ ಮೂಲಕವೇ ಅವರ ಪುನರ್ ಪ್ರವೇಶವಾಗುತ್ತಿದೆ. ಎಡ್ವರ್ಡ್ಸ್ ಸೇರ್ಪಡೆಯಿಂದ ತಂಡದ ಬೌಲಿಂಗ್ ಸಾಮರ್ಥ್ಯ ಹೆಚ್ಚಲಿದೆ ಎಂಬುದಾಗಿ ಆಯ್ಕೆ ಸಮಿತಿ ಅಧ್ಯಕ್ಷ ರೋಜರ್ ಹಾರ್ಪರ್ ಹೇಳಿದ್ದಾರೆ.
ಅಖೀಲ್ ಹುಸೇನ್ ಮತ್ತು ಕೆವಿನ್ ಸಿಂಕ್ಲೇರ್ ವಿಂಡೀಸ್ ಟಿ20 ತಂಡದ ಹೊಸ ಮುಖಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘ಇದು ಕಸ್ತೂರಿ ನಿವಾಸದ ಕೈ, ರನ್ ಸಿಡಿಸುತ್ತೇ ಹೊರತು ನಿರಾಸೆ ಮಾಡೋದಿಲ್ಲ’
ಮುರಳೀಧರನ್ ಗೆ ಹೃದಯ ಸಂಬಂಧಿ ಸಮಸ್ಯೆ: ಲಂಕಾ ಲೆಜೆಂಡ್ ಗೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ
ಏಶ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್: ಸ್ವರ್ಣ ಸಾಧನೆಗೈದ ಝಿಲ್ಲಿ ದಾಲಾ ಬೆಹರಾ
ಪಂಜಾಬ್ ಕಿಂಗ್ಸ್ ಮೇಲೆ ಡೆಲ್ಲಿ ಸವಾರಿ : ಪಂಜಾಬ್ ವಿರುದ್ಧ ಡೆಲ್ಲಿಗೆ 6 ವಿಕೆಟ್ ಗಳ ಜಯ
ಏಶ್ಯನ್ ಕುಸ್ತಿ ಚಾಂಪಿಯನ್ಶಿಪ್ : ರಜತ ಪದಕ ಗೆದ್ದ ದೀಪಕ್ ಪೂನಿಯ