ಅಜ್ಜ-ಅಜ್ಜಿಯ ನೆನಪಿಗಾಗಿ 2 ಬಸ್‌ ತಂಗುದಾಣ ನಿರ್ಮಿಸಿದ ಮೊಮ್ಮಗ

Team Udayavani, Apr 10, 2021, 3:45 AM IST

ಅಜ್ಜ-ಅಜ್ಜಿಯ ನೆನಪಿಗಾಗಿ 2 ಬಸ್‌ ತಂಗುದಾಣ ನಿರ್ಮಿಸಿದ ಮೊಮ್ಮಗ

ಕೋಟ: ಉದಯವಾಣಿಯ ಪತ್ರಿಕಾ ಏಜೆಂಟ್‌ ಸಾಸ್ತಾನ ಪಾಂಡೇಶ್ವರದ ನಿವಾಸಿ ಚಂದ್ರಶೇಖರ್‌ ಮಯ್ಯ ಅವರು ಪತ್ರಿಕಾ ವಿತರಣೆ ಯನ್ನೇ ಜೀವನವಾಗಿಸಿಕೊಂಡವರು.

ಇವರು ತನ್ನ ಅಜ್ಜ-ಅಜ್ಜಿಯ ನೆನಪಿಗಾಗಿ 6 ಲಕ್ಷ ರೂ. ಸ್ವಂತ ಹಣವನ್ನು ವಿನಿಯೋಗಿಸಿ ಎರಡು ಸುಸಜ್ಜಿತ ಬಸ್‌ ತಂಗುದಾಣಗಳನ್ನು ನಿರ್ಮಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಅಜ್ಜ-ಅಜ್ಜಿಯ ಪ್ರೇರಣೆ
ಚಂದ್ರಶೇಖರ್‌ ಮಯ್ಯ ಅವರ ಅಜ್ಜ ನರಸಿಂಹ ತುಂಗ ಹಾಗೂ ಅಜ್ಜಿ ನಾಗವೇಣಿಯಮ್ಮ ಪರೋಪ ಕಾರಿಯಾಗಿ ಗುರುತಿಸಿಕೊಂಡಿದ್ದರು. ಸುಮಾರು ಒಂದು ದಶಕದ ಹಿಂದೆ ರಾಷ್ಟ್ರೀಯ ಹೆದ್ದಾರಿಯು ಚಿಕ್ಕ ರಸ್ತೆಯಾಗಿದ್ದ ಸಂದರ್ಭ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದವರಿಗೆ ಬಾಯಾರಿಕೆ ನೀಗಲು ತನ್ನ ಮನೆಯ ಮುಂದೆ ಬೆಲ್ಲ-ನೀರು ಹಾಗೂ ಕುಳಿತು ವಿಶ್ರಮಿಸಲು ಜಗಲಿಯ ವ್ಯವಸ್ಥೆ ಮಾಡಿದ್ದರು. ಹೀಗಾಗಿ ಅಜ್ಜನ ಆದರ್ಶವನ್ನು ಪ್ರೇರಣೆಯಾಗಿಸಿಕೊಂಡ ಮೊಮ್ಮಗ ಚಂದ್ರಶೇಖರ ಮಯ್ಯ ಅವರು ಅವರ ರೀತಿಯಲ್ಲೇ ನಾನು ಏನಾದರೂ ಸಮಾಜ ಸೇವೆ ಮಾಡಬೇಕು ಎನ್ನುವ ಸಂಕಲ್ಪ ತೊಟ್ಟು ಒಂದು ವರ್ಷದ ಹಿಂದೆ ಉಡುಪಿ-ಕುಂದಾಪುರ ಮಾರ್ಗದಲ್ಲಿ ಪಾಂಡೇಶ್ವರ ಈಶ್ವರಮಠದ ಎದುರು ಸುಮಾರು 2.5 ಲಕ್ಷ ರೂ. ವೆಚ್ಚದಲ್ಲಿ ದಿ| ನರಸಿಂಹ ತುಂಗ ಸ್ಮರಣಾರ್ಥ ಬಸ್‌ತಂಗುದಾಣ ನಿರ್ಮಿಸಿದರು.

ಇದೀಗ ಅದರ ಎದುರುಗಡೆ ಕುಂದಾಪುರ- ಉಡುಪಿ ಮಾರ್ಗದಲ್ಲಿ ಚರ್ಚ್‌ ಶಾಲೆಯ ಪಕ್ಕದಲ್ಲಿ ಸುಮಾರು 3.5 ಲಕ್ಷ ವೆಚ್ಚದಲ್ಲಿ ಸಾಂಪ್ರದಾಯಿಕ ಶೈಲಿಯ, ಪರಿಸರ ಸ್ನೇಹಿ ಇನ್ನೊಂದು ಬಸ್‌ತಂಗುದಾಣ ನಿರ್ಮಿಸಿದ್ದು ಎ. 16ಕ್ಕೆ ಇದರ ಉದ್ಘಾಟನೆ ನಡೆಯಲಿದೆ. ಈ ತಂಗುದಾಣಕ್ಕೆ ಅಜ್ಜಿ ದಿ| ನಾಗವೇಣಿಯಮ್ಮ ಅವರ ಹೆಸರಿಟ್ಟಿದ್ದಾರೆ.

ಮಾದರಿ ಕಾರ್ಯ
ಚಂದ್ರಶೇಖರ್‌ ಮಯ್ಯ ಅವರು 21 ವರ್ಷದಿಂದ ಉದಯವಾಣಿಯ ಪತ್ರಿಕಾ ಏಜೆಂಟ್‌ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 10 ವರ್ಷದ ಹಿಂದೆ ತ್ರಿಡಿ ಆ್ಯನಿಮೇಟರ್‌ ಎಂಜಿನಿಯರಿಂಗ್‌ ವಿಭಾಗದಲ್ಲಿ ಉಪನ್ಯಾಸಕ ಹುದ್ದೆಯ ಅವಕಾಶ ಸಿಕ್ಕಿದ್ದರೂ ಅದನ್ನು ತ್ಯಜಿಸಿ ಹುಟ್ಟೂರಿಗೆ ಏನಾದರೂ ಸೇವೆ ಸಲ್ಲಿಸಬೇಕು ಎನ್ನುವುದು ಇವರ ಅದಮ್ಯ ಬಯಕೆಯಾಗಿದೆ.

ಟಾಪ್ ನ್ಯೂಸ್

ಪ್ರಾಣಿಗಳೂ ಈ ಆಹಾರ ತಿನ್ನಲ್ಲ..: ಮೆಸ್ ಫುಡ್ ಬಗ್ಗೆ ಆಕ್ರೋಶ ಹೊರಹಾಕಿದ ಉ.ಪ್ರದೇಶ ಪೊಲೀಸ್

ಪ್ರಾಣಿಗಳೂ ಈ ಆಹಾರ ತಿನ್ನಲ್ಲ..: ಮೆಸ್ ಫುಡ್ ಬಗ್ಗೆ ಆಕ್ರೋಶ ಹೊರಹಾಕಿದ ಉ.ಪ್ರದೇಶ ಪೊಲೀಸ್

section

ಕೊಪ್ಪಳ: ಕ್ಷುಲ್ಲಕ ಕಾರಣಕ್ಕೆ ಗುಂಪುಗಳ ಮಾರಾಮಾರಿ; ಇಬ್ಬರ ಸಾವು

ರಾಕಿಭಾಯ್‌ ಗೆ ರಾಖಿ ಕಟ್ಟಿದ ಮುದ್ದಿನ ತಂಗಿ: ಫೋಟೋ ಹಂಚಿ ಶುಭಾಶಯ ಕೋರಿದ ಯಶ್

ರಾಕಿಭಾಯ್‌ ಗೆ ರಾಖಿ ಕಟ್ಟಿದ ಮುದ್ದಿನ ತಂಗಿ: ಫೋಟೋ ಹಂಚಿ ಶುಭಾಶಯ ಕೋರಿದ ಯಶ್

ಬೇದೂರು ಗ್ರಾಮದಲ್ಲಿ ಗುಡ್ಡ ಕುಸಿತ ಶುರು ; ಆತಂಕ ವ್ಯಕ್ತಪಡಿಸಿದ ವೃಕ್ಷ ಲಕ್ಷ ಆಂದೋಲನ

ಬೇದೂರು ಗ್ರಾಮದಲ್ಲಿ ಗುಡ್ಡ ಕುಸಿತ ; ಆತಂಕ ವ್ಯಕ್ತಪಡಿಸಿದ ವೃಕ್ಷ ಲಕ್ಷ ಆಂದೋಲನ

thumb 5 mamata banarjee

ಮೀನು ಮಾರಾಟ ಮಾಡುತ್ತಿದ್ದ ಮಮತಾ ಆಪ್ತ ಮಂಡಲ್ ಇಂದು ಸಾವಿರ ಕೋಟಿ ಆಸ್ತಿ ಒಡೆಯ!

ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ: ಲೋಕಾಯುಕ್ತಕ್ಕೆ ಮತ್ತೆ ಪವರ್

ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ: ಲೋಕಾಯುಕ್ತಕ್ಕೆ ಮತ್ತೆ ಪವರ್

3tikayath

ಹೆಸರು ಗಳಿಸಲು ಟಿಕಾಯತ್‌ಗೆ ಮಸಿ ಬಳಿದಿದ್ದ ಆರೋಪಿಗಳು!: ಮೂವರ ವಿರುದ್ಧ ಜಾರ್ಚ್‌ಶೀಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

ಹೆದ್ದಾರಿಯ ಅಪಾಯಕಾರಿ ತಿರುವಿನಲ್ಲಿ ತಪ್ಪದ ಸಂಕಷ್ಟ!

ವಾಹನಗಳಲ್ಲೂ ರಾಷ್ಟ್ರ ಧ್ವಜಕ್ಕೆ ಅವಕಾಶ : ಅವಮಾನ ಆಗದಂತೆ ಎಚ್ಚರ ವಹಿಸಿ : ಡಿಸಿ

ವಾಹನಗಳಲ್ಲೂ ರಾಷ್ಟ್ರ ಧ್ವಜಕ್ಕೆ ಅವಕಾಶ : ಅವಮಾನ ಆಗದಂತೆ ಎಚ್ಚರ ವಹಿಸಿ : ಡಿಸಿ

15-death

ಕಟಪಾಡಿ: ರಾ. ಹೆದ್ದಾರಿ 66 ರಲ್ಲಿ ಅಪರಿಚಿತ ವಾಹನ ಢಿಕ್ಕಿ: ಸ್ಕೂಟರ್ ಸವಾರ ಸಾವು

ಹರ್‌ ಘರ್‌ ತಿರಂಗಾ ಅಭಿಯಾನ : ಮಕ್ಕಳಿಂದ ಪಾಲಕ, ಪೋಷಕರಿಗೆ ಪತ್ರ!

ಹರ್‌ ಘರ್‌ ತಿರಂಗಾ ಅಭಿಯಾನ : ಮಕ್ಕಳಿಂದ ಪಾಲಕ, ಪೋಷಕರಿಗೆ ಪತ್ರ!

ತೆಂಗಿನ ಕಾಯಿ ಕೀಳುವ ಕಾರ್ಮಿಕರಿಗೆ ಕೇರಾ ವಿಮೆ

ತೆಂಗಿನ ಕಾಯಿ ಕೀಳುವ ಕಾರ್ಮಿಕರಿಗೆ ಕೇರಾ ವಿಮೆ

MUST WATCH

udayavani youtube

ಎಸಿಬಿ ರಚನೆ ಆದೇಶ ರದ್ದುಗೊಳಿಸಿ ಹೈಕೋರ್ಟ್ ಮಹತ್ವದ ಆದೇಶ

udayavani youtube

ವರ್ಗಾವಣೆಗೊಂಡ ಚಿಕ್ಕಮಗಳೂರು ಎಸ್.ಪಿ ಗೆ ಹೂಮಳೆಗೈದು ಬೀಳ್ಕೊಟ್ಟ ಸಿಬ್ಬಂದಿ…

udayavani youtube

3 ವರ್ಷಗಳ ಬಳಿಕ ಕೆಆರ್‌ಎಸ್ ಡ್ಯಾಂನಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ರಿಲೀಸ್

udayavani youtube

ನಟ ದರ್ಶನ್‌ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ

udayavani youtube

ಪ್ರವೀಣ್‌ ಹತ್ಯೆ ಪ್ರಕರಣ : ಮುಖ್ಯ ಆರೋಪಿಗಳ ಕುರಿತು ಮಹತ್ವದ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ

ಹೊಸ ಸೇರ್ಪಡೆ

16

ಅಲ್ಬೆಂಡೋಜೋಲ್‌ ಮಾತ್ರೆ ಸೇವಿಸಿ

ಪ್ರಾಣಿಗಳೂ ಈ ಆಹಾರ ತಿನ್ನಲ್ಲ..: ಮೆಸ್ ಫುಡ್ ಬಗ್ಗೆ ಆಕ್ರೋಶ ಹೊರಹಾಕಿದ ಉ.ಪ್ರದೇಶ ಪೊಲೀಸ್

ಪ್ರಾಣಿಗಳೂ ಈ ಆಹಾರ ತಿನ್ನಲ್ಲ..: ಮೆಸ್ ಫುಡ್ ಬಗ್ಗೆ ಆಕ್ರೋಶ ಹೊರಹಾಕಿದ ಉ.ಪ್ರದೇಶ ಪೊಲೀಸ್

15

ನೇಕಾರರ ಅಭಿವೃದ್ಧಿಗೆ ಸರಕಾರ ಯತ್ನ

section

ಕೊಪ್ಪಳ: ಕ್ಷುಲ್ಲಕ ಕಾರಣಕ್ಕೆ ಗುಂಪುಗಳ ಮಾರಾಮಾರಿ; ಇಬ್ಬರ ಸಾವು

14

ಆರೆಸ್ಸೆಸ್‌ ಪ್ರಮುಖರಿಗೆ ರಾಷ್ಟ್ರಧ್ವಜ ವಿತರಿಸಿದ ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.