ಗಂಗಾವತಿ : ವೈಭವದಿಂದ ಜರುಗಿದ ಹೇಮಗುಡ್ಡದ ಅಂಬಾರಿ ಮೆರವಣಿಗೆ

ಮಾಜಿ ಸಂಸದ ಎಚ್ ಜಿ ರಾಮುಲು ಅವರಿಂದ ಅಂಬಾರಿ ಮೆರವಣಿಗೆಗೆ ಚಾಲನೆ

Team Udayavani, Oct 15, 2021, 10:22 AM IST

ggkjhgfds

ಗಂಗಾವತಿ :ನಾಡಹಬ್ಬ ದಸರಾ ಸಕಲ ಜೀವರಾಶಿಗಳಿಗೆ ಒಳಿತನ್ನು ಮಾಡಲಿ ಜಗತ್ತನ್ನು ಕಾಡುತ್ತಿರುವ ಕೊರೋನಾ ಮಹಾಮಾರಿ ಬೇಗನೆ ದೂರವಾಗಲಿ ದುರ್ಗಾಪರಮೇಶ್ವರಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಮಾಜಿ ಸಂಸದ ಎಚ್. ಜಿ .ರಾಮುಲು ಹೇಳಿದರು .

ಅವರು ತಾಲ್ಲೂಕಿನ ಸುಕ್ಷೇತ್ರ ಹೇಮಗುಡ್ಡದಲ್ಲಿ ಶರನ್ನವರಾತ್ರಿ ನಿಮಿತ್ತ ದಸರಾ ಆನೆ ಮೇಲೆ ಅಂಬಾರಿ ಮೆರವಣಿಗೆಗೆ ಪೂಜೆ ಮಾಡುವ ಮೂಲಕ  ಚಾಲನೆ ನೀಡಿ ಮಾತನಾಡಿದರು .

ನಾಡಹಬ್ಬ ದಸರಾ ಆಚರಣೆ ಮಾಡಿದ್ದು ಮೊದಲು ಕುಮ್ಮಟ ದುರ್ಗದ ಅರಸರು ನಂತರ ವಿಜಯನಗರ ಇದೀಗ ಮೈಸೂರಿನಲ್ಲಿ ಸರ್ಕಾರದ ಪರವಾಗಿ ನಾಡಹಬ್ಬದ ಆಚರಣೆ ಮಾಡಲಾಗುತ್ತಿದೆ .ದಸರಾ ಹಬ್ಬ ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವಾಗಿದ್ದ ನಾಡು ನುಡಿ ಸಂಸ್ಕೃತಿಯ ಅನಾವರಣ ಈ ಹಬ್ಬದಲ್ಲಿ ಆಗುತ್ತದೆ .ಸರಕಾರ ಈ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಲು ದಸರಾ ಹಬ್ಬವನ್ನು ಕುಮ್ಮಟದುರ್ಗದಿಂದ ಆರಂಭಿಸಿ ವಿಜಯನಗರ ನಂತರ ಮೈಸೂರಿನಲ್ಲಿ ನಿರಂತರವಾಗಿ ಆಚರಣೆ ಮಾಡುವಂತಾಗಬೇಕು .ಹೇಮಗುಡ್ಡದ ಶ್ರೀದುರ್ಗಾಪರಮೇಶ್ವರಿ ಕುಮ್ಮಟದುರ್ಗದ ಮತ್ತು ಕನಕಗಿರಿ ದೊರೆಗಳ ಅಧಿದೈವವಾಗಿದ್ದಾಳೆ .ಮನುಷ್ಯ ಆಧ್ಯಾತ್ಮಿಕ ಧಾರ್ಮಿಕವಾಗಿ ಒಳ್ಳೆಯ ನಡತೆಯುಳ್ಳವನು ಆದರೆ ಅವನ ಜೀವನವು ಒಳ್ಳೆಯದಾಗುತ್ತದೆ ಎಂದರು .

ಶಾಸಕ ಪರಣ್ಣ ಮುನವಳ್ಳಿ ಈ ಸಂದರ್ಭದಲ್ಲಿ ಮಾತನಾಡಿ ಹೇಮಗುಡ್ಡದಲ್ಲಿ ಮಾಜಿ ಸಂಸದ ಎಚ್ ಜಿ ರಾಮುಲು ಅವರ ಕುಟುಂಬದವರು ಕಳೆದ ಮೂವತ್ತು ವರ್ಷಗಳಿಂದ ನಾಡಹಬ್ಬ ದಸರಾವನ್ನು ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದಾರೆ .ಕಳೆದ 2ವರ್ಷಗಳಿಂದ ಕೊರೋನಾ ಮಹಾಮಾರಿಯ ಪರಿಣಾಮ ಇಲ್ಲಿ ಸರಳವಾಗಿ ಆಚರಣೆ ಮಾಡಲಾಗುತ್ತಿದೆ ಆದರೂ ಈ ಬಾರಿ ಆನೆಯ ಮೇಲೆ ಅಂಬಾರಿಯಲ್ಲಿ ದುರ್ಗಾಪರಮೇಶ್ವರಿಯನ್ನು  ಪ್ರತಿಷ್ಠಾಪಿಸಿ ನಾಡಿನ ವಿವಿಧ ಜಾನಪದ ಕಲಾ ತಂಡಗಳು ಸಾಂಸ್ಕೃತಿಕ ಅನಾವರಣ ಮಾಡುವ ಮೂಲಕ ಮೆರವಣಿಗೆ ಜರುಗುತ್ತದೆ ಆದ್ದರಿಂದ ನಾಡಹಬ್ಬ ಎಲ್ಲರಿಗೂ ಒಳಿತನ್ನು ಮಾಡಲಿ ಎಂದರು .

ದಸರಾ 9ದಿನಗಳ ಕಾಲ ಹೇಮಗುಡ್ಡದಲ್ಲಿ ದೇವಿಯ ಪ್ರವಚನ ನಿತ್ಯವೂ ತ್ರಿಕಾಲ ಪೂಜೆ ಅನ್ನಸಂತರ್ಪಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ದಸರಾವನ್ನು ಆಚರಣೆ ಮಾಡಲಾಗುತ್ತದೆ . 9 ದಿನಗಳ ಕಾಲ ಮಾಜಿ ಸಂಸದ ಎಚ್. ಜಿ. ರಾಮುಲು ಹಾಗೂ ಎಚ್. ಆರ್. ಶ್ರೀನಾಥ್ ಕುಟುಂಬದವರು ಹೇಮಗುಡ್ಡದಲ್ಲಿ ಮೊಕ್ಕಾಂ ಹೂಡಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾರೆ. ಕೊರೋನಾ ಇದ್ದ ಪ್ರಯುಕ್ತ ಕಳೆದ ವರ್ಷ ಮತ್ತು ಈ ಬಾರಿ ಉಚಿತ ಸಾಮೂಹಿಕ ವಿವಾಹಗಳು ನೆರವೇರಿಸಲಾಗಲಿಲ್ಲ .

ಆನೆ ಮೇಲೆ ಅಂಬಾರಿ ಮೆರವಣಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಶಾಸಕರಾದ ಪರಣ್ಣ ಮುನವಳ್ಳಿ,  ಮಾಜಿ ಎಂಎಲ್ಸಿ ಎಚ್. ಆರ್ .ಶ್ರೀನಾಥ್ ಮುಖಂಡರಾದ ಸಿದ್ದಪ್ಪ ನೀರಲೂಟಿ ,ಇಲಿಯಾಸ್ ಬಾಬಾ, ಜೋಗದ ಹನುಮಂತಪ್ಪ ,ಕೆಲೋಜಿ ಸಂತೋಷ್ ,ರೆಡ್ಡಿ ಶ್ರೀನಿವಾಸ್ ,ಬಿ. ಕೃಷ್ಣಪ್ಪ ನಾಯಕ್ ,ಎಚ್ ಆರ್ ಭರತ್ ,ಅಯೂಬ್ ಖಾನ್  ಸೇರಿ ಹೇಮಗುಡ್ಡ, ಚಿಕ್ಕಬೆಣಕಲ್, ಎಚ್ ಆರ್ ಜಿ ನಗರ, ಮುಕ್ಕುಂಪಿ ಸೇರಿದಂತೆ ತಾಲ್ಲೂಕಿನ ಮತ್ತು ಜಿಲ್ಲೆಯ ವಿವಿಧ ಗ್ರಾಮಗಳ ಗ್ರಾಮಸ್ಥರು ನಾಡಹಬ್ಬ ದಸರಾದಲ್ಲಿ ಪಾಲ್ಗೊಂಡಿದ್ದರು .

ಟಾಪ್ ನ್ಯೂಸ್

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.