ನಿಷೇಧಾಜ್ಞೆ ಹೇರಿದರೆ ಇಬ್ಬರೇ ನಡೆಯುತ್ತೇವೆ: ಡಿಕೆಶಿ ತಿರುಗೇಟು
ಮೂರು ಮೂರು ಜನರ ತಂಡ, ಸಾಮಾಜಿಕ ಅಂತರದೊಂದಿಗೆ ಪಾದಯಾತ್ರೆ?
Team Udayavani, Jan 5, 2022, 7:09 PM IST
ಬೆಂಗಳೂರು : ಕೋವಿಡ್ ನಿರ್ಬಂಧ ನೆಪದಲ್ಲಿ ಮೇಕೆದಾಟು ಪಾದಯಾತ್ರೆ ವಿರುದ್ಧ ನಿರ್ಬಂಧ ಹೇರಿದರೆ ನಾನು ಸಿದ್ದರಾಮಯ್ಯ ಇಬ್ಬರೇ ನಡೆಯುತ್ತೇವೆ, ಆದರೆ ಪಾದಯಾತ್ರೆ ನಿಲ್ಲಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬುಧವಾರ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸರಕಾರ ಬೇಕಾದರೆ ನಮ್ಮ ಮೇಲೆ ಪ್ರಕರಣ ದಾಖಲಿಸಲಿ, ಬಂಧಿಸಲಿ ನಾವೇನು ಅಂಜುವುದಿಲ್ಲ. ನಿಷೇಧಾಜ್ಞೆ ಹೇರಿದರೆ ನಾನು, ಸಿದ್ದರಾಮಯ್ಯ, ರಾಮಲಿಂಗಾ ರೆಡ್ಡಿ, ಧ್ರುವನಾರಾಯಣ ಸೇರಿ ಮೂರ್ನಾಲ್ಕು ಜನ ನಡೆಯುತ್ತೇವೆ. ಆದರೆ ನಮ್ಮ ಉದ್ದೇಶವನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮೂಲಗಳ ಪ್ರಕಾರ ಮೂರು ಮೂರು ಜನರ ತಂಡವನ್ನು ಸಾಮಾಜಿಕ ಅಂತರದೊಂದಿಗೆ ಪಾದಯಾತ್ರೆಗೆ ಸಿದ್ದಪಡಿಸಲಾಗಿದೆ. ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆ ತಡೆಯುವುದಕ್ಕೆ ಏನೇ ಪ್ರಯತ್ನ ನಡೆಸಿದರೂ ಜಗ್ಗದಿರಲು ಕಾಂಗ್ರೆಸ್ ನಿರ್ಧರಿಸಿದೆ.
ಕುಮಾರಸ್ವಾಮಿಗೆ ವ್ಯಂಗ್ಯ
ಮಾಜಿ ಸಿಎಂ ಕುಮಾರಸ್ವಾಮಿಯವರಿಗೂ ಇದೇ ಸಂದರ್ಭದಲ್ಲಿ ತಿರುಗೇಟು ನೀಡಿದ ಶಿವಕುಮಾರ್ ” ಕುಮಾರಣ್ಣ ದೊಡ್ಡ ಮೇಧಾವಿ. ಅವರಿಗೆ ನಾನು ಉತ್ತರಿಸಲು ಸಾಧ್ಯವಿಲ್ಲ. ಆದರೆ ಮೇಕೆದಾಟು ವಿಚಾರಕ್ಜೆ ಸಂಬಂಧಪಟ್ಟಂತೆ ನಾನು ಎಷ್ಟು ಬಾರಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿದ್ದೇನೆ, ಪತ್ರ ಬರೆದಿದ್ದೇನೆ, ತಮಿಳುನಾಡಿಗೆ ಎಷ್ಟು ಬಾರಿ ಪತ್ರ ಬರೆದಿದ್ದೇನೆ ಎಂಬ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಶಿವಮೊಗ್ಗ: ಸಾವರ್ಕರ್ – ಟಿಪ್ಪು ಫೋಟೋ ವಿವಾದದ ಬೆನ್ನಲ್ಲೇ ಯುವಕರಿಬ್ಬರಿಗೆ ಚೂರಿ ಇರಿತ
ಶಿವಮೊಗ್ಗ: ಸಾವರ್ಕರ್ –ಟಿಪ್ಪು ಫೋಟೋ ವಿಚಾರ: ಗುಂಪುಗಳ ನಡುವೆ ಹೊಡೆದಾಟ,144 ಸೆಕ್ಷನ್ ಜಾರಿ
ಬಿಜೆಪಿಯ ಸಂಕುಚಿತ ಮನೋಭಾವವೇ ದೇಶ ವಿಭಜನೆಗೆ ಕಾರಣ: ಕುಮಾರಸ್ವಾಮಿ
ಹಣ ಕೊಡದ ಲಾರಿ ಚಾಲಕನನ್ನು ಬಂದೂಕಿನಿಂದ ಸುಡುತ್ತೇನೆಂದ ಅರಣ್ಯ ಇಲಾಖೆ ನೌಕರ : ವಿಡಿಯೋ ವೈರಲ್
ಒಂದು ಲಕ್ಷ ಜನ, ಒಂದು ಲಕ್ಷ ರಾಷ್ಟ್ರಧ್ವಜಗಳೊಂದಿಗೆ ಕಾಂಗ್ರೆಸ್ ಫ್ರೀಡಂ ಮಾರ್ಚ್ ಶುರು