ಸ್ಪೇನ್ಗೆ ಸೋತ ಭಾರತ
Team Udayavani, Jul 27, 2023, 12:03 AM IST
ಟೆರ್ರಾಸ್ಸ (ಸ್ಪೇನ್): ಆಕ್ರಮಣಕಾರಿ ಆಟದ ಹೊರತಾಗಿಯೂ ಆತಿಥೇಯ ಸ್ಪೇನ್ ಎದುರಿನ ಹಾಕಿ ಪಂದ್ಯದಲ್ಲಿ ಭಾರತ 1-2 ಅಂತರದ ಸೋಲನುಭವಿಸಿದೆ. ಸ್ಪೇನ್ ಹಾಕಿ ಫೆಡರೇಶನ್ ಶತಮಾನೋತ್ಸವ ಅಂಗವಾಗಿ ಈ ಸರಣಿ ನಡೆಯುತ್ತಿದೆ.
ಪೌಲ್ ಕ್ಯುನಿಲ್ 11ನೇ ನಿಮಿಷದಲ್ಲೇ ಗೋಲು ಬಾರಿಸಿ ಸ್ಪೇನ್ಗೆ ಮುನ್ನಡೆ ಒದಗಿಸಿದರು. ಜೋಕ್ವಿನ್ ಮೆನಿನಿ 33ನೇ ನಿಮಿಷದಲ್ಲಿ 2ನೇ ಗೋಲು ಹೊಡೆದರು. 2 ಗೋಲುಗಳ ಹಿನ್ನಡೆಯ ಬಳಿಕವೂ ಸ್ಪೇನ್ ಮೇಲೆ ಭಾರತ ಒತ್ತಡ ಹೇರುತ್ತ ಹೋಯಿತು. ಈ ಅವಧಿಯಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್ ಅವಕಾಶವೊಂದನ್ನು ವ್ಯರ್ಥಗೊಳಿಸಿತು. ಕೊನೆಗೂ ಪಂದ್ಯದ ಮುಕ್ತಾಯಕ್ಕೆ ಒಂದು ನಿಮಿಷ ಉಳಿದಿರುವಾಗ ನಾಯಕ ಹರ್ಮನ್ಪ್ರೀತ್ ಸಿಂಗ್ ಗೋಲೊಂದನ್ನು ಬಾರಿಸಲು ಯಶಸ್ವಿಯಾದರು.
ಭಾರತದ ಮುಂದಿನ ಎದುರಾಳಿ ನೆದರ್ಲೆಂಡ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ