ಕೆಪಿಪಿಸಿ ನಕಲಿ ವೆಬ್ ಸೈಟ್ ಮಾಡಿ ಅಪಪ್ರಚಾರ; ಪೊಲೀಸ್ ಆಯುಕ್ತರಿಗೆ ದೂರು
Team Udayavani, Feb 4, 2023, 6:15 PM IST
ಬೆಂಗಳೂರು: ಕೆಪಿಪಿಸಿ ನಕಲಿ ವೆಬ್ ಸೈಟ್ ಸೃಷ್ಟಿಸಿ ಅಪಪ್ರಚಾರ ಮಾಡಲಾಗಿದ್ದು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.
ನಕಲಿ ವೆಬ್ ಸೈಟ್ ನಲ್ಲಿ ಕಾಂಗ್ರೆಸ್ ನಾಯಕರ ಫೋಟೋಗಳನ್ನು ಬಳಸಿ ವಿವಿಧ ತಲೆ ಬರಹಗಳನ್ನು ನೀಡಿ ಕಾಂಗ್ರೆಸ್ ಪಕ್ಷವನ್ನು ವಾಚಾಮಗೋಚರವಾಗಿ ಟೀಕಿಸಲಾಗಿತ್ತು. 2013 ರಿಂದ 2018 ರ ವರೆಗಿನ ಕಾಂಗ್ರೆಸ್ ಅಧಿಕಾರಾವಧಿಯ ಸಾಧನೆಗಳು, ಜನಪ್ರಿಯ ಹಗರಣಗಳು, ಪ್ರಮುಖ ಅಪರಾಧಗಳು, ಕೋಮುಗಲಭೆಗಳು, ಅಂಗಸಂಸ್ಥೆಗಳು, ತುಕ್ಡೇ ತುಕ್ಡೇ ಗ್ಯಾಂಗ್, ಅರ್ಬನ್ ನಕ್ಸಲರು, ದೇಶ ವಿರೋಧಿಗಳು ಎಂದು ಬರೆಯಲಾಗಿತ್ತು.
ಹೇಡಿಗಳ ಕೊನೆಯ ಅಸ್ತ್ರ ಅಪಪ್ರಚಾರ, ಕುಯುಕ್ತಿ ಎನ್ನುವ ಮಾತಿದೆ,ಅದರಂತೆಯೇ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಹೆಸರಿನ ನಕಲಿ ಪತ್ರ ಹಾಗೂ ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಸೃಷ್ಟಿಸಿ ತೇಜೋವಧೆ ಮಾಡಿದವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರಿಗೆ ದೂರು ಸಲ್ಲಿಸಲಾಗಿದೆ” ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಸ್ಸಾಂನಲ್ಲಿ ಈಗಾಗಲೇ 600 ಮದರಸಾ ಮುಚ್ಚಲಾಗಿದೆ…ಇನ್ನೂ ಕೂಡಾ…ಸಿಎಂ ಬಿಸ್ವಾ
ರಾಹುಲ್ ವಿವಾದದ ನಡುವೆ ಆಕ್ಸ್ ಫರ್ಡ್ ನಲ್ಲಿ ಮಾತನಾಡಲು ನಿರಾಕರಿಸಿದ ವರುಣ್ ಗಾಂಧಿ
ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಕಾಂಗ್ರೆಸ್ ಕ್ಷಮೆಯಾಚಿಸಿದೆಯೇ? ರಾಹುಲ್ ಗೆ RSS ತಿರುಗೇಟು
Karnataka ಚುನಾವಣೆಗೆ ಸಿದ್ಧತೆ; ಈ ಬಾರಿ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ
ಬಿಜೆಪಿಗೆ ನನ್ನ ಬೆಂಬಲ; ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು?HDK ವಿರುದ್ಧ ಸುಮಲತಾ ಕಿಡಿ