KSRTC ಟಿಕೆಟ್‌ ಪರೀಕ್ಷಕರಿಗೆ ಬಾಡಿ ಕೆಮರಾ ! ಮಂಗಳೂರು, ಪುತ್ತೂರು ವಿಭಾಗಕ್ಕೂ ವಿಸ್ತರಣೆ


Team Udayavani, Mar 8, 2021, 5:50 AM IST

KSRTC ಟಿಕೆಟ್‌ ಪರೀಕ್ಷಕರಿಗೆ ಬಾಡಿ ಕೆಮರಾ ! ಮಂಗಳೂರು, ಪುತ್ತೂರು ವಿಭಾಗಕ್ಕೂ ವಿಸ್ತರಣೆ

ಮಹಾನಗರ: ಬಸ್‌ಗಳಲ್ಲಿ ಟಿಕೆಟ್‌ ನೀಡುವ ವಿಚಾರದಲ್ಲಿ ಆಗಾಗ ಉಂಟಾಗುವ ಗೊಂದಲವನ್ನು ಸರಿಪಡಿಸಿ ಪಾರದರ್ಶಕ ಸ್ಥಿತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಟಿಕೆಟ್‌ ಪರೀಕ್ಷಕರಿಗೆ (ಟಿಕೆಟ್‌ ಚೆಕ್ಕಿಂಗ್‌ ಮಾಡುವವರು) ಬಾಡಿ ಕೆಮರಾ ಅಳವಡಿಸಲು ಕೆಎಸ್ಸಾರ್ಟಿಸಿ ಮುಂದಾಗಿದೆ. ಇದೀಗ ಈ ನೂತನ ಯೋಜನೆ ಮಂಗಳೂರು ಮತ್ತು ಪುತ್ತೂರು ವಿಭಾಗಕ್ಕೂ ವಿಸ್ತರಣೆಗೊಂಡಿದೆ.

ಟಿಕೆಟ್‌ ನೀಡುವ ವಿಚಾರದಲ್ಲಿ ಕೆಲವರಲ್ಲಿ ಗೊಂದಲವಿತ್ತು. ಇದು ಕೆಲವು ಬಾರಿ ವಾಗ್ವಾದಕ್ಕೂ ಕಾರಣವಾಗುತ್ತಿತ್ತು. ಟಿಕೆಟ್‌ ಪರಿಶೀಲಿಸುವವರು ಸರಿ ಯಾಗಿ ತಪಾಸಣೆ ನಡೆಸುತ್ತಿಲ್ಲ,ವಿನಾ ಕಾರಣ ನಿರ್ವಾಹಕರ ವಿರುದ್ಧ ದೂರು ದಾಖಲಾಗುತ್ತದೆ. ನಿರ್ವಾಹಕರು ಪ್ರಯಾಣಿಕರಿಗೆ ಕೆಲವು ಸಂದರ್ಭದಲ್ಲಿ ಟಿಕೆಟ್‌ ನೀಡುವುದಿಲ್ಲ ಇತ್ಯಾದಿ ಆರೋ ಪಗಳು ಬರುತ್ತಿತ್ತು. ಇದು ಕೆಎಸ್ಸಾರ್ಟಿಸಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಇದನ್ನು ಹೋಗಲಾಡಿಸಲು ಇದೀಗ ನಿಗಮ ಹೊಸ ತಂತ್ರವನ್ನು ಅಳವಡಿಸುತ್ತಿದೆ.

ನಿರ್ವಾಹಕರು ಮತ್ತು ಪ್ರಯಾ ಣಿಕರೊಂದಿಗೆ ಪಾರದರ್ಶಕ ಸ್ಥಿತಿ ಕಾಪಾಡಿ ಕೊಳ್ಳುವ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಟಿಕೆಟ್‌ ಚೆಕ್ಕಿಂಗ್‌ ಮಾಡುವವರು ಇನ್ನು ಮುಂದೆ ಬಾಡಿ ಕೆಮರಾ ಅಳವಡಿಸಬೇಕಾಗುತ್ತದೆ. ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ವ್ಯಾಪ್ತಿಯಲ್ಲಿ ಒಟ್ಟು 10 ಮಂದಿ ಟಿಕೆಟ್‌ ಪರೀಕ್ಷಕರಿದ್ದಾರೆ. ಅವರಿಗೆ ಬಾಡಿ ಕೆಮರಾಗಳು ಈಗಾಗಲೇ ಮಂಜೂರಾಗಿದ್ದು, ತಾಂತ್ರಿಕ ಸಮಸ್ಯೆ ಯಿಂದ 2 ಬಾಡಿ ಕೆಮರಾಗಳು ಕಾರ್ಯ ನಿರ್ವಹಿಸುತ್ತಿದೆ. ಪುತ್ತೂರು ವಿಭಾಗದಲ್ಲಿ 5 ಮಂದಿಗೆ ಬಾಡಿ ಕೆಮರಾ ನೀಡಲಾಗಿದೆ.

ಅಳವಡಿಕೆ ಹೇಗೆ?
ಟಿಕೆಟ್‌ ಪರೀಕ್ಷಕರಿಗೆ ಬಸ್‌ಗಳಲ್ಲಿ ಟಿಕೆಟ್‌ ತಪಾಸಣೆ ಮಾಡುವಾಗ ತಮ್ಮ ಅಂಗಿಯ ಜೇಬಿಗೆ ಬಾಡಿ ಕೆಮರಾ ವನ್ನು ಅಳವಡಿಸಲಾಗುತ್ತದೆ. ಟಿಕೆಟ್‌ ತಪಾಸಣೆ ಮಾಡಿದ ಬಳಿಕ ಬಸ್‌ನಿಂದ ಇಳಿದಾಗ ಆ ಕೆಮರಾವನ್ನು ಆಫ್‌ ಮಾಡಲಾಗುತ್ತದೆ. ಅವರು ಬಸ್‌ನೊಳಗೆ ತಪಾಸಣೆ ನಡೆಸಿದ ಎಲ್ಲ ವಿಚಾರಗಳು ಆ ಕೆಮರಾದಲ್ಲಿ ರೆಕಾರ್ಡ್‌ ಆಗುತ್ತದೆ. ಅಧಿಕಾರಿಗಳು ಹೇಳುವಂತೆ ಸುಮಾರು ಒಂದು ತಿಂಗಳವರೆಗೆ ಈ ರೆಕಾರ್ಡ್‌ ಅನ್ನು ಸ್ಟೋರೇಜ್‌ ಮಾಡಲಾಗುತ್ತದೆ. ಟಿಕೆಟ್‌ ತಪಾಸಣೆಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ಮೇಲಧಿಕಾರಿಗಳು ಈ ರೆಕಾರ್ಡ್‌ ಅನ್ನು ಪರಿಶೀಲನೆ ಮಾಡುತ್ತಾರೆ.

ಬಿಎಂಟಿಸಿ ಯಲ್ಲಿ ಮೊದಲ ಪ್ರಯೋಗ
ಟಿಕೆಟ್‌ ತಪಾಸಣ ಅಧಿಕಾರಿಗಳಿಗೆ ಬಾಡಿ ಕೆಮರಾಗಳನ್ನುಈ ಹಿಂದೆಯೇ ಬಿಎಂಟಿಸಿಯಲ್ಲಿ ಅಳವಡಿಸಲಾಗಿದೆ. ಮಾರ್ಗ ತಪಾಸಣೆ ವೇಳೆ ಅಧಿಕಾರಿಗಳು, ನಿರ್ವಾಹಕರ ನಡುವೆ ವಾಗ್ವಾದಗಳು, ಜಗಳಗಳು ನಡೆಯುತ್ತಿತ್ತು. ಇದನ್ನು ಕೊನೆಗಾಣಿಸುವ ಉದ್ದೇಶದಿಂದ ತಪಾಸಣೆ ಅಧಿಕಾರಿಗಳಿಗೆ ಬಾಡಿ ಕೆಮರಾ ನೀಡಲು ನಿರ್ಧರಿಸಲಾಗಿತ್ತು. ಮೊದಲ ಹಂತದಲ್ಲಿ ಸುಮಾರು 80 ಬಾಡಿ ಕೆಮರಾ ಖರೀದಿಸಲು ನಿರ್ಧರಿಸಲಾಗಿತ್ತು. ಬಳಿಕ ಈಗಾಗಲೇ ಕೆಎಸ್ಸಾರ್ಟಿಸಿ, ಈಶಾನ್ಯ, ವಾಯವ್ಯ, ಕರ್ನಾಟಕ ಸಾರಿಗೆಯಲ್ಲಿಯೂ ಅಳವಡಿಸಲಾಗುತ್ತಿದೆ.

ಪೂರ್ಣಮಟ್ಟದಲ್ಲಿ ಅಳವಡಿಕೆ
ಟಿಕೆಟ್‌ ತಪಾಸಣೆಯ ವೇಳೆ ಪಾರದರ್ಶ ಕತೆ ಕಾಪಾಡುವ ಉದ್ದೇಶದಿಂದ ಈಗಾಗಲೇ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗಕ್ಕೆ 10 ಬಾಡಿ ಕೆಮರಾಗಳು ಬಂದಿವೆ. ಅದರಲ್ಲಿ ಸದ್ಯ 2 ಕೆಮರಾಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಸದ್ಯದಲ್ಲಿಯೇ ಪೂರ್ಣಮಟ್ಟದಲ್ಲಿ ಈ ಉಪಕ್ರಮ ಅಳವಡಿಸಲಾಗುತ್ತದೆ.
– ಕಮಲ್‌ ಕುಮಾರ್‌, ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.