Fraud: ಪಾರ್ಟ್ ಟೈಂ ಕೆಲಸದ ಆಮಿಷ: ವಂಚನೆ
Team Udayavani, Jun 23, 2023, 5:35 AM IST
ಮಂಗಳೂರು: ಇನ್ಸ್ಟಾಗ್ರಾಮ್ ಖಾತೆಗೆ ಪಾರ್ಟ್ ಟೈಮ್ ಉದ್ಯೋಗ ಬಗ್ಗೆ ಬಂದ ಸಂದೇಶವನ್ನು ನಂಬಿ ಖಾತೆಯಿಂದ 1,73,190 ರೂ. ಕಳೆದುಕೊಂಡಿರುವ ಕುರಿತಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರ ಹೆಂಡತಿಯ ಇನ್ಸ್ಟಾಗ್ರಾಮ್ ಖಾತೆಗೆ ಸಂದೇಶ ಬಂದಿದ್ದು, ಈ ಬಗ್ಗೆ ವಿಚಾರಿಸಿದಾಗ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ನಂಬರ್ ನೀಡಿ ವಾಟ್ಸ್ ಆ್ಯಪ್ ಮೂಲಕ ಮೆಸೇಜ್ ಮಾಡುವಂತೆ ತಿಳಿಸಿದ್ದಾನೆ. ಮೆಸೇಜ್ ಮಾಡಿದಾಗ ಟೆಲಿಗ್ರಾಂ ಆ್ಯಪ್ ಲಿಂಕ್ ಕಳುಹಿಸಿ ಅದರಲ್ಲಿ ನೋಂದಣಿ, ತಾನು ಕಳುಹಿಸುವ ಐಡಿಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾನೆ. ಟೆಲಿಗ್ರಾಂ ಖಾತೆದಾರನನ್ನು ಸಂಪರ್ಕಿಸಿದಾಗ ವಿಜಿಎಲ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ಅದರಲ್ಲಿ ಲಾಗಿನ್ ಬ್ಯಾಂಕ್ ಖಾತೆಯಿಂದ 500 ರೂ. ಪಾವತಿಸುವಂತೆ ಹೇಳಿ ಅದಕ್ಕೆ 850 ರೂ. ಮರು ಪಾವತಿ ಮಾಡಿದ್ದಾನೆ.
ಹೀಗೆ ಬೇರೆ ಬೇರೆ ಟಾಸ್ಕ್ ಪೂರ್ಣಗೊಳಿಸಿದರೆ ಹೆಚ್ಚು ಲಾಭ ನೀಡುವುದಾಗಿ ಆಮಿಷ ತೋರಿಸಿ ಹಂತ ಹಂತವಾಗಿ ಒಟ್ಟು 1,73,190 ರೂ. ವರ್ಗಾಯಿಸಿಕೊಂಡು ಮರುಪಾವತಿ ಮಾಡದೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ