ಮಂಗಳೂರಿನಿಂದ ಹೊರಟ ಬಸ್‌ನಲ್ಲಿ ಹೆಬ್ಬಾವು !
Team Udayavani, Jun 3, 2020, 9:30 PM IST
ಸಾಂದರ್ಭಿಕ ಚಿತ್ರ
ಮಂಗಳೂರು: ಮಂಗಳೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಬೆಂಗಳೂರಿಗೆ ಹೊರಟ ಬಸ್ ಸಂಜೆ ತಲುಪಿದಾಗ ಬಸ್‌ನೊಳಗೆ ಹೆಬ್ಬಾವು ಕಾಣಿಸಿಕೊಂಡು ಅಚ್ಚರಿಗೆ ಕಾರಣವಾಗಿದೆ.
ಮಂಗಳವಾರ ಬೆಳಗ್ಗೆ 5ಕ್ಕೆ ಮಂಗಳೂರು ಬಸ್ ನಿಲ್ದಾಣದಿಂದ ಹೊರಟ ಬಸ್ ಸಂಜೆ ಬೆಂಗಳೂರು ತಲುಪಿತ್ತು. ಟ್ರಿಪ್ ಮುಗಿದ ಬಳಿಕ ರಾತ್ರಿ ವೇಳೆ ಬಸ್ ಸ್ಯಾನಿಟೈಸ್ ಮಾಡಲಾಗಿದ್ದು, ಈ ವೇಳೆ ಬಸ್‌ನ ಮೀಟರ್ ಬಾಕ್ಸ್ ಬಳಿಯಿಂದ ಹೆಬ್ಬಾವು ಹೊರಬಂದಿದೆ. ಇದರಿಂದಾಗಿ ಸಿಬಂದಿ ಗಾಬರಿಗೊಂಡಿದ್ದಾರೆ. ಬಳಿಕ ಹಾವನ್ನು ರಕ್ಷಿಸಲಾಗಿದೆ.
ಈ ಬಗ್ಗೆ ಮಂಗಳೂರು ಕೆಎಸ್ಸಾರ್ಟಿಸಿ ಅಧಿಕಾರಿಗಳು ಪ್ರತಿಕ್ರಿಯಿಸಿ “ಬಸ್‌ನಲ್ಲಿ ಪ್ರಯಾಣಿಕರ ಜತೆ ಹೆಬ್ಬಾವು ಹೋಗಿರಲು ಸಾಧ್ಯವಿಲ್ಲ. ಸಂಜೆ ಬಸ್ ಬೆಂಗಳೂರು ತಲುಪಿದ ಬಳಿಕ ರಾತ್ರಿ ವೇಳೆ ಸ್ಯಾನಿಟೈಜ್ ಮಾಡಲಾಗಿದೆ. ಆ ವೇಳೆ ಅಲ್ಲಿಂದಲೇ ಹೆಬ್ಬಾವು ಬಸ್ ಹತ್ತಿರಬಹುದು’ ಎಂದು ತಿಳಿಸಿದ್ದಾರೆ.