ಮೂಡುಬಿದ್ರೆ ಶಾಂಭವಿ ನದಿಯಲ್ಲಿ ನಾಲ್ವರು ಮುಳುಗಿದ ಪ್ರಕರಣ : ಇಬ್ಬರ ಮೃತದೇಹ ಪತ್ತೆ
Team Udayavani, Nov 24, 2020, 7:33 PM IST
ಮೂಡುಬಿದ್ರೆ : ಕಡಂದಲೆ ಶಾಂಭವಿ ನದಿಯಲ್ಲಿ ಈಜಲು ಹೋದ ನಾಲ್ವರು ನದಿಯಲ್ಲಿ ಮುಳುಗಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ವಾಮಂಜೂರು ಮೂಡುಶೆಡ್ಡೆಯ ನಿಖಿಲ್ (18) ಹಾಗೂ ಅರ್ಶಿತಾ( 20) ಅವರ ಮೃತ ದೇಹ ಪತ್ತೆಯಾಗಿದ್ದು.
ನಾಪತ್ತೆಯಾದ ವೇಣೂರಿನ ಸುಬಾಸ್(19), ಬಜ್ಪೆ ಪೆರಾರದ ರವಿ (30)ಇಬ್ಬರ ದೇಹದ ಪತ್ತೆಯಾಗಬೇಕಿದ್ದು ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ನಾಪತ್ತೆಯಾದ ದೇಹದ ಹುಡುಕಾಟ ನಡೆಸುತ್ತಿದ್ದಾರೆ.
ಘಟನೆ ವಿವರ : ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಗೆ ಮದುವೆ ಸಮಾರಂಭಕ್ಕೆ ಬಂದಿದ್ದ ಮೂವರು ಯುವಕರು ಹಾಗೂ ಯುವತಿ ಮನೆಯ ಸಮೀಪದ ತುಲೆಮುಗೇರ್ ಎಂಬಲ್ಲಿ ಶಾಂಭವಿ ನದಿಯಲ್ಲಿ ಈಜಲು ಹೋದಾಗ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಮೂಡುಬಿದಿರೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಮತ್ತು ಸ್ಥಳೀಯರು ಸೇರಿ ನದಿಯಲ್ಲಿ ಮುಳುಗಿದವರ ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ ಆದರೆ ದೇಹಗಳು ನದಿಯಲ್ಲಿ ಮುಳುಗಿದ್ದ ಪರಿಣಾಮ ರಕ್ಷಣಾ ಕಾರ್ಯ ಕಷ್ಟ ಸಾಧ್ಯವಾಗಿತ್ತು, ಅಗ್ನಿಶಾಮಕ ಸಿಬ್ಬಂಧಿಗಳು ಹಾಗೂ ಸ್ಥಳೀಯರ ನೆರವಿನಿಂದ ಇಬ್ಬರ ಮೃತ ದೇಹಗಳು ಸಿಕ್ಕಿದ್ದು ಇನ್ನು ಇಬ್ಬರ ದೇಹದ ಪತ್ತೆಗಾಗಿ ರಕ್ಷಣಾ ತಂಡ ಕಾರ್ಯ ನಿರ್ವಹಿಸುತ್ತಿದೆ.
ಇದನ್ನೂ ಓದಿ :ಮೂಡುಬಿದಿರೆ: ಮದುವೆ ಸಮಾರಂಭಕ್ಕೆ ಬಂದ ನಾಲ್ವರು ಶಾಂಭವಿ ನದಿಯಲ್ಲಿ ಮುಳುಗಿ ಸಾವು
ಪೊಲೀಸ್ ಕಮೀಷನರ್ ವಿಕಾಸ್ ಕುಮಾರ್ ಎಸಿಪಿ ಬೆಳ್ಳಿಯಪ್ಪ ಹಾಗೂ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್ ಬಿ.ಎಸ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಬೇಡ; ಬಿಬಿಎಂಪಿ ಆಯುಕ್ತ
ಜೆಡಿಎಸ್ ನ ಹೊರಟ್ಟಿಗೆ ಸಭಾಪತಿ ಸ್ಥಾನ : ಬಿಜೆಪಿಯ ಪ್ರಾಣೇಶ್ ಉಪ ಸಭಾಪತಿ
ಬೇಬಿಬೆಟ್ಟದ ಸುತ್ತ ಮಾರ್ಚ್ 24ರವರೆಗೆ ಎಲ್ಲ ರೀತಿಯ ಗಣಿಗಾರಿಕೆ ನಿಷೇಧ
ರಾಜ್ಯದ ಎಲ್ಲ ಅಂಗಡಿಗಳ ನಾಮಫಲಕ ಕನ್ನಡದಲ್ಲೇ ಇರಬೇಕು : ನಾಗಾಭರಣ
ರಾಜ್ಯದ ಒಂದಿಂಚು ಜಾಗವನ್ನೂ ಬಿಡೆವು, ನಮ್ಮನ್ನು ಕೆಣಕಿದರೆ ಪರಿಣಾಮ ನೆಟ್ಟಗಿರಲ್ಲ :ನಾರಾಯಣಗೌಡ