ನಮ್ಮ ಮೆಟ್ರೋ ಲಕ್ಷದ ಗಡಿ ದಾಟಿದ ಪ್ರಯಾಣಿಕರ ಸಂಖ್ಯೆ
Team Udayavani, Dec 12, 2020, 8:18 AM IST
ಬೆಂಗಳೂರು: ಕೊರೊನಾ ಮತ್ತು ಜಾರಿಯಾದ ಸುದೀರ್ಘ ಲಾಕ್‌ಡೌನ್ ನಂತರ ಮೊದಲ ಬಾರಿಗೆ “ನಮ್ಮ ಮೆಟ್ರೋ’ ಪ್ರಯಾಣಿಕರ ಸಂಖ್ಯೆ ಲಕ್ಷದ ಗಡಿ ದಾಟಿದೆ. ಕಳೆದ ಒಂದು ತಿಂಗಳಿಂದ ಪ್ರಯಾಣಿಕರ ಸಂಖ್ಯೆ 70-80 ಸಾವಿರದ ಆಸುಪಾಸು ಇತ್ತು. ಬುಧವಾರ ಮತ್ತು ಗುರುವಾರಈಸಂಖ್ಯೆ ಒಂದು ಲಕ್ಷ ದಾಟಿದ್ದು, ಇದರೊಂದಿಗೆ ಆದಾಯ ಕೂಡ ಗಣನೀಯವಾಗಿ ಏರಿಕೆ ಕಂಡು
ಬಂದಿದೆ. ಇದು ಸಹಜವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್)ದಲ್ಲಿ ಸಂತಸ ಮೂಡಿಸಿದೆ.
ಲಾಕ್‌ಡೌನ್ ನಂತರ ಸೆ. 7ರಂದು ನೇರಳೆ ಮಾರ್ಗದಲ್ಲಿ ಸೀಮಿತ ಅವಧಿಯಲ್ಲಿ ಮೆಟ್ರೋ ಪುನಾರಂಭಗೊಂಡಿತ್ತು. ಅಂದು ಕೇವಲ 3,770 ಜನ ಪ್ರಯಾಣಿಸಿದ್ದರು. ಇದರಿಂದ ಬಂದ ಆದಾಯವು ಕಾರ್ಯಾಚರಣೆಗೆ ಖರ್ಚಾದ ವಿದ್ಯುತ್ ದರಕ್ಕಿಂತ ಅರ್ಧದಷ್ಟೂ ಅಂದರೆ 3,770 ರೂ.ಬಂದಿತ್ತು.ಎರಡನೇಹಂತದಲ್ಲಿ ಸೆ.9ರಂದು ಹಸಿರು ಮಾರ್ಗ ಹಾಗೂ 11ರಂದು ಪೂರ್ಣ ಪ್ರಮಾಣ
ಸಂಚಾರ ಶುರುವಾಗಿತ್ತು. ಅಲ್ಲಿಂದ ಸರಿಯಾಗಿ ಮೂರು ತಿಂಗಳಲ್ಲಿ “ನಮ್ಮ ಮೆಟ್ರೋ’ ಈ ಸಾಧನೆ ಮಾಡಿದೆ.
ಒಂದೆಡೆ ನಗರದಲ್ಲಿ ಕೊರೊನಾ ಹಾವಳಿ ತಗ್ಗಿದೆ. ಮತ್ತೂಂದೆಡೆ ನಿಧಾನವಾಗಿ ಕೆಲವು ಕಂಪೆನಿಗಳು ಮನೆಯಿಂದ ಕೆಲಸ ಮಾಡುವ ನಿಯಮ ಸಡಿಲಗೊಳಿ ಸುತ್ತಿವೆ. ಇದರೊಂದಿಗೆ ಬಿಎಂಆರ್‌ಸಿಎಲ್‌ನಲ್ಲಿ ಅನುಸ ರಿಸುತ್ತಿರುವ ಕ್ರಮಗಳು ಇವೆಲ್ಲವೂ ಪ್ರಯಾಣಿಕರಲ್ಲಿ ವಿಶ್ವಾಸ ಮೂಡಿಸಿವೆ. ಹಾಗಾಗಿ, ಜನ ಮೆಟ್ರೋದತ್ತ ಮುಖ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಏರಿಕೆಯಾಗುವವಿಶ್ವಾಸಇದೆಎಂದುನಿಗಮದನಿರ್ವಹಣೆ ಮತ್ತು ಕಾರ್ಯಾಚರಣೆ ವಿಭಾಗದ ಅಧಿಕಾರಿಯೊಬ್ಬರು
“ಉದಯವಾಣಿ’ಗೆ ಮಾಹಿತಿ ನೀಡಿದರು.
ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ : ಪ್ರಯಾಣಿಕರ ಪರದಾಟ
50 ರೈಲುಕಾರ್ಯಾಚರಣೆ
ಬಸ್ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಬಿಎಂಆರ್ ಸಿಎಲ್ ಎಲ್ಲ50 ಮೆಟ್ರೋ ರೈಲುಗಳನ್ನುಕಾರ್ಯಾಚರಣೆ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಶುಕ್ರವಾರದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ದಟ್ಟಣೆ ಅವಧಿಯಲ್ಲಿ ಎಲ್ಲ50 ರೈಲುಗಳ ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕರು ಮೆಟ್ರೋ ಕಾರ್ಡ್‌ಗಳನ್ನು ಬಳಸಿ ಪ್ರಯಾಣಿಸಬಹುದು. ಹೊಸಕಾರ್ಡ್‌ಗಳನ್ನು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ನಿಲ್ದಾಣಗಳಲ್ಲಿ ಹಣಪಾವತಿ ಮಾಡಿ, ಆರಂಭಿಕ ಟಾಪ್ ಅಪ್‌ನೊಂದಿಗೆಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಈ ಸೌಲಭ್ಯ ಎಲ್ಲ ನಿಲ್ದಾಣಗಳಲ್ಲೂ ಲಭ್ಯ ಎಂದು
ನಿಗಮದ ಪ್ರಕಟಣೆ ತಿಳಿಸಿದೆ.
ಪ್ರಯಾಣಿಕರ ಸಂಖ್ಯೆ ಏರಿಕೆ
ಈ ಮಧ್ಯೆ ಶುಕ್ರವಾರಕೂಡ ಬಸ್ ಮುಷ್ಕರದಿಂದ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದ್ದು, ರಾತ್ರಿ 9.50ಕ್ಕೆ ಒಂದು ಲಕ್ಷ ತಲುಪಿತ್ತು. ಆದಾಯದ ನಿಖರ ಮಾಹಿತಿ ಲಭ್ಯ ಇರಲಿಲ್ಲ. ಸದ್ಯಕೊನೆಯ ಮೆಟ್ರೋ ರೈಲು ಸೇವೆ ರಾತ್ರಿ9 ಗಂಟೆಗೆ ನಾಲ್ಕೂ ದಿಕ್ಕುಗಳಿಂದ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ
ದತ್ತ ಜಯಂತಿ ಸಮಯದಲ್ಲಿ ಹೋಮದ ಹೊಗೆ.. ಬೇರೆ ಸಮಯದಲ್ಲಿ ಮಾಂಸದ ಹೊಗೆ
ಶಾಲಾ ಪ್ರಾರಂಭೋತ್ಸವ ಹಿರಿಯಡ್ಕ ಸರಕಾರಿ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳಿಗೆ ಸಂಭ್ರಮದ ಸ್ವಾಗತ
ಶಂಕರನಾರಾಯಣ : ಶಾಲಾರಂಭದ ದಿನದಂದೇ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಬಿಸಿ
ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?
ಹೊಸ ಸೇರ್ಪಡೆ
ಕಡಬ:ಬೊಟ್ಟಡ್ಕದಲ್ಲಿ ಆಗಬೇಕಿದೆ ರೈಲ್ವೇ ಅಂಡರ್ಪಾಸ್
ಮಾಜಿ ಕೇಂದ್ರ ಸಚಿವ ಚಿದಂಬರಂ ಆಸ್ತಿ ಮೇಲೆ ಸಿಬಿಐ ದಾಳಿ; ಪುತ್ರನ ವಿರುದ್ಧ ಹೊಸ ಕೇಸ್
‘777 ಚಾರ್ಲಿ’…. ಮನಮುಟ್ಟುವ ಅನುಬಂಧ ಅನಾವರಣ
ಜಮ್ಮು ಕಾಶ್ಮೀರ ಹಿಂಸಾಚಾರಕ್ಕೆ ದಿ ಕಾಶ್ಮೀರ ಫೈಲ್ ಚಿತ್ರವೇ ಕಾರಣ: ಮೆಹಬೂಬಾ ಮುಫ್ತಿ
ಭಾರತ-ನೇಪಾಲ ಸ್ನೇಹ ಹಿಮಾಲಯದಷ್ಟು ಗಾಢ; ಬುದ್ಧನ ನಾಡಿನಲ್ಲಿ ಪ್ರಧಾನಿ ಮೋದಿ ಪ್ರತಿಪಾದನೆ