Udayavni Special

ಐಸಿಸಿ ಎಲೈಟ್‌ ಪ್ಯಾನಲ್‌ಗೆ ನಿತಿನ್‌ ಮೆನನ್‌ ಸೇರ್ಪಡೆ

ಎಲೈಟ್‌ ಪ್ಯಾನಲ್‌ನ ಕಿರಿಯ ತೀರ್ಪುಗಾರ ; ಭಾರತದ ಕೇವಲ ಮೂರನೇ ಅಂಪಾಯರ್‌

Team Udayavani, Jun 30, 2020, 5:45 AM IST

ಐಸಿಸಿ ಎಲೈಟ್‌ ಪ್ಯಾನಲ್‌ಗೆ ನಿತಿನ್‌ ಮೆನನ್‌ ಸೇರ್ಪಡೆ

ದುಬಾೖ: ಭಾರತದ ತೀರ್ಪುಗಾರ ನಿತಿನ್‌ ಮೆನನ್‌ ಸೋಮವಾರ ಐಸಿಸಿ ಅಂಪಾಯರ್‌ಗಳ ಎಲೈಟ್‌ ಪ್ಯಾನಲ್‌ಗೆ ಸೇರ್ಪಡೆಗೊಂಡರು. ಅವರು 2020-21ರ ಋತುವಿನಲ್ಲಿ ಇಂಗ್ಲೆಂಡಿನ ನಿಗೆಲ್‌ ಲಾಂಗ್‌ ಸ್ಥಾನವನ್ನು ತುಂಬಲಿದ್ದಾರೆ.

36 ವರ್ಷದ ನಿತಿನ್‌ ಮೆನನ್‌ ಐಸಿಸಿ ಎಲೈಟ್‌ ಪ್ಯಾನಲ್‌ಗೆ ಸೇರ್ಪಡೆಗೊಂಡ ಅತ್ಯಂತ ಕಿರಿಯ ಅಂಪಾಯರ್‌ ಎಂಬುದು ವಿಶೇಷ. ಅವರು ಈವರೆಗೆ 3 ಟೆಸ್ಟ್‌, 24 ಏಕದಿನ ಮತ್ತು 16 ಟಿ20 ಪಂದ್ಯಗಳಲ್ಲಿ ಕಾರ್ಯ ನಿಭಾಯಿಸಿದ್ದಾರೆ.

ನಿತಿನ್‌ ಮೆನನ್‌ ಎಲೈಟ್‌ ಪ್ಯಾನಲ್‌ನಲ್ಲಿ ಕಾಣಿಸಿಕೊಂಡ ಭಾರತದ ಕೇವಲ 3ನೇ ಅಂಪಾಯರ್‌. ಇದಕ್ಕೂ ಮುನ್ನ ಮಾಜಿ ನಾಯಕ ಎಸ್‌. ವೆಂಕಟರಾಘವನ್‌ ಮತ್ತು ಸುಂದರಂ ರವಿ ಈ ಗೌರವ ಸಂಪಾ ದಿಸಿದ್ದರು. ಕಳೆದ ವರ್ಷ ರವಿ ಅವರನ್ನು ಈ ಪ್ಯಾನಲ್‌ನಿಂದ ಉಚ್ಚಾಟಿಸಲಾಗಿತ್ತು.
“ವಿಶ್ವದ ಖ್ಯಾತ ಅಂಪಾಯರ್ ಮತ್ತು ರೆಫ್ರಿಗಳ ಜತೆ ಕರ್ತವ್ಯ ನಿಭಾಯಿಸುವುದು ನನ್ನ ಕನಸಾಗಿತ್ತು. ಇದಿನ್ನು ನನಸಾಗಲಿದೆ’ ಎಂಬ ನಿತಿನ್‌ ಮೆನನ್‌ ಅವರ ಹೇಳಿಕೆಯನ್ನು ಐಸಿಸಿ ಪ್ರಕಟಿಸಿದೆ.

ಕರ್ತವ್ಯ ವ್ಯಾಪ್ತಿ ವಿಸ್ತಾರ
ಆಯ್ಕೆ ಸಮಿತಿ ಸದಸ್ಯರಾದ ಐಸಿಸಿ ಜನರಲ್‌ ಮ್ಯಾನೇಜರ್‌ ಜೆಫ್ ಅಲ ಡೈìಸ್‌, ವೀಕ್ಷಕ ವಿವರಣಕಾರ ಸಂಜಯ್‌ ಮಾಂಜ್ರೆàಕರ್‌, ಮ್ಯಾಚ್‌ ರೆಫ್ರಿ ರಂಜನ್‌ ಮದುಗಲ್ಲೆ ಮತ್ತು ಡೇವಿಡ್‌ ಬೂನ್‌ ಸೇರಿಕೊಂಡು ನಿತಿನ್‌ ಮೆನನ್‌ ಅವರ ಹೆಸರನ್ನು ಸೂಚಿಸಿದರು. ಇದಕ್ಕೂ ಮುನ್ನ ಮೆನನ್‌ ಎಮಿರೇಟ್ಸ್‌ ಐಸಿಸಿ ಇಂಟರ್‌ನ್ಯಾಶನಲ್‌ ಪ್ಯಾನಲ್‌ನ ಸದಸ್ಯರಾಗಿದ್ದರು.

ಇದೀಗ ಎಲೈಟ್‌ ಪ್ಯಾನಲ್‌ಗೆ ಸೇರ್ಪಡೆ ಯಾದ್ದರಿಂದ ನಿತಿನ್‌ ಮೆನನ್‌ ಅವರ ಕರ್ತವ್ಯ ವ್ಯಾಪ್ತಿ ವಿಸ್ತಾರಗೊಳ್ಳಲಿದೆ. ಮುಂದಿನ ವರ್ಷದ ಆ್ಯಶಸ್‌ ಸರಣಿಯಲ್ಲಿ ಅಂಪಾಯರಿಂಗ್‌ ನಡೆಸುವ ಅವಕಾಶವೂ ಒದಗಿ ಬರಬಹುದು. ಆದರೆ ಕೋವಿಡ್‌- 19 ಕಾರಣ ಐಸಿಸಿ ಸ್ಥಳೀಯ ಅಂಪಾಯರ್‌ಗಳಿಗೆ ಆದ್ಯತೆ ನೀಡಿದರೆ ಈ ಅವಕಾಶ ತಪ್ಪಲಿದೆ.

ಆಟಕ್ಕೆ ಗುಡ್‌ಬೈ
ಆರಂಭದಲ್ಲಿ ಕ್ರಿಕೆಟ್‌ ಆಟಗಾರನಾಗಿದ್ದ ನಿತಿನ್‌ ಮೆನನ್‌, ಒಂದೇ ವರ್ಷದಲ್ಲಿ ಇದಕ್ಕೆ ಗುಡ್‌ಬೈ ಹೇಳಿದ್ದರು. ಬಳಿಕ ಅಂಪಾಯರ್‌ ಆಗುವತ್ತ ಒಲವು ತೋರಿದರು. ಬಿಸಿಸಿಐ ಆಯೋಜಿಸಿದ ಅನೇಕ ಪಂದ್ಯಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡರು.

ನಿತಿನ್‌ ಮೆನನ್‌ ಮೂಲತಃ ಮಧ್ಯ ಪ್ರದೇಶದವರು. ರಾಜ್ಯದ ಪರ ಕೇವಲ 2 ಲಿಸ್ಟ್‌ ಎ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಇವರ ತಂದೆ ಮಾಜಿ ಅಂತಾರಾಷ್ಟ್ರೀಯ ಅಂಪಾಯರ್‌ ನರೇಂದ್ರ ಮೆನನ್‌. 2006ರಲ್ಲಿ, ಬಿಸಿಸಿಐ 10 ವರ್ಷಗಳ ಬಳಿಕ ನಡೆಸಿದ ಅಂಪಾಯರಿಂಗ್‌ ಪರೀಕ್ಷೆಯಲ್ಲಿ ನಿತಿನ್‌ ಮೆನನ್‌ ತೇರ್ಗಡೆಯಾಗಿ ಈ ಎತ್ತರಕ್ಕೇರಿದ್ದಾರೆ.

“ಆರಂಭದಲ್ಲಿ ಕ್ರಿಕೆಟಿಗನಾಗುವತ್ತ ಒಲವು ಮೂಡಿದ್ದು ನಿಜ. ಆದರೆ ಒಂದೇ ವರ್ಷದಲ್ಲಿ ಆಟದಿಂದ ಹಿಂದೆ ಸರಿದು ಅಂಪಾಯರ್‌ ಆಗುವತ್ತ ಮುಂದುವರಿದೆ. ಇದಕ್ಕೆ ತಂದೆಯವರೂ ಪ್ರೋತ್ಸಾಹ ನೀಡಿದರು. ಯಶಸ್ಸು ಕೈಹಿಡಿದರೆ ಇದನ್ನೇ ವೃತ್ತಿಯಾಗಿ ತೆಗೆದುಕೊಳ್ಳುವಂತೆ ಸೂಚಿ ಸಿದರು. 2006ರಲ್ಲಿ ಬಿಸಿಸಿಐ ನಡೆಸಿದ ಅಂಪಾಯರ್ ಎಕ್ಸಾಮ್‌ನಲ್ಲಿ ತೇರ್ಗಡೆ ಯಾದೆ. ಈಗ ಅದೃಷ್ಟದ ಬಾಗಿಲು ತೆರೆ ದಿದೆ’ ಎಂಬುದಾಗಿ ನಿತಿನ್‌ ಮೆನನ್‌ ಹೇಳಿದರು.

ಐಸಿಸಿ ಎಲೈಟ್‌ ಪ್ಯಾನಲ್‌ನ ಅಂಪಾಯರ್
“ಅಲೀಮ್‌ ದಾರ್‌, ಕುಮಾರ ಧರ್ಮಸೇನ, ಮರೈಸ್‌ ಎರಾಸ್ಮಸ್‌, ಕ್ರಿಸ್‌ ಗಫಾನಿ, ಮೈಕಲ್‌ ಗಾಫ್, ರಿಚರ್ಡ್‌ ಇಲ್ಲಿಂಗ್‌ವರ್ತ್‌, ರಿಚರ್ಡ್‌ ಕ್ಯಾಟಲ್‌ಬರೊ, ನಿತಿನ್‌ ಮೆನನ್‌, ಬ್ರೂಸ್‌ ಆಕ್ಸೆನ್‌ಫೋರ್ಡ್‌, ಪಾಲ್‌ ರೀಫೆಲ್‌, ರಾಡ್‌ ಟ್ಯುಕರ್‌, ಜೋಯೆಲ್‌ ವಿಲ್ಸನ್‌.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿಜಯಪುರ ಜಿಲ್ಲೆಯಲ್ಲಿ 15 ದಿನ ಲಾಕಡೌನ್ ಗೆ ಮಾಜಿ ಸಚಿವ ಎಂ.ಬಿ.ಪಾಟೀಲ ಆಗ್ರಹ

ವಿಜಯಪುರ ಜಿಲ್ಲೆಯಲ್ಲಿ 15 ದಿನ ಲಾಕ್‍ಡೌನ್ ಗೆ ಮಾಜಿ ಸಚಿವ ಎಂ.ಬಿ.ಪಾಟೀಲ ಆಗ್ರಹ

ಐಶ್ವರ್ಯ ರೈ, ಮಗಳು ಆರಾಧ್ಯಗೂ ಕೋವಿಡ್ ಪಾಸಿಟವ್: ಜಯಾ ಬಚ್ಚನ್ ವರದಿ ನೆಗೆಟಿವ್

ಐಶ್ವರ್ಯ ರೈ, ಮಗಳು ಆರಾಧ್ಯಗೂ ಕೋವಿಡ್ ಪಾಸಿಟಿವ್: ಜಯಾ ಬಚ್ಚನ್ ವರದಿ ನೆಗೆಟಿವ್

diamond-mask

ಈ ಮಾಸ್ಕ್ ನ ಬೆಲೆ ಬರೋಬ್ಬರಿ 4 ಲಕ್ಷ: ಅಂತದ್ದೇನಿದೆ ಅಂತೀರಾ ? ಸುದ್ದಿ ಓದಿ

ಯೋಗೀಶ್ ಹತ್ಯೆ ಪ್ರಕರಣ: ಬಾಗಲಕೋಟೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಯೋಗೀಶ್ ಹತ್ಯೆ ಪ್ರಕರಣ: ಬಾಗಲಕೋಟೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಸಚಿವ ಕೋಟ

ರಾಜಧಾನಿ ಮಾದರಿಯಲ್ಲಿ ದ.ಕನ್ನಡ ಜಿಲ್ಲೆಯೂ ಲಾಕ್ ಡೌನ್? ಸಚಿವ ಕೋಟ ಸ್ಪಷ್ಟನೆ

ಬೆಂಗಳೂರಿನಿಂದ ಬಂದರೆ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕು: ಉಡುಪಿ ಜಿಲ್ಲಾಡಳಿತ ಮನವಿ

ಬೆಂಗಳೂರಿನಿಂದ ಬಂದರೆ ಹೋಮ್ ಕ್ವಾರಂಟೈನ್ ನಲ್ಲಿ ಇರಬೇಕು: ಉಡುಪಿ ಜಿಲ್ಲಾಡಳಿತ ಮನವಿ

ವಿಜಯಪುರ ಜಿಲ್ಲೆಯ ಜಲಾಶಯಗಳು ಭರ್ತಿ : ಹೆಚ್ಚಿನ ನೀರು ಕೃಷ್ಣಾ ನದಿಗೆ

ವಿಜಯಪುರ ಜಿಲ್ಲೆಯ ಜಲಾಶಯಗಳು ಭರ್ತಿ : ಹೆಚ್ಚಿನ ನೀರು ಕೃಷ್ಣಾ ನದಿಗೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ನಿವೃತ್ತ ಕ್ರೀಡಾಪಟುಗಳಿಗೆ ಆರ್ಥಿಕ ನೆರವು’ : ಕಿರಣ್‌ ರಿಜಿಜು

“ನಿವೃತ್ತ ಕ್ರೀಡಾಪಟುಗಳಿಗೆ ಆರ್ಥಿಕ ನೆರವು’ : ಕಿರಣ್‌ ರಿಜಿಜು

ಕ್ವಾರಂಟೈನ್‌ ನಿಯಮ ಉಲ್ಲಂಘನೆ : ಮೂವರು ಬಾಕ್ಸರ್‌ಗಳ ತನಿಖೆ

ಕ್ವಾರಂಟೈನ್‌ ನಿಯಮ ಉಲ್ಲಂಘನೆ : ಮೂವರು ಬಾಕ್ಸರ್‌ಗಳ ತನಿಖೆ

ಬಿಎಂಡಬ್ಲ್ಯು ಕಾರು ಮಾರಲು ಬಯಸಿದ ದ್ಯುತಿ

ಬಿಎಂಡಬ್ಲ್ಯು ಕಾರು ಮಾರಲು ಬಯಸಿದ ದ್ಯುತಿ

ಆಂಗ್ಲರ ನೆಲದಲ್ಲಿ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿ ವೆಸ್ಟ್ ಇಂಡೀಸ್

ಆಂಗ್ಲರ ನೆಲದಲ್ಲಿ ಐತಿಹಾಸಿಕ ಗೆಲುವಿನ ನಿರೀಕ್ಷೆಯಲ್ಲಿ ವೆಸ್ಟ್ ಇಂಡೀಸ್

ಟೀಂ ಇಂಡಿಯಾ ಮಾಜಿ ಆಟಗಾರನಿಗೂ ಕಾಡಿದ ಕೋವಿಡ್-19 ಸೋಂಕು

ಟೀಂ ಇಂಡಿಯಾ ಮಾಜಿ ಆಟಗಾರನಿಗೂ ಕಾಡಿದ ಕೋವಿಡ್-19 ಸೋಂಕು

MUST WATCH

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable


ಹೊಸ ಸೇರ್ಪಡೆ

ವಿಜಯಪುರ ಜಿಲ್ಲೆಯಲ್ಲಿ 15 ದಿನ ಲಾಕಡೌನ್ ಗೆ ಮಾಜಿ ಸಚಿವ ಎಂ.ಬಿ.ಪಾಟೀಲ ಆಗ್ರಹ

ವಿಜಯಪುರ ಜಿಲ್ಲೆಯಲ್ಲಿ 15 ದಿನ ಲಾಕ್‍ಡೌನ್ ಗೆ ಮಾಜಿ ಸಚಿವ ಎಂ.ಬಿ.ಪಾಟೀಲ ಆಗ್ರಹ

EDITION-TDY-3

ಮಕ್ಕಳ ಶ್ರವಣ ಶಕ್ತಿ

ಏಡ್ಸ್‌ ರೀತಿ ಕೋವಿಡ್‌ ವಿರುದ್ಧ ಹೋರಾಟ ಅಗತ್ಯ

ಏಡ್ಸ್‌ ರೀತಿ ಕೋವಿಡ್‌ ವಿರುದ್ಧ ಹೋರಾಟ ಅಗತ್ಯ

ಕೋವಿಡ್‌ ಸೋಂಕು “ಇನ್ನೂ ತೀವ್ರ ಸ್ವರೂಪ ಪಡೆದಿಲ್ಲ’ : ವಿಶ್ವಸಂಸ್ಥೆ ಎಚ್ಚರಿಕೆ

ಕೋವಿಡ್‌ ಸೋಂಕು “ಇನ್ನೂ ತೀವ್ರ ಸ್ವರೂಪ ಪಡೆದಿಲ್ಲ’ : ವಿಶ್ವಸಂಸ್ಥೆ ಎಚ್ಚರಿಕೆ

ನಮ್ಮ ಬೆನ್ನೆಲುಬು ಸದೃಢ, ಆರೋಗ್ಯಯುತವಾಗಿರಬೇಕೇ?

ನಮ್ಮ ಬೆನ್ನೆಲುಬು ಸದೃಢ, ಆರೋಗ್ಯಯುತವಾಗಿರಬೇಕೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.