
ICC ತಿಂಗಳ ಆಟಗಾರ : ಪಂತ್‌ಗೆ ಮೊದಲ ಗೌರವದ ಗರಿಮೆ, ಶಬ್ನಿಮ್ ಇಸ್ಮಾಯಿಲ್ ತಿಂಗಳ ಆಟಗಾರ್ತಿ
Team Udayavani, Feb 9, 2021, 6:30 AM IST

ದುಬಾೖ: ಐಸಿಸಿ ನೂತನವಾಗಿ ಆರಂಭಿಸಿದ “ತಿಂಗಳ ಆಟಗಾರ’ ಪ್ರಶಸ್ತಿಗೆ ಭಾರತದ ಪ್ರತಿಭಾನ್ವಿತ ವಿಕೆಟ್ ಕೀಪಿಂಗ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಭಾಜನರಾಗಿದ್ದಾರೆ. ಕಳೆದ ಆಸ್ಟ್ರೇಲಿಯ ಪ್ರವಾಸದ ವೇಳೆ ಕೊನೆಯ ಎರಡು ಟೆಸ್ಟ್‌ಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಾಹಸಕ್ಕಾಗಿ ಪಂತ್ ಅವ ರಿಗೆ ಜನವರಿ ತಿಂಗಳ ಗೌರವ ಒಲಿದು ಬಂತು. ವನಿತಾ ವಿಭಾಗದ ಪ್ರಶಸ್ತಿ ದಕ್ಷಿಣ ಆಫ್ರಿಕಾದ ಶಬಿ°ಮ್ ಇಸ್ಮಾ ಯಿಲ್ ಪಾಲಾಯಿತು.
ರಿಷಭ್ ಪಂತ್ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ 97 ರನ್ ಬಾರಿಸಿ ಭಾರತವನ್ನು ಸೋಲಿನಿಂದ ಪಾರುಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಬಳಿಕ ಬ್ರಿಸ್ಬೇನ್ ಪಂದ್ಯದಲ್ಲಿ ಅಜೇಯ 89 ರನ್ ಹೊಡೆದು ಭಾರತದ ಐತಿಹಾಸಿಕ ಗೆಲುವಿನ ರೂವಾರಿಯಾಗಿ ಮೂಡಿ ಬಂದಿದ್ದರು. ಪ್ರಶಸ್ತಿ ರೇಸ್‌ನಲ್ಲಿದ್ದ ಉಳಿದಿಬ್ಬರೆಂದರೆ ಜೋ ರೂಟ್ ಮತ್ತು ಪಾಲ್ ಸ್ಟರ್ಲಿಂಗ್.
ತಂಡಕ್ಕೆ ಅರ್ಪಣೆ
ಐಸಿಸಿಯ ಮೊದಲ “ತಿಂಗಳ ಆಟಗಾರ’ನಾಗಿ ಮೂಡಿಬಂದ ರಿಷಭ್ ಪಂತ್ ಈ ಪ್ರಶಸ್ತಿಯನ್ನು ತಂಡದ ಆಟಗಾರರಿಗೆ ಹಾಗೂ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.
“ಕ್ರೀಡಾಪಟುವೋರ್ವ ತಂಡದ ಗೆಲುವಿಗೆ ನೀಡುವ ಕೊಡುಗೆ ಅತ್ಯಂತ ಮಹತ್ವದ್ದು. ಇಂಥ ಪ್ರಶಸ್ತಿಯಿಂದ ಯುವ ಆಟಗಾರರಿಗೆ ಸ್ಫೂರ್ತಿ ಲಭಿಸುತ್ತದೆ. ಈ ಪ್ರಶಸ್ತಿಯನ್ನು ಆಸ್ಟ್ರೇಲಿಯದಲ್ಲಿ ಸರಣಿ ಜಯಿಸಿದ ತಂಡದ ಸದಸ್ಯರಿಗೆ ಮತ್ತು ಮತದಾನ ಮಾಡಿದ ಅಭಿಮಾನಿಗಳಿಗೆ ಅರ್ಪಿಸು ತ್ತೇನೆ’ ಎಂದು ಪಂತ್ ಹೇಳಿದರು.
ಶಬ್ನಿಮ್ ಗೆಲುವಿನ ರೂವಾರಿ
ದಕ್ಷಿಣ ಆಫ್ರಿಕಾದ ಬಲಗೈ ವೇಗಿ ಶಬಿ°ಮ್ ಇಸ್ಮಾಯಿಲ್ 7 ವಿಕೆಟ್ ಕೀಳುವ ಮೂಲಕ ಪಾಕಿಸ್ಥಾನ ವಿರುದ್ಧದ ಏಕದಿನ ಸರಣಿ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದಕ್ಕೂ ಮೊದಲು ನಡೆದ ಪಾಕ್ ಎದುರಿನ 2ನೇ ಟಿ20 ಪಂದ್ಯದಲ್ಲಿ 5 ವಿಕೆಟ್ ಉಡಾಯಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವನಿತಾ ಅಂಡರ್ 19 ವಿಶ್ವಕಪ್: ಕಿವೀಸ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ

ರಾಹುಲ್-ಅಥಿಯಾ ಮದುವೆಗೆ ದುಬಾರಿ ಗಿಫ್ಟ್ ಬಂದಿದ್ದು ನಿಜವೇ? ಇಲ್ಲಿದೆ ಸ್ಪಷ್ಟನೆ

ರನ್ನರ್ ಅಪ್ ಪ್ರಶಸ್ತಿಯೊಂದಿಗೆ ಸಾನಿಯಾ ಮಿರ್ಜಾ ಸುದೀರ್ಘ ಗ್ರ್ಯಾಂಡ್ ಸ್ಲ್ಯಾಮ್ ಪಯಣ ಅಂತ್ಯ

ಅ-19 ಮಹಿಳಾ ಟಿ20 ವಿಶ್ವಕಪ್: ಇಂದು ಭಾರತ-ನ್ಯೂಜಿಲೆಂಡ್ ಉಪಾಂತ್ಯ

ಪುರುಷರ ಹಾಕಿ ವಿಶ್ವಕಪ್: ಇಂದು ಸೆಮಿಫೈನಲ್ ಹೋರಾಟ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
