5 ತಿಂಗಳ ಶಿಶುವಿನ ಔಷಧ ಮೇಲಿನ 6 ಕೋಟಿ ತೆರಿಗೆ ಮನ್ನಾ ಮಾಡಿದ ಕೇಂದ್ರ ಸರಕಾರ
Team Udayavani, Feb 11, 2021, 7:40 AM IST
ಮುಂಬಯಿ: ನರಕೋಶಗಳಿಗೆ ಸಂಬಂಧಿಸಿದ ಸ್ಪೈನಲ್ ಮಸ್ಕಾಲರ್ ಅಟ್ರೋಫಿ (ಎಸ್ಎಂಎ) ಕಾಯಿಲೆಯಿಂದ ಬಳಲುತ್ತಿರುವ 5 ತಿಂಗಳ ಬಾಲೆಯ ಹೆತ್ತವರ ಮನವಿಯಂತೆ ಎಸ್ಎಂಎ ಔಷಧದ ಮೇಲಿದ್ದ 6 ಕೋಟಿ ರೂ. ಆಮದು ಸುಂಕ ಮತ್ತು ಜಿಎಸ್ಟಿಯನ್ನು ಕೇಂದ್ರ ಸರಕಾರ ಮನ್ನಾ ಮಾಡಿದೆ.
5 ತಿಂಗಳ ಬಾಲೆ ತೀರಾ ಕಾಮತ್ ಎಸ್ಎಂಎ- ಟೈಪ್ 1 ಕಾಯಿಲೆಯಿಂದ ಬಳಲುತ್ತಿದ್ದಾಳೆ. ಅಮೆರಿಕದಿಂದ ಆಮದು ಮಾಡಿಕೊಳ್ಳುವ “ಝೋಲ್ಗೆನ ಸ್ಮಾ’ ಔಷಧ ಬಹಳ ದುಬಾರಿಯಾಗಿದ್ದು, ಇದರ ವೆಚ್ಚ 16 ಕೋಟಿ ರೂ.! ಆಮದು ಸುಂಕ, ಜಿಎಸ್ಟಿ ಕಾರಣದಿಂದ 6 ಕೋಟಿ ರೂ. ಇದರಲ್ಲಿ ಸೇರ್ಪಡೆಯಾಗಿದ್ದ ಕಾರಣ, ನೊಂದ ಪೋಷಕರು ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದರು. “ಜೀವನಪರ್ಯಂತ ದುಡಿದರೂ ಈ ತೆರಿಗೆಯಷ್ಟು ದುಡಿಮೆ ಕಾಣುವುದು ನಮ್ಮಿಂದ ಅಸಾಧ್ಯ’ ಎಂದಿದ್ದರು.
ಪತ್ರ ವೈರಲ್ ಆಗಿದ್ದಲ್ಲದೆ, ಕಂದನ ಪೋಷಕರ ಮನವಿಗೆ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ಧ್ವನಿಗೂಡಿಸಿದ್ದರು. ಇದೀಗ ಈ ಮನವಿಗೆ ಕೇಂದ್ರ ಸರಕಾರ ಸ್ಪಂದಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ