ದೆಹಲಿಯಲ್ಲಿ ಕೋವಿಡ್ 19 ಲಾಕ್ ಡೌನ್ ಮತ್ತೆ ವಿಸ್ತರಿಸಬೇಡಿ: ಟ್ರೇಡರ್ಸ್ ಅಸೋಸಿಯೇಶನ್
ಕೋವಿಡ್ ಹಿನ್ನೆಲೆಯಲ್ಲಿ ಮೇ 17ರವರೆಗೂ ವಿಸ್ತರಿಸಿ ಆದೇಶ ಹೊರಡಿಸಿತ್ತು.
Team Udayavani, May 15, 2021, 10:51 AM IST
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಜಾರಿಗೊಳಿಸಿರುವ ಸಂಪೂರ್ಣ ಕೋವಿಡ್ 19 ಲಾಕ್ ಡೌನ್ ಅನ್ನು ತೆರವುಗೊಳಿಸುವಂತೆ ಟ್ರೇಡರ್ಸ್ ಅಸೋಸಿಯೇಶನ್(ಎನ್ ಡಿಟಿಎ) ಶನಿವಾರ(ಮೇ 15) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಲ್ಲಿ ಪತ್ರದ ಮೂಲಕ ಮನವಿ ಮಾಡಿಕೊಂಡಿದೆ.
ಇದನ್ನೂ ಓದಿ:ಕೋವಿಡ್ ಸೋಂಕಿಗೆ ತಂದೆ – ತಾಯಿ ಬಲಿ : ಅನಾಥವಾದ 5 ದಿನದ ಮಗು.!
ಹಂತ, ಹಂತವಾಗಿ ಕಠಿಣ ನಿರ್ಬಂಧಗಳನ್ನು ವಿಧಿಸುವ ಮೂಲಕ ಮಾರುಕಟ್ಟೆಗಳನ್ನು ತೆರೆಯಬೇಕು ಎಂದು ಎನ್ ಡಿಟಿಎ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಗೆ ಬರೆದ ಪತ್ರದಲ್ಲಿ ಒತ್ತಾಯಿಸಿದೆ.
ದೆಹಲಿಯಲ್ಲಿ ಕೋವಿಡ್ 19 ಸೋಂಕು ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿತ್ತು. ಕೋವಿಡ್ ಸೋಂಕು ಕ್ಷಿಪ್ರವಾಗಿ ಹರಡುವುದನ್ನು ತಡೆಗಟ್ಟಲು ಸಂಪೂರ್ಣ ಲಾಕ್ ಡೌನ್ ಘೋಷಿಸುವುದು ಅನಿವಾರ್ಯ ಎಂದು ಕೇಜ್ರಿವಾಲ್ ಈ ಮೊದಲು ಘೋಷಿಸಿದ್ದರು.
ರಾಜಧಾನಿಯಲ್ಲಿ ಮೇ 10ರವರೆಗೆ ಲಾಕ್ ಡೌನ್ ನಿರ್ಬಂಧ ಜಾರಿಗೊಳಿಸಿದ್ದು, ನಂತರ ಕೋವಿಡ್ ಹಿನ್ನೆಲೆಯಲ್ಲಿ ಮೇ 17ರವರೆಗೂ ವಿಸ್ತರಿಸಿ ಆದೇಶ ಹೊರಡಿಸಿತ್ತು.