ವಾವಾ ಸುರೇಶ್ ಆರೋಗ್ಯ ಸ್ಥಿತಿ ಸ್ವಲ್ಪ ಚೇತರಿಕೆ: ಮುಂದಿನ 48 ಗಂಟೆ ನಿರ್ಣಾಯಕ
Team Udayavani, Feb 3, 2022, 11:45 AM IST
ಕೊಟ್ಟಾಯಂ : ಇಲ್ಲಿನ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಖ್ಯಾತ ಉರಗ ರಕ್ಷಕ ವಾವಾ ಸುರೇಶ್ ಅವರ ಆರೋಗ್ಯ ಸ್ಥಿತಿಯಲ್ಲಿ ಗುರುವಾರ ಸ್ವಲ್ಪ ಸುಧಾರಣೆಯಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ವೆಂಟಿಲೇಟರ್ ಮೂಲಕವೇ ಉಸಿರಾಟ ಮಾಡಿಸಲಾಗುತ್ತಿದ್ದು, ಮುಂದಿನ 48 ಗಂಟೆಗಳು ನಿರ್ಣಾಯಕ ಎಂದು ವೈದ್ಯರು ತಿಳಿಸಿರುವುದಾಗಿ ಕೇರಳದ ಮಾಧ್ಯಮಗಳು ವರದಿ ಮಾಡಿವೆ.
ಮಂಗಳವಾರ ಅವರು ಸ್ವಯಂ ಉಸಿರಾಟ ಆರಂಭಿಸಿದ್ದರು, ಅವರ ಹೃದಯ ಮತ್ತು ಶ್ವಾಸಕೋಶ ಸಾಮಾನ್ಯ ಸ್ಥಿತಿಗೆ ಮರಳಿವೆ ಎಂದು ಆಸ್ಪತ್ರೆಯ ಸುಪರಿಟೆಂಡೆಂಟ್ ಡಾ.ಟಿ.ಕೆ.ಜಯಕುಮಾರ್ ತಿಳಿಸಿದ್ದಾರೆ.
ವಿಷವೇರಿದ ಪರಿಣಾಮವಾಗಿ ಬುಧವಾರ ಅವರು ಸ್ಪಂದಿಸುವುದನ್ನು ನಿಲ್ಲಿಸಿದ್ದು, ಉಸಿರಾಟದಲ್ಲೂ ಏರು ಪೇರಾಗಿತ್ತು. ರಕ್ತದ ಒತ್ತಡವೂ ಕುಸಿದಿತ್ತು. ಆದರೆ 11 ಗಂಟೆಯ ವೇಳೆಗೆ ಸ್ವಲ್ಪ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ: ಹಾವನ್ನು ತಪ್ಪಿಸಲು ಹೋಗಿ ನಾಲೆಗೆ ಉರುಳಿದ ಕಾರು; ಪತ್ನಿ ಸಾವು, ಪತಿ ಪಾರು
ಆಸ್ಪತ್ರೆಗೆ ದಾಖಲು ಮಾಡುವ ಮುನ್ನವೇ ಹೃದಯಾಘಾತವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಡಾ.ಟಿ.ಕೆ.ಜಯಕುಮಾರ್ ಸೇರಿದಂತೆ ನುರಿತ ತಜ್ಞರು ವಾವಾ ಸುರೇಶ್ ಅವರನ್ನು ಬದುಕಿಸಲು ಎಲ್ಲಾ ಶತ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಸೋಮವಾರ ಕೊಟ್ಟಾಯಂನ ಕುರಿಚಿ ಗ್ರಾಮದಲ್ಲಿ ನಾಗರ ಹಾವು ಹಿಡಿಯಲು ಹೋದಾಗ ಗೋಣಿ ಚೀಲಕ್ಕೆ ಹಾಕಲು ಯತ್ನಿಸುತ್ತಿದ್ದಾಗ ಬಲತೊಡೆಗೆ ಕಚ್ಚಿತ್ತು. ಆ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಸಾವಿರಾರು ಮಂದಿ ಅವರ ಅಭಿಮಾನಿಗಳು ಸಾಹಸಿ ಉರಗ ಸ್ನೇಹಿ ಬದುಕಿ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಶ್ಚಿಮ ಬಂಗಾಳದಲ್ಲಿ ಭೀಕರ ರಸ್ತೆ ಅಪಘಾತ : ಎಂಟು ಮಹಿಳೆಯರು ಸೇರಿ 9 ಮಂದಿ ಸಾವು
ಭಾರತದಲ್ಲಿ ಮಹಿಳಾ ಪೈಲಟ್ ಪ್ರಮಾಣ ಅಮೆರಿಕಕ್ಕಿಂತ ಹೆಚ್ಚು!
ಮಹಾರಾಷ್ಟ್ರ: ಧ್ವನಿವರ್ಧಕಗಳಲ್ಲಿ ಪ್ರತೀ ದಿನವೂ ರಾಷ್ಟ್ರಗೀತೆ
ಹಾಲಿ ಸಂಸತ್ ಭವನದಲ್ಲಿ ಕೊನೇ ಅಧಿವೇಶನ? ಚಳಿಗಾಲದ ಅಧಿವೇಶನ ಹೊಸ ಸಂಸತ್ ಭವನದಲ್ಲಿ ಸಾಧ್ಯತೆ
ಬೆಂಗಳೂರು ತೆಕ್ಕೆಗೆ ಅಮೆರಿಕದ ಶೀಫರ್: 110 ವರ್ಷಗಳ ಇತಿಹಾಸ ಇರುವ ಅಮೆರಿಕ ಪೆನ್ ಕಂಪನಿ
MUST WATCH
ಹೊಸ ಸೇರ್ಪಡೆ
ಪಡುಬಿದ್ರಿ : ಬೆಳ್ಳಂಬೆಳಗ್ಗೆ ತೆಂಗಿನೆಣ್ಣೆ ಮಿಲ್ ನಲ್ಲಿ ಅಗ್ನಿ ಅವಘಡ : ಲಕ್ಷಾಂತರ ರೂ. ಹಾನಿ
ಮನೆ ಗೋಡೆ ಕುಸಿದು ಯುವಕ ಸಾವು : ಕೆಲ ದಿನದ ಹಿಂದಷ್ಟೇ ಹೆರಿಗೆಯಾಗಿದ್ದ ತಾಯಿ, ಮಗು ಪಾರು
ಗಾಳಿ ಮಳೆಯ ಅಬ್ಬರ : ಮೂಡಿಗೆರೆ, ಕಳಸ ತಾಲೂಕಿನ ಶಾಲೆಗಳಿಗೆ ರಜೆ
ಫಾಝಿಲ್ ಹತ್ಯೆ ಆರೋಪಿಗಳನ್ನು ನಿಯಮ ಮೀರಿ ನಡೆಸಿಕೊಂಡಿಲ್ಲ : ಆಯುಕ್ತರ ಸ್ಪಷ್ಟನೆ
ನಾವುಂದ-ಬಡಾಕೆರೆ : ಇಳಿಯದ ನೆರೆ ನೀರು