ಶ್ರೀಮಂತ ಅಭ್ಯರ್ಥಿ! ನಿಖಿಲ್ ಕುಮಾರಸ್ವಾಮಿ ಎಷ್ಟು ಕೋಟಿಯ ಒಡೆಯ ಗೊತ್ತಾ?
Team Udayavani, Mar 25, 2019, 5:18 PM IST
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ಸ್ವಾಮಿ ಸೋಮವಾರ ಭರ್ಜರಿ ಬಲಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸಿದ್ದು, ಏತನ್ಮಧ್ಯೆ ನಿಖಿಲ್ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರ ಕೂಡಾ ಹೊರಬಿದ್ದಿದೆ.
ನಿಖಿಲ್ ಕುಮಾರಸ್ವಾಮಿ ಒಟ್ಟು ಆಸ್ತಿ ಮೌಲ್ಯ 17,53,87, 761.77 ಕೋಟಿ ರೂಪಾಯಿ. ನಿಖಿಲ್ ಹೆಸರಿನಲ್ಲಿರುವ ಸಾಲ 2,40, 04,283 ರೂಪಾಯಿ. 3 ಕೋಟಿ 11 ಲಕ್ಷ ರೂ. ಮೌಲ್ಯದ ಒಂದು ಐಶಾರಾಮಿ ಕಾರು ಹೊಂದಿದ್ದಾರೆ.
ಅಲ್ಲದೇ 4.55 ಲಕ್ಷ ರೂಪಾಯಿ ಮೌಲ್ಯದ 200 ಗ್ರಾಂ ಚಿನ್ನ ಹೊಂದಿದ್ದು, 23 ಲಕ್ಷ ರೂಪಾಯಿ ಮೌಲ್ಯದ 2 ಐಶಾರಾಮಿ ಕಾರುಗಳು ಇದ್ದಿರುವುದಾಗಿ ನಿಖಿಲ್ ಅಫಿಡವಿತ್ ನಲ್ಲಿ ಘೋಷಿಸಿಕೊಂಡಿದ್ದಾರೆ.