ಮನೆ ಕುಸಿತ, ಹನುಮಾನ್‌ ನಗರದಲ್ಲಿ ಕಡಲ್ಕೊರೆತ, ಅಪಾರ ಹಾನಿ

ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

Team Udayavani, Jul 23, 2019, 5:17 AM IST

22KSDE11

ಕಾಸರಗೋಡು: ಮಳೆ ಬಿರುಸುಗೊಂಡಿದ್ದು ಈ ಹಿನ್ನೆಲೆಯಲ್ಲಿ ಸೋಮವಾರ ಶಾಲಾ ಕಾಲೇಜುಗಳಿಗೆ ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ. ಇದೇ ವೇಳೆ ಕಾಸರಗೋಡು ಜಿಲ್ಲೆಯಲ್ಲಿ ಭಾರೀ ಮಳೆ ಸಾಧ್ಯತೆಯ ಹಿನ್ನೆಲೆಯಲ್ಲಿ ಮಂಗಳವಾರ ಕೇಂದ್ರ ಹವಾಮಾನ ವಿಭಾಗ “ರೆಡ್‌’ಅಲರ್ಟ್‌ ಘೋಷಿಸಿದೆ.

ಸೋಮವಾರ ಕಾಸರಗೋಡು ಜಿಲ್ಲೆಯಲ್ಲಿ “ಆರೆಂಜ್‌’ ಅಲರ್ಟ್‌ ಘೋಷಿಸಲಾಗಿತ್ತು. ಶಾಲಾ ಕಾಲೇಜುಗಳಿಗೆ ರಜೆ ಸಾರಿದ್ದರೂ, ಸರಕಾರಿ ಕಚೇರಿಗಳಿಗೆ ರಜೆ ಅನ್ವಯಿಸಿಲ್ಲ. ವಯನಾಡು, ಕಲ್ಲಿಕೋಟೆ, ಮಲಪ್ಪುರಂ, ಪಾಲಾ^ಟ್‌, ತೃಶೂರು, ಎರ್ನಾಕುಳಂ ಮತ್ತು ಇಡುಕ್ಕಿ ಜಿಲ್ಲೆಗಳಲ್ಲೂ ಸೋಮವಾರ ಆರೆಂಜ್‌ ಅಲರ್ಟ್‌ ಘೋಷಿಸಲಾಗಿತ್ತು. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ತೀವ್ರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಣ್ಣೂರು, ಕಲ್ಲಿಕೋಟೆ ಮತ್ತು ವಯನಾಡು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಪಾಲಾ^ಟ್‌, ಕೋಟ್ಟಯಂ, ಆಲಪ್ಪುಳ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಮಂಗಳವಾರ ಭಾರೀ ಮಳೆ ಸುರಿಯುವ ಸಾದ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳು, ಹೊಳೆ ಬದಿಗಳು, ಜಲಾಶಯಗಳು, ತೋಡಗಳು ಮತ್ತು ಬಯಲು ಪ್ರದೇಶಗಳು ಮತ್ತು ಪರಿಸರ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಭಾರೀ ಪ್ರಮಾಣದಲ್ಲಿ ಕೃಷಿ ನಾಶನಷ್ಟ ಸಂಭವಿಸಿದೆ.

ಹಲವೆಡೆ ಭೂಕುಸಿತ, ಗೋಡೆ ಕುಸಿತ, ಬಿರುಗಾಳಿಗೆ ಮರಗಳು ಬಿದ್ದಿದೆ. ‌ ಹಲವೆಡೆ ಸಾರಿಗೆಗೆ ಅಡಚಣೆ ಉಂಟಾಯಿತು. ತೀವ್ರ ಕಡಲ್ಕೊರೆತ ತಲೆದೋರಿದೆ. ಕಡಲ್ಕೊರೆತ ಮುಂದುವರಿಯುತ್ತಿರುವ ಮುಸೋಡಿ, ಮಣಿಮುಂಡ, ಶಾರದಾನಗರ, ಹನುಮಾನ್‌ ನಗರಗಳಲ್ಲಿ ಸೋಮವಾರವೂ ಮುಂದುವರಿದಿದೆ. ಇಲ್ಲಿನ ಕೆಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಉಳಿದ ಮನೆ ಮಂದಿ ಭೀತಿಯಲ್ಲಿದ್ದಾರೆ. ಕಾಸರಗೋಡಿನ ಕಸಬಾ ಕಡಪ್ಪುರದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.

ಜರಿದು ಬೀಳುವ ಸ್ಥಿತಿಯಲ್ಲಿ
ಬದಿಯಡ್ಕ ಕರಿಂಬಿಲ ರಸ್ತೆ ಬದಿಯ ಗುಡ್ಡೆ ಜರಿದು ಬೀಳುವ ಭೀತಿಯಲ್ಲಿದೆ. ಇಲ್ಲಿನ ಸಂಕದ ಬಳಿ ಒಂದು ಭಾಗದ ಗುಡ್ಡೆ ಜರಿದು ನಿಂತಿದ್ದು, ಯಾವುದೇ ಕ್ಷಣದಲ್ಲಿ ರಸ್ತೆಗೆ ಬೀಳುವ ಸಾಧ್ಯತೆಯಿದೆ.

ಮನೆ ಕುಸಿದು ಐವರಿಗೆ ಗಾಯ
ಸೋಮವಾರ ಮುಂಜಾನೆ ಬಳಾಲ್‌ ಗ್ರಾಮ ಪಂಚಾಯತ್‌ನ ಕನಕಪಳ್ಳಿಯಲ್ಲಿ ಹೆಂಚಿನ ಮನೆಯೊಂದು ಕುಸಿದು ಬಿದ್ದು 5 ಮಂದಿಗೆ ಗಾಯವಾಗಿದೆ.

ಮನೆಯ ಮೇಲ್ಛಾವಣಿ ಕುಸಿದು ಬಿದ್ದಿತ್ತು. ಇಲ್ಲಿನ ಪಿ.ಸಿ.ರಾಜು, ಅವರ ಪತ್ನಿ ಅನು ಮತ್ತು ಮೂವರು ಮಕ್ಕಳು ಗಾಯಗೊಂಡರು.

ಮನೆ ಕುಸಿತ
ಬದಿಯಡ್ಕದ ಪಳ್ಳತ್ತಡ್ಕ ಚಾಳಕ್ಕೋಡ್‌ ನಿವಾಸಿ ಕರಿಯ ಬೈರ ಅವರ ಹೆಂಚಿನ ಮನೆ ಕುಸಿದು ಬಿದ್ದಿದೆ. ಜು.21 ರಂದು ರಾತ್ರಿ 8 ಗಂಟೆಗೆ ಮನೆ ಕುಸಿದು ಬಿದ್ದಿದ್ದು, ಶಬ್ದ ಕೇಳಿ ಮನೆ ಮಂದಿ ಹೊರಗೆ ಓಡಿದುದರಿಂದ ಪಾರಾದರು.

ಚೆಂಗಳ ಎರ್ದುಂಕಡವಿನಲ್ಲಿ ನೀರು ಆವೃತಗೊಂಡು ಅಲ್ಲಿನ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ಅನಾಹುತ ಉಂಟಾದಲ್ಲಿ ರಕ್ಷಾ ಕಾರ್ಯಾಚರಣೆಗಾಗಿ ವಿಪತ್ತು ನಿವಾರಣೆ ಪಡೆಯನ್ನು ಸದಾ ಸಜ್ಜುಗೊಳಿಸಲಾಗಿದೆ.

ಜಿಲ್ಲೆಯಲ್ಲಿ 1,06,51,100 ರೂ.ಕೃಷಿ ನಾಶನಷ್ಟ
ಬಿರುಸಿನ ಗಾಳಿಮಳೆಗೆ ಜಿಲ್ಲೆಯಲ್ಲಿ ಈ ವರೆಗೆ 1,06,51,100 ರೂ.ನ ಕೃಷಿ ನಾಶ ಸಂಭವಿಸಿದೆ. ಕಳೆದ 24 ತಾಸುಗಳಲ್ಲಿ ಮಾತ್ರ 11,71,500 ರೂ.ನ ಕೃಷಿ ಹಾನಿ ಗಣನೆ ಮಾಡಲಾಗಿದೆ. ಈ ಅವಧಿಯಲ್ಲಿ 34.26 ಹೆಕ್ಟೇರ್‌ನ ಕೃಷಿ ನಷ್ಟ ಸಂಭವಿಸಿದೆ. 158.75705 ಹೆಕ್ಟೇರ್‌ ಜಾಗದಲ್ಲಿ ಬೆಳೆ ಹಾನಿ ಉಂಟಾಗಿದೆ.

ಜಿಲ್ಲೆಯಲ್ಲಿ 9135 ಅಡಕೆ, 12,082 ಬಾಳೆ, 1886 ತೆಂಗು, 3159 ರಬ್ಬರ್‌ ಸಸಿಗಳು, 1043 ಕರಿಮೆಣಸು ಬಳ್ಳಿಗಳು ಹಾನಿಗೀಡಾಗಿವೆ. 29 ಹೆಕ್ಟೇರ್‌ ಭತ್ತದ ಕೃಷಿ, 18.2 ಹೆಕೇrರ್‌ ತರಕಾರಿ ಕೃಷಿ ನಾಶಗೊಂಡಿದೆ. ಪರಪ್ಪ ಬ್ಲಾಕ್‌ನಲ್ಲಿ ಅತ್ಯಧಿಕ ಕೃಷಿ ನಾಶ ಸಂಭವಿಸಿದೆ. ಈ ವಲಯದಲ್ಲಿ 2838 ಅಡಕೆ, 5712 ಬಾಳೆ, 2791 ರಬ್ಬರ್‌ ಮರಗಳು ಧರೆಗುರುಳಿವೆ. ಪರಪ್ಪ ಬ್ಲಾಕ್‌ನಲ್ಲಿ ಅತ್ಯಧಿಕ (18.2 ಹೆಕ್ಟೇರ್‌)ತರಕಾರಿ ಕೃಷಿ ನಾಶವಾಗಿದೆ. ಭತ್ತದ ಕೃಷಿ ಕಾಂಞಂಗಾಡ್‌ ಬ್ಲಾಕ್‌ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ(20 ಹೆಕೇrರ್‌) ಹಾನಿಗೊಂಡಿದೆ. ಮಂಜೇಶ್ವರದಲ್ಲಿ 5 ಹೆಕ್ಟೇರ್‌, ಕಾಸರಗೋಡಿನಲ್ಲಿ ಮೂರು, ಪರಪ್ಪದಲ್ಲಿ ಒಂದು ಹೆಕ್ಟೇರ್‌ ಕೃಷಿ ನಾಶವಾಗಿದೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.