ಕಾವೇರಿದ ಕಣದಲ್ಲಿ ಹೆಚ್ಚುತ್ತಿದೆ ಗೆಲುವಿನ ನಿರೀಕ್ಷೆ

ಮಂಜೇಶ್ವರ ಉಪಚುನಾವಣೆ

Team Udayavani, Oct 19, 2019, 5:21 AM IST

KAS-ELE

ಬದಿಯಡ್ಕ: ಕೇರಳದ ಉತ್ತರಭಾಗವಾದ ಮಂಜೇಶ್ವರದಲ್ಲಿ ಬಹು ಭಾಷಾ ಭೂಮಿಯ ಹೆಚ್ಚಿನ ಎಲ್ಲ ಭಾಷೆಗಳ ನ್ನಾಡುವ ಜನರಿದ್ದಾರೆ. ಮಲೆಯಾಳ ಹೊರತು ಕನ್ನಡ, ತುಳು, ಉರ್ದು, ಮರಾಟಿ, ಕೊಂಕಣಿ, ಬ್ಯಾರಿ, ಹಿಂದಿ ಮೊದಲಾದವುಗಳಿಗೆ ಹೆಚ್ಚು ಪ್ರಾಧಾನ್ಯತೆ. ಮಂಡಲದ 8ರಲ್ಲಿ 6 ಪಂಚಾಯತ್‌ಗಳಲ್ಲೂ ಮಲಯಾಳ ಕ್ಕಿಂತಲೂ ಅನ್ಯ ಭಾಷೆ ಮಾತನಾಡುವವರೆ ಇರುವುದು ಆದುದರಿಂದ ಈ ಪ್ರದೇಶದ ಜನರ ಹಿತಾಸಕ್ತಿಯ ಮೇಲೆ ಫಲಿತಾಂಶ ನಿರ್ಣಾಯಕವಾಗಲಿದೆ.

ಪ್ರಚಾರದಲ್ಲೂ ಕಲೆಯ ಬಲೆ
ಗಾಯಕರಾಗಿರುವ ಯುಡಿಎಫ್‌ ಅಭ್ಯರ್ಥಿ ಎಂ.ಸಿ. ಕಮರುದ್ದೀನ್‌ ಹಾಡು ಹಾಡಿ ಜನರ ಮನ ಒಲಿಸಲು ಪ್ರಯತ್ನಿಸಿದರೆ ಯಕ್ಷಗಾನ ಕಲಾವಿದರಾಗಿರುವ ಎಲ್‌ಡಿಎಫ್‌ ಅಭ್ಯರ್ಥಿ ಶಂಕರ ರೈ ಭಾಗವತಿಕೆ ಯನ್ನು ಅಸ್ತ್ರವನ್ನಾಗಿ ಬಳಸಿಯೂ, ಕನ್ನಡಿಗನೆಂಬ ರೀತಿಯಲ್ಲೂ ಮತ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಎನ್‌ಡಿಎ ಅಭ್ಯರ್ಥಿ ರವೀಶ ತಂತ್ರಿ ತನ್ನ ಮಾತು ಹಾಗೂ ಸಂಘಟಿತ ಮನೋಭಾವದಿಂದ ಜನರತ್ತ ಸಾಗುತ್ತಿದ್ದಾರೆ. ಕಲೆಯ ಬಲೆ ಬೀಸಿ ಮತದಾರರ ಮನಗೆಲ್ಲುವ ಸಾಹಸದಲ್ಲಿದ್ದಾರೆ ಅಭ್ಯರ್ಥಿಗಳು. ಆದರೂ ಒಟ್ಟಿನಲ್ಲಿ ಯಾರ ಪ್ರಯತ್ನ ಗೆಲ್ಲುವುದು ಎಂಬುದು ಜನರ ಬೆರಳ ತುದಿಯಲ್ಲಿ ನಿರ್ಧಾರವಾಗುತ್ತದೆ.

ಶಬರಿಮಲೆ ಚರ್ಚೆ
ರಾಷ್ಟ್ರೀಯ ಹೆದ್ದಾರಿಯ ಈಗಿನ ದುಸ್ಥಿತಿ, ಉನ್ನತ ಚಿಕಿತ್ಸೆಗಾಗಿ ಮಂಗಳೂರಿಗೆ ಹೋಗುವ ದುರವಸ್ಥೆಯಿಂದ ರೋಸಿ ಹೋಗಿರುವ ಜನರು ಈ ಚುನಾವಣೆಗೆ ಯಾವ ರೀತಿಯಲ್ಲಿ ಸ್ಪಂಧಿಸುತ್ತಾರೆ ಎನ್ನುವುದು ಒಗಟಾಗಿದೆ. ಈ ನಡುವೆ ಪ್ರಚಾರ ಕಣದಲ್ಲಿ ಅತ್ಯಂತ ಮಹತ್ವ ಪಡೆದ ವಿಚಾರವೆಂದರೆ ಶಬರಿಮಲೆ ಮಾತ್ರ..! ತಾನೊಬ್ಬ ದೆ„ವ ವಿಶ್ವಾಸಿಯಾಗಿದ್ದು, ಶಬರಿಮಲೆಗೆ ಹೋಗಿರುವುದಾಗಿ ಎಲ್‌ಡಿಎಫ್‌ ಅಭ್ಯರ್ಥಿ ಶಂಕರ ರೈಯವರು ಸಮರ್ಥಿಸಿಕೊಂಡಾಗ ವಿಶ್ವಾಸಿಗಳ ಮತ ಹಿಡಿಯಲಿರುವ ತಂತ್ರವೆಂದು ಕಾಂಗ್ರೆಸ್‌ ಆರೋಪಿಸುವಾಗ ಶಬರಿಮಲೆಯ ವಿವಾದದಲ್ಲಿ ಕಾಂಗ್ರೆಸ್‌ ವಿಶ್ವಾಸಿಗಳ ಪರವಾಗಿ ನಿಂತಿದ್ದರೂ ತಾನು ಮಾತ್ರ ವಿಶ್ವಾಸ ಸಂರಕ್ಷಣೆ ಮಾಡಿರುವುದಾಗಿ ಬಿಜೆಪಿ ನಾಟಕವಾಡುತ್ತಿದೆ ಎಂದು ಯುಡಿಎಫ್‌ ಟàಕಿಸಿದಾಗ ಎಲ್‌ಡಿಎಫ್‌ ಮತ್ತು ಯುಡಿಎಫ್‌ ಒಂದೇ ನಾಣ್ಯದ ಎರಡು ಮುಖಗಳೆಂದು ಬಿಜೆಪಿಯು ಆದಕ್ಕೆ ಪೂರ್ಣವಿರಾಮವಿಟ್ಟಿತು. ಆದುದರಿಂದ ಎಲ್ಲಾ ಪಕ್ಷಗಳೂ ಶಬರಿಮಲೆಯನ್ನು ಮತಗಳಿಸುವ ಅಸ್ತ್ರವನ್ನಾಗಿ ಬಳಸುವ ಪ್ರಯತ್ನ ಮಾಡಿದ್ದು ಇದರಿಂದ ಸ್ಪಷ್ಟವಾಗುತ್ತದೆ.

ಯುಡಿಎಫ್‌ನ ಆತ್ಮವಿಶ್ವಾಸ
ಲೋಕಸಭಾ ಮತದಾನದಲ್ಲಿ ರಾಜ್‌ಮೋಹನ್‌ ಉಣ್ಣಿತ್ತಾನ್‌ರವರಿಗೆ ಮಂಜೇಶ್ವರ ದಲ್ಲಿ 42.39% ಮತ ಲಭಿಸಿರುವುದು ಯುಡಿಎಫ್‌ಗೆ ಒಂದು ನೀರೀಕ್ಷೆಯಾಗಿದೆ. ಎನ್‌ಡಿಎಗೆ 35.48% ಆದರೆ, ಎಲ್‌ಡಿಎಫ್‌ಗೆ 20.38% ಮಾತ್ರವೇ ಲಭಿಸಿದ್ದು. 8 ರಲ್ಲಿ 6 ಪಂಚಾಯತುಗಳಲ್ಲೂ ಯುಡಿಎಫ್‌ನ ಅಧಿಕಾರವಿರುವುದು ಯುಡಿಎಫ್‌ನ ಗೆಲು ವಿನ ನಿರೀಕ್ಷೆಯನ್ನು ಬಲಪಡಿಸಿದೆ.

ಮಂಡಲವನ್ನು ಅಧೀನದಲ್ಲಿರಿಸುವತ್ತಾ ಬಿಜೆಪಿ
ಹಿಂದಿನಿಂದಲೂ ಬಿಜೆಪಿ ಗುರಿಯಾಗಿ ಟ್ಟಿರುವ ಪ್ರದೇಶವಾದ ಮಂಜೇಶ್ವರದಲ್ಲಿ 1987 ರಿಂದ ಪ್ರಾರಂಭಗೊಂಡು ಈವರೆಗೂ ನಡೆದ 7 ಮತದಾನಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. 2009ರ ಲೋಕಸಭಾ ಮತದಾನದಲ್ಲಿ 31.28%, 2011ರಲ್ಲಿ ನಿಯಮ ಸಭಾ ಮತದಾನದಲ್ಲಿ 33.08%, 2016 ರಲ್ಲಿ 35.74% ಎಂಬ ಶತಮಾನಗಳಲ್ಲಿ ಮತಗಳಿಕೆಯಲ್ಲಾದ ಹೆಚ್ಚಳ ಈ ಬಾರಿಯ ವಿಜಯ ಸಾಧ್ಯತೆಯನ್ನು ಹೆಚ್ಚಿಸಿದೆ.

ಪುನರಾವರ್ತಿಸುವತ್ತಾ ಸಿಪಿಎಂ
ಕಳೆದ ಕೆಲವು ವರ್ಷಗಳಿಂದ ತƒತೀಯ ಸ್ಥಾನದಲ್ಲೇ ಇರುವ ಎಲ್‌ಡಿಎಫ್‌ 2006 ರಲ್ಲಿ ಅತೀ ಹೆಚ್ಚು ಮತದಾನಗಳನ್ನು ಪಡೆದು ಗೆದ್ದು ಬಂದ ಪ್ರದೇಶವಾಗಿತ್ತು ಮಂಜೇಶ್ವರ ಎಂಬುದನ್ನು ಮರೆಯುವಂತಿಲ್ಲ. ಅಂದು ಸಿ.ಎಚ್‌. ಕುಂಞುಂಬು ಅವರಿಗೆ ಲಭಿಸಿದ ಅದೇ ಮತಗಳನ್ನು ಈ ಮತದಾನದಲ್ಲೂ ನಿರೀಕ್ಷಿಸುತ್ತಿದ್ದಾರೆ ಎಂಬುದು ಗಮನೀಯ ಅಂಶ. 70-80ರಲ್ಲಿ ಎಡಪಕ್ಷಗಳ ಅಧೀನದಲಿದ್ದ ಈ ಪ್ರದೇಶದಲಿ ಮತ್ತೂಮ್ಮೆ ಆಡಳಿತದ ಚುಕ್ಕಾಣಿ ಹಿಡಿಯುವ ಪ್ರಯತ್ನದಲ್ಲಿದೆ ಎಲ್‌ಡಿಎಫ್‌.

ಅಬ್ಬರದ ಪ್ರಚಾರಕ್ಕೆ
ಸಾಟಿಯಿಲ್ಲದ ಸಾಥ್‌
ರಾಜ್ಯದ ಮುಖ್ಯಮಂತ್ರಿ ಎಲ್‌ಡಿಎಫ್‌ನ ಪ್ರಚಾರಾರ್ಥ ಜಿಲ್ಲೆಗೆ ಆಗಮಿಸಿ ಜನರ ಮನ ಒಲಿಸುವ ಪ್ರಯತ್ನ ಮಾಡಿದರೆ ಯುಡಿಎಫ್‌ ಪರವಾಗಿ ಪ್ರತಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ, ರಾಜ್ಯಾಧ್ಯಕ್ಷ ಮುಂತಾದ ಘಟಾನುಘಟಿಗಳು ಮಂಡಲಕ್ಕಾಗಮಿಸಿ ಅಭ್ಯರ್ಥಿಯ ಪರ ಮತಯಾಚಿಸಿದರು. ಇನ್ನೂ ಒಂದು ಹೆಜ್ಜೆ ಮುಂದಿಟ್ಟ ಎನ್‌ಡಿಎ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ, ನಳಿನ್‌ ಕುಮಾರ್‌ ಕಟೀಲು, ಯುವ ಸಂಸದ ರಾಜಕೀಯ ಮಿಂಚು ತೇಜಸ್‌ ಸೂರ್ಯ, ಮಿಝೋರಾಂ ಮಾಜಿ ರಾಜ್ಯಪಾಲ ಕುಮ್ಮಾನಂ ರಾಜಶೇಖರನ್‌ ಮುಂತಾದ ಘಟಾನುಘಟಿಗಳನ್ನು ಪ್ರಚಾರ ಕಣಕ್ಕಿಳಿಸುವಲ್ಲಿ ಯಶಸ್ವಿಯಾಯಿತು.

ಒಟ್ಟಿನಲ್ಲಿ ಈ ರಾಜಕೀಯ ಜಂಜಾಟ ದಲ್ಲಿ ಸಾಮಾನ್ಯ ಜನರು ಪಡುವ ಕಷ್ಟ ಕಡಿಮೆಯಾಗಿ, ಸರಕಾರ ನೀಡುವ ಸವಲತ್ತುಗಳನ್ನು ಜನರಿಗೆ ದೊರಕುವಂತೆ ಮಾಡುವ ನಾಯಕ ಗೆದ್ದುಬರಲಿ ಎಂಬ ಆಶಯ ಮಂಜೇಶ್ವರ ಮಂಡಲದ ಜನಸಾಮಾನ್ಯರದ್ದು. ಆದರೂ ಎಲ್ಲರೂ ಮತದಾನದಲ್ಲಿ ಪಾಲ್ಗೊಂಡು ಮತ ಚಲಾಯಿಸುವಂತಾಗಲಿ, ಜನರ ಕನಸು ನನಸಾಗುವ ದಿನಗಳು ಬರಲಿ ಎಂಬ ಹಾರೈಕೆಯಷ್ಟೇ ನಮ್ಮದು. ಕನ್ನಡಾಂಬೆಯ ಸೇವೆಯನ್ನು ಮಾಡುವಂತವರಾಗಿರಲಿ.

ಮುಸ್ಲಿಂ ಲೀಗ್‌ ಜಿಲ್ಲಾಧ್ಯಕ್ಷ, ಯು.ಡಿ.ಎಫ್‌. ಜಿಲ್ಲಾಧ್ಯಕ್ಷ, ಮಾಪಿಳ್ಳ ಪಾಟ್‌ ಗಾಯಕ, ನಿಯಮ ಸಭೆಗೆ ಪ್ರಥಮ ಬಾರಿಯಾಗಿ ಸ್ಪರ್ಧಿಸುತ್ತಿ ರುವುದು.
ಎಂ.ಸಿ. ಕಮರುದ್ದೀನ್‌
(59)ಯು.ಡಿ.ಎಫ್‌.

ಬಿ.ಜೆ.ಪಿ. ರಾಜ್ಯ ಸಮಿತಿಯ ಸದಸ್ಯ, ಉತ್ತಮ ಭಾಷಣ ಗಾರರು.2016 ರಲ್ಲಿ ನಿಯಮ ಸಭೆಗೂ, 2019 ರಲ್ಲಿ ಲೋಕ ಸಭೆಗೂ ಸ್ಪರ್ಧಿಸಿದ್ದಾರೆ.
ರವೀಶ ತಂತ್ರಿ ಕುಂಟಾರು
(52)ಎನ್‌.ಡಿ.ಎ.

ಸಿ.ಪಿ.ಎಂ. ಜಿಲ್ಲಾ ಸಮಿತಿ ಸದಸ್ಯ, ಅಧ್ಯಾಪಕರು, ಯಕ್ಷಗಾನ ಕಲಾವಿದರು ಹಾಗೂ ಜಿಲ್ಲಾ ಪಂಚಾಯತಿನ ಸದಸ್ಯರಾಗಿದ್ದರು.
ಶಂಕರ ರೈ
(59) ಎಲ್‌.ಡಿ.ಎಫ್‌.

-ಆಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.