ನಗರದಲ್ಲಿ ಟ್ರಾಫಿಕ್‌ ಮಾಸ್ಟರ್‌ ಪ್ಲಾನ್‌


Team Udayavani, Feb 4, 2020, 5:59 AM IST

03KSDE13

ಕಾಸರಗೋಡು: ನಗರದ ರಸ್ತೆಗಳಲ್ಲಿ ಅಲ್ಲಲ್ಲಿ ಕಂಡು ಬರುವ “ಯು’ ತಿರುವು ಹೊರತುಪಡಿಸಿ ಒಂದು ಕಿಲೋ ಮೀಟರ್‌ ಅಂತರದಲ್ಲಿ ಮಾತ್ರವೇ “ಯು’ ತಿರುವು ಗಳನ್ನು ಕೈಗೊಳ್ಳಬೇಕೆಂದೂ, ಕಾಸರಗೋಡು ನಗರದಲ್ಲಿ ಟ್ರಾಫಿಕ್‌ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಬೇಕೆಂದೂ ತಾಲೂಕು ಅಭಿ ವೃದ್ಧಿ ಸಮಿತಿ ನಿರ್ದೇಶಿಸಿದೆ.

ನಗರಸಭೆ ವ್ಯಾಪ್ತಿಯ ವ್ಯಾಪಾರ ಸಂಸ್ಥೆಗಳ ಪಾರ್ಕಿಂಗ್‌ ಸ್ಥಳವನ್ನು ವ್ಯಾಪಾರ ಅಗತ್ಯಕ್ಕಾಗಿ ಉಪ ಯೋಗಿಸುವುದರಿಂದಾಗಿ ವಾಹನ ಗಳನ್ನು ನಿಲ್ಲಿಸಲು, ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿರುವುದಾಗಿ ತಾಲೂಕು ಸಮಿತಿ ಸಭೆ ಆತಂಕ ವ್ಯಕ್ತಪಡಿಸಿದೆ.

ಆಟೋ ರಿಕ್ಷಾಗಳ ಅನಧಿಕೃತ ಪಾರ್ಕಿಂಗ್‌ ಹೊರತುಪಡಿಸುವುದಕ್ಕೆ ನಗರ ದಲ್ಲಿ ಸಂಚರಿಸುವ ಆಟೋ ರಿಕ್ಷಾಗಳಿಗೆ ಪ್ರತ್ಯೇಕ ನಂಬ್ರ ನೀಡಿ ಅದನ್ನು ರಿಕ್ಷಾದಲ್ಲಿ ಪ್ರದರ್ಶಿಸುವುದಕ್ಕೆ ಕ್ರಮ ಸ್ವೀಕರಿಸಬೇಕೆಂದು ನಗರಸಭೆಗೆ ಸಭೆಯಲ್ಲಿ ಆಗ್ರಹಿಸಿದೆ. ಹಳೆಯ ಪ್ರಸ್‌ ಕ್ಲಬ್‌ ಬಳಿ ಟ್ರಾಫಿಕ್‌ ಪೊಲೀಸರಿಗೆ ಟ್ರಾಫಿಕ್‌ ಕೇಂದ್ರ ಸ್ಥಾಪಿಸಬೇಕೆಂದು ಆಗ್ರಹಿಸಲಾಯಿತು. ತಾಲೂಕು ವ್ಯಾಪ್ತಿಯಲ್ಲಿ ಕಳೆದ ವರ್ಷ 180 ರಷ್ಟು ಮಂದಿಗೆ ಹಾವು ಕಚ್ಚಿರುವು ದಾಗಿಯೂ, ಈ ಹಿನ್ನೆಲೆಯಲ್ಲಿ ಸೆರೆ ಹಿಡಿದ ಹಾವುಗಳನ್ನು ಜನವಾಸ ಕೇಂದ್ರಗಳಲ್ಲಿ ಬಿಡಬಾರದೆಂದು ಅರಣ್ಯ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಆಗ್ರಹಿ ಸಿದೆ. ನಗರಸಭೆಯ ವ್ಯಾಪ್ತಿಯಲ್ಲಿ ಸಿನಿಮಾ ಪೋಸ್ಟರ್‌ಗಳನ್ನು ಪ್ರದರ್ಶಿಸುವ ಕ್ರಮ ಹೊರತುಪಡಿಸಬೇಕೆಂದು ನಗರ ಸಭೆಯ ಮುದ್ರೆಯಿರುವ ಪೋಸ್ಟರ್‌ಗಳನ್ನು ಮಾತ್ರವೇ ನಿಶ್ಚಿತ ಸ್ಥಳದಲ್ಲಿ ಪ್ರದರ್ಶಿಸಬೇಕೆಂದು ಸಭೆ ನಿರ್ದೇಶಿಸಿದೆ. ಆಹಾರ ಸಾಮಗ್ರಿಗಳಿಗೆ ತೋಚಿದಂತೆ ಅಪರಿಮಿತ ಬೆಲೆ ವಸೂಲು ಮಾಡುವ ಹೊಟೇಲ್‌ಗ‌ಳ ವಿರುದ್ಧವೂ, ದರ ಪಟ್ಟಿ ಪ್ರದರ್ಶಿಸಲು ಹಿಂದೇಟು ಹಾಕುವವರ ವಿರುದ್ಧವೂ ಕಠಿಣ ಕ್ರಮ ಸ್ವೀಕರಿಸಬೇಕೆಂದು, ಈ ರೀತಿಯ ಹೊಟೇಲ್‌ಗ‌ಳಿಗೆ ಪದೆ ಪದೆ ದಾಳಿ ನಡೆಸಿ ಕಾನೂನು ಪ್ರಕಾರವಾಗಿ ಕಾರ್ಯಾಚರಿಸುವುದಕ್ಕೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.

ನೀರ್ಚಾಲು – ಸಾಯಿ ಮಂದಿರ – ಮುಗು ರಸ್ತೆಯನ್ನು ಈ ಆರ್ಥಿಕ ವರ್ಷದ ಬಜೆಟ್‌ನಲ್ಲಿ 1,45,60,000 ರೂ. ಮೀಸಲಿಡಲಾಗಿದೆಯೆಂದು ಇನ್ನಷ್ಟು ಮೊತ್ತ ಈ ರಸ್ತೆಗೆ ಮಂಜೂರು ಮಾಡುವುದಕ್ಕಾಗಿ ಪ್ರೊಫೋಸಲ್‌ ನೀಡಲಾಗಿದೆಯೆಂದು ಶಾಸಕ ಎನ್‌.ಎ.ನೆಲ್ಲಿಕುನ್ನು ಸಭೆಯಲ್ಲಿ ತಿಳಿಸಿದರು. ಪ್ರಸ್‌ ಕ್ಲಬ್‌ ಜಂಕ್ಷನ್‌ನಲ್ಲಿ ದಾರಿ ಸೂಚಕ, ರಿಪ್ಲಕ್ಟರ್‌ಗಳನ್ನು ಸ್ಥಾಪಿಸುವುದಕ್ಕೆ ಕ್ರಮ ಕೈಗೊಳ್ಳಲಾಗಿದೆಯೆಂದು ಸಭೆಯಲ್ಲಿ ನಗರಸಭಾ ಅಧಿಕಾರಿಗಳು ತಿಳಿಸಿದರು.

ತಾಲೂಕು ಕಾನ್ಫರೆನ್ಸ್‌ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಶಾಸಕ ಎನ್‌.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ತಹಶೀಲ್ದಾರ್‌ ಎ.ವಿ. ರಾಜನ್‌, ವಾರಿಜಾಕ್ಷನ್‌, ಇಲಾಖೆಯ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದರು.

ಜನರಿಗೆ ಸಮಸ್ಯೆ
ಕಾಸರಗೋಡು ಮೀನು ಮಾರು ಕಟ್ಟೆಯ ಕಟ್ಟಡದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣ ನಡೆಸಿದ ಕಾರಣ ಮಲಿನ ಜಲ ಕಟ್ಟಿ ನಿಲ್ಲುತ್ತಿದ್ದು, ಮೀನು ಮಾರಾಟ ಮಾಡುವವರಿಗೆ, ಗ್ರಾಹಕರಿಗೆ ಸಮಸ್ಯೆ ಉಂಟಾಗುತ್ತಿದೆ. ಮೀನು ಮಾರುಕಟ್ಟೆಯಲ್ಲಿ ಸಾರ್ವಜ ನಿಕ ಸ್ಥಳವನ್ನು ಮಾರಾಟಕ್ಕಾಗಿ ಉಪಯೋಗಿಸುವುದ ರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಟ್ಟಿದೆ.

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.